ETV Bharat / state

ರೌಡಿಶೀಟರ್​​ ಯಲ್ಲಪ್ಪ ಕೊಲೆ ಪ್ರಕರಣ: ಪಾಲಿಕೆ ಮಾಜಿ ಸದಸ್ಯ ಸೇರಿ 11 ಆರೋಪಿಗಳ ಬಂಧನ - ರೌಡಿಶೀಟರ್ ಯಲ್ಲಪ್ಪ ಕೊಲೆ ಪ್ರಕರಣ ಮಾಜಿ ಪಾಲಿಕೆ ಸದಸ್ಯ ಸೇರಿ 11 ಆರೋಪಿಗಳ ಬಂಧನ

ಫೆಬ್ರವರಿ 26ರಂದು ಜಿಲ್ಲೆಯ ದೇವಿನಗರದಲ್ಲಿ ಹಳೇ ವೈಷಮ್ಯದ ಹಿನ್ನೆಲೆ ಯಲ್ಲಪ್ಪ ಎಂಬುವವರನ್ನ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ.

Rowdy Sheeter Yallappa murder case
ರೌಡಿಶೀಟರ್ ಯಲ್ಲಪ್ಪ ಕೊಲೆ ಪ್ರಕರಣ
author img

By

Published : Mar 9, 2020, 8:09 AM IST

ಬಳ್ಳಾರಿ: ರೌಡಿಶೀಟರ್ ಯಲ್ಲಪ್ಪ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳನ್ನು ಕೌಲ್ ಬಜಾರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 26ರಂದು ಬಳ್ಳಾರಿಯ ದೇವಿನಗರದಲ್ಲಿ ಹಳೇ ವೈಷಮ್ಯದ ಹಿನ್ನೆಲೆ ಯಲ್ಲಪ್ಪನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕುರಿತು ಯಲ್ಲಪ್ಪನ ಪತ್ನಿ ಕೌಲ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಘಟನೆ ನಡೆದು ವಾರ ಕಳೆದ ಬಳಿಕ ಪಾಲಿಕೆ ಮಾಜಿ ಸದಸ್ಯ ಅಂದ್ರಾಳು ಸೀತಾರಾಮ, ನರಸಿಂಹ, ವೆಂಕಟೇಶ, ನಾಗಾರ್ಜುನ, ಮಂಜು, ಗೋವಿಂದ, ಪ್ರಸಾದ, ಸಲಮಾನ್, ಮಾಬುಬಾಷಾ, ಚಿದಾನಂದ, ಮಾರೆಪ್ಪ ಎಂಬುವರರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಳಿಕ ವಿಮ್ಸ್ ಆಸ್ಪತ್ರೆಯಲ್ಲಿ ಆರೋಪಿಗಳ ಆರೋಗ್ಯ ತಪಾಸಣೆ ಮಾಡಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನೂಲ್ ಜಿಲ್ಲೆಯ ಪತ್ತಿಕೊಂಡ ಮೂಲದ ಇನ್ನೂ ಮೂವರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.