ಬಳ್ಳಾರಿ: ಅದಿರು ಸಾಗಾಟದ ಲಾರಿಗಳಿಂದ ಟ್ರಾಫಿಕ್ ಜಾಮ್ ಆಗುತ್ತಿರುವ ಬಗ್ಗೆ ಕೆಂಡಾಮಂಡಲರಾದ ಸಂಡೂರು ಶಾಸಕ ತುಕರಾಂ ಚಾಲಕರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಂಡೂರು-ಕೂಡ್ಲಿಗಿ ರಾಜ್ಯ ಹೆದ್ದಾರಿಯಲ್ಲಿ ಅದಿರು ಲಾರಿಗಳ ಸಂಚಾರ ಮಿತಿ ಮೀರಿದ್ದು, ಲಾರಿ ಚಾಲಕರು ಇತರ ವಾಹನಗಳಿಗೆ ದಾರಿ ಬಿಡದ ಹಿನ್ನೆಲೆ ಪ್ರತಿನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು.
ಈ ಕುರಿತು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದಿದ್ದರು. ಇಂದು ಸ್ವತಃ ಫೀಲ್ಡಿಗಿಳಿದ ಶಾಸಕ ತುಕರಾಂ, ಲಾರಿ ಚಾಲಕರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು.