ETV Bharat / state

ಬಳ್ಳಾರಿಯಲ್ಲಿ ಮತ್ತೆ ಏಳು ಮಂದಿಗೆ ಕೊರೊನಾ ಪಾಸಿಟಿವ್​, ಸೋಂಕಿತರ ಸಂಖ್ಯೆ 13ಕ್ಕೆ - Seven Corona positive cases

125 ಮಂದಿಯನ್ನ ಕಳೆದ ಹದಿನಾಲ್ಕು ದಿನ ಗಳಕಾಲ ಜಿಲ್ಲಾಡಳಿತ ಹೊಸಪೇಟೆ ಹೋಟೆಲ್​​ವೊಂದರಲ್ಲಿ ಕ್ವಾರಂಟೈನ್​ ಮಾಡಿತ್ತು. ಹನ್ನೆರಡನೇಯ ದಿನ ಪರೀಕ್ಷಿಸಿದಾಗ ಏಳು ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

Seven Corona positive cases detected in Bellary
ಬಳ್ಳಾರಿಯಲ್ಲಿ ಏಳು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ
author img

By

Published : Apr 17, 2020, 9:07 AM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಏಳು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ತಲುಪಿದೆ.

ಹೊಸಪೇಟೆ ನಗರದಲ್ಲಿ ಈ ಹಿಂದೆ ನಾಲ್ಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ ಏಳು ಮಂದಿಗೆ ಸೋಂಕು ದೃಢಪಟ್ಟಿದ್ದು, ಹೊಸಪೇಟೆ ನಗರದಲ್ಲಿಯೇ ಒಟ್ಟಾರೆ 11 ಪಾಸಿಟಿವ್ ಪ್ರಕರಣಗಳು ಪತ್ತೆಯಾದಂತಾಗಿದೆ. ಹೊಸಪೇಟೆ ಎಸ್.ಆರ್.ನಗರದ ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು ಪತ್ತೆಯಾಗಿತ್ತು.

ಅದೇ ಕುಟುಂಬದ ಪ್ರಾಥಮಿಕ ಸಂಪರ್ಕ ಹೊಂದಿದ್ದ 25 ಮಂದಿ ಸೇರಿದಂತೆ ಅಂದಾಜು 125 ಮಂದಿಯನ್ನು ಕಳೆದ 14 ದಿನ ಗಳಕಾಲ ಜಿಲ್ಲಾಡಳಿತ ಹೊಸಪೇಟೆ ಹೋಟೆಲ್​​ನಲ್ಲಿ ಕ್ವಾರಂಟೈನ್​ ಮಾಡಲಾಗಿತ್ತು. 12ನೇ ದಿನಕ್ಕೆ ಟೆಸ್ಟ್ ಮಾಡಿದಾಗ ಏಳು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಅಲ್ಲದೇ, ಹೊಸಪೇಟೆ ಎಸ್.ಆರ್.ನಗರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕ್ರಮ ಸಂಖ್ಯೆ 89, 90, 91 ರೋಗಿಗಳನ್ನ ಜಿಲ್ಲಾಸ್ಪತ್ರೆಯ ಕೋವಿಡ್ - 19 ಐಸೊಲೇಷನ್​ ವಾರ್ಡನಲ್ಲಿ ಇರಿಸಲಾಗಿದ್ದು, ಅವರೊಂದಿಗೆ ಸಂಪರ್ಕ ಹೊಂದಿರುವ ಏಳು ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ತಿಳಿದುಬಂದಿದೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.