ETV Bharat / state

ಬಳ್ಳಾರಿಯ ನಡುರಸ್ತೆಯಲ್ಲಿ ರಿಯಲ್​ ಎಸ್ಟೇಟ್​​ ಉದ್ಯಮಿಯ ಬರ್ಬರ ಕೊಲೆ.. ಭಯಾನಕ ದೃಶ್ಯ ಸೆರೆ - ಈಟಿವಿ ಭಾರತ ಕನ್ನಡ

ರಿಯಲ್ ಎಸ್ಟೇಟ್​ ಮತ್ತು ಅಕ್ಕಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

bly_01_murder cc
ಬಳ್ಳಾರಿಯಲ್ಲಿ ಬರ್ಬರ ಹತ್ಯೆ
author img

By

Published : Sep 28, 2022, 10:57 AM IST

Updated : Sep 28, 2022, 3:35 PM IST

ಬಳ್ಳಾರಿ: ನಗರದ ರೇಡಿಯೋ ಪಾರ್ಕ್ ಬಳಿ ದಲ್ಲಾಳಿಯೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಈ ಪ್ರಕರಣದಿಂದ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ.

ಮಂಜುನಾಥ್(42) ಅಲಿಯಾಸ್ ಅಕ್ಕಿ ಮಂಜು ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಂಜು ಅಕ್ಕಿ ವ್ಯಾಪಾರ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ತಡರಾತ್ರಿವರೆಗೂ ಮಂಜು ಬರುವುದನ್ನು ನೋಡುತ್ತ ಕಾದು ಕುಳಿತ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹಂತಕರು ಸಿನಿಮೀಯ ಶೈಲಿಯಲ್ಲಿ ಸ್ಕೆಚ್ ಹಾಕಿ, ಕೊಚ್ಚಿ ಕೊಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಂಜುನಾಥ್ ಪಡಿತರ ಅಕ್ಕಿಯನ್ನು ಜನರಿಂದ ಕಡಿಮೆ ದರಕ್ಕೆ ಪಡೆದು ಸಂಗ್ರಹಿಸಿ, ಬ್ಲಾಕ್​​ನಲ್ಲಿ ಮಾರಾಟ ಮಾಡುತ್ತಿದ್ದ. ಅಕ್ರಮ ಅಕ್ಕಿ ಸಾಗಾಟ ಸಂಬಂಧ ಬಳ್ಳಾರಿಯ ವಿವಿಧ ಠಾಣೆಯಲ್ಲಿ ಮಂಜುನಾಥ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಇತ್ತೀಚೆಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಮಂಜುನಾಥ್ ಮಧ್ಯವರ್ತಿಯಾಗಿದ್ದ ಎಂದು ತಿಳಿದುಬಂದಿದೆ.

ಸಿಸಿಟಿವಿಯಲ್ಲಿ ಸೆರೆಯಾದ ಕೊಲೆ ದೃಶ್ಯ

ಬುಧವಾರ ನಸುಕಿನ ಸಮಯದಲ್ಲಿ ರೇಡಿಯೋ ಪಾರ್ಕ್ ಸಮೀಪ ಮಂಜುನಾಥ್ ನಡೆದುಕೊಂಡು ಹೋಗುತ್ತಿದ್ದಾಗ ಮಂಜುನಾಥ್ ಕೊಲೆ ಮಾಡಲಾಗಿದೆ. ಮಂಜುನಾಥ್ ಓಡಿ ಹೋಗಲು ಯತ್ನಿಸಿದರೂ ಬಿಡದ ದುಷ್ಕರ್ಮಿಗಳು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿದ್ದಾರೆ. ಹಂತಕರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಸ್ಥಳಕ್ಕೆ ಬಳ್ಳಾರಿ ಎಸ್​​ಪಿ ಸೈದುಲ್ ಅದಾವತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 'ಹಂತಕರ ಬಂಧನಕ್ಕೆ ಪೊಲೀಸ್​ ತಂಡ ರಚಿಸಿದ್ದೇವೆ. ಶ್ರೀಘ್ರದಲ್ಲೇ ಆರೋಪಿಗಳ ಬಂಧನವಾಗಲಿದೆ' ಎಂದು ಎಸ್​​ಪಿ ತಿಳಿಸಿದ್ದಾರೆ‌.

ಇದನ್ನೂ ಓದಿ: ಕುಡಿದು ಮಲಗಿದ್ದ ವೃದ್ಧನ ಮೇಲೆ ಕಲ್ಲುಎತ್ತಿ ಹಾಕಿ ಕೊಲೆ: ಕೃತ್ಯ ಸಿಸಿಟಿವಿಯಲ್ಲಿ ಸೆರೆ

Last Updated : Sep 28, 2022, 3:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.