ಬಳ್ಳಾರಿ: ತಾಲೂಕಿನ ಕಮ್ಮರಚೇಡು ಗ್ರಾಮದ ಹೃದಯ ಭಾಗದಲ್ಲಿರುವ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಇಲ್ಲಿನ ಜನರ ಗೋಳು ಕೇಳೋರಿಲ್ಲದಂತಾಗಿದೆ.
ಬಳ್ಳಾರಿ ತಾಲೂಕಿನ ವೈ.ಬೂದಿಹಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಕಮ್ಮರಚೇಡು ಮತ್ತು ಬುರ್ರ ನಾಯಕನಹಳ್ಳಿ ಜನತೆಗೆ ಅಗತ್ಯ ಸೌಲಭ್ಯಗಳು ಲಭ್ಯವಾಗುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.
ಈ ರಸ್ತೆಯ ದುರಸ್ತಿ ಕಾರ್ಯವು ಕಳೆದ ಮೂರು ತಿಂಗಳಿಂದಲೂ ನೆನೆಗುದಿಗೆ ಬಿದ್ದಿದೆ. ಈವರೆಗೆ ಅಭಿವೃದ್ಧಿ ಮಾಡಲು ಜಿಲ್ಲಾಡಳಿತವಾಗಲಿ ಅಥವಾ ಗ್ರಾಮ ಪಂಚಾಯಿತಿಯಾಗಲಿ ಕ್ರಮ ಕೈಗೊಂಡಿಲ್ಲ ಎಂದು ಇಲ್ಲಿನ ಜನರು ಆಕ್ರೋಶ ಹೊರಹಾಕಿದ್ದಾರೆ.