ಬಳ್ಳಾರಿ: ಲಾಕ್‌ಡೌನ್ ಹಿನ್ನೆಲೆ ಜಿಲ್ಲೆಯ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ರಕ್ತದ ಅಭಾವವಿರುವುದರಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ವಿಮ್ಸ್ನ ನಿರ್ದೇಶಕ ದೇವಾನಂದ್ ನೇತೃತ್ವದಲ್ಲಿ ಇಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ 10ಕ್ಕೂ ಹೆಚ್ಚು ರೆಡ್ ಕ್ರಾಸ್ ಸ್ವಯಂ ಸೇವಕರು ರಕ್ತದಾನ ಮಾಡಿದರು. ವಿಮ್ಸ್ ನಿರ್ದೇಶಕ ದೇವಾನಂದ್ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ರಕ್ತದ ಅವಶ್ಯಕತೆಯಿದೆ. ರಕ್ತದ ಅಭಾವವಿರುವುದರಿಂದ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬಹುದು. ಜಿಲ್ಲಾದ್ಯಂತ ಲಾಕ್‌ಡೌನ್ ಇರುವುದರಿಂದ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಇಚ್ಛಿಸುವುವರು ಈ ಕಾರ್ಯಕ್ರಮದ ಸಂಯೋಜಕರಾದ ಹರಿಶಂಕರ್ ಅಗರ್‌ವಾಲ್ ಅವರ ದೂ.ಸಂ. 9886000954ಕ್ಕೆ ಸಂಪರ್ಕಿಸಿದಲ್ಲಿ ಮನೆಯ ಹತ್ತಿರವೇ ವಾಹನವನ್ನು ಕಳುಹಿಸಲಾಗುವುದು. ರಕ್ತದಾನ ಮಾಡುವ ವ್ಯಕ್ತಿಯನ್ನು ಸ್ಕ್ರೀನಿಂಗ್ ಮಾಡಿಸಿ, ವ್ಯಕ್ತಿಯ ಆರೋಗ್ಯ ತಪಾಸಣೆ ನಡೆಸಿ ವ್ಯಕ್ತಿಗೆ ಯಾವುದೇ ರೋಗವಿಲ್ಲದೇ ಸುರಕ್ಷಿತವಾಗಿದ್ದಾನೆ ಎಂದು ತಿಳಿದ ನಂತರವೇ ಅವರ ರಕ್ತವನ್ನು ಸ್ವೀಕರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಾ. ಇಂದ್ರಾಣಿ, ಬ್ಲಡ್ ದೇವಣ್ಣ, ರೆಡ್ ಕ್ರಾಸ್ ಕಾರ್ಯದರ್ಶಿ ಎಂ.ಎ.ಷಕೀಬ್ ಸೇರಿದಂತೆ ಹಶ್ರಿತಾ ಅಗರ್‌ವಾಲ್, ಹಶೀನ್ ಅಗರ್‌ವಾಲ್, ಶ್ರೀಧರ್ ಕವಾಲಿ, ವಿಷ್ಣು,ಪ್ರದೀಪ್,ಅಶೋಕ ಜೈನ್ ಮತ್ತಿತ್ತರರು ಉಪಸ್ಥಿತರಿದ್ದರು.