ETV Bharat / state

ಬಳ್ಳಾರಿ ಡಿಸಿ ಕಚೇರಿಯ 13 ಸಿಬ್ಬಂದಿಗಳಿಗೆ ಕೊರೊನಾ: ಕಚೇರಿಗೆ ಸ್ಯಾನಿಟೈಸರ್​ ಸಿಂಪಡಣೆ

ಡಿಸಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ 13 ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಕಚೇರಿಗಳಿಗೆ ಸ್ಯಾನಿಟೈಸಿಂಗ್​ ಮಾಡಲಾಯಿತು.

ಕಚೇರಿಗೆ ಸ್ಯಾನಿಟೈಸರ್​ ಸಿಂಪಡಣೆ
ಕಚೇರಿಗೆ ಸ್ಯಾನಿಟೈಸರ್​ ಸಿಂಪಡಣೆ
author img

By

Published : Jul 21, 2020, 5:03 PM IST

ಬಳ್ಳಾರಿ : ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ 13 ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇಂದು ಬೆಳಗ್ಗೆ ಕಚೇರಿಗೆ ಸಂಪೂರ್ಣ ಸ್ಯಾನಿಟೈಸರ್​ ಸಿಂಪಡಿಸಿ, ಬಳಿಕ ಸಿಬ್ಬಂದಿಗಳನ್ನು ಒಳಗೆ ಬಿಡಲಾಯಿತು.

ಕಚೇರಿಗೆ ಸ್ಯಾನಿಟೈಸರ್​ ಸಿಂಪಡಣೆ

ಆರಂಭದಲ್ಲಿ ಜಿಲ್ಲಾಧಿಕಾರಿ ಆಪ್ತ ಸಹಾಯಕ ಹಾಗೂ ಓರ್ವ ಸಿಬ್ಬಂದಿಗೆ ಮತ್ತು ನಗರಾಭಿವೃದ್ಧಿ ಕೋಶದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ನಂತರದಲ್ಲಿ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಗಂಟಲು ದ್ರವ ಪರೀಕ್ಷೆ ಮಾಡಲಾಯಿತು. ನಿನ್ನೆ ವರದಿ ಬಂದಿದ್ದು, 10 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಾಗಾಗಿ ಇಂದು ಕಚೇರಿಗಳನ್ನು ಸ್ಯಾನಿಟೈಸಿಂಗ್​ ಮಾಡಿದರು.

ನೆಗೆಟಿವ್​ ವರದಿ ಬಂದ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದು, ಜಿಲ್ಲಾಧಿಕಾರಿಗಳು ಹೋಮ್​ ಕ್ವಾರಂಟೈನ್​ಗೆ ಒಳಗಾಗಿದ್ದು, ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.