ETV Bharat / state

ದರೋಜಿ ಕರಡಿಧಾಮ ಪರಿಸರದಲ್ಲಿ ಅಪರೂಪದ 'ಸೈಬೀರಿಯನ್ ರೂಬಿಥ್ರೋಟ್' ಪಕ್ಷಿ ಪ್ರತ್ಯಕ್ಷ - ಸೈಬೀರಿಯನ್ ರೂಬಿಥ್ರೋಟ್ ಪಕ್ಷಿ

ಸೈಬೀರಿಯನ್ ರೂಬಿಥ್ರೋಟ್ ಪಕ್ಷಿಯನ್ನು ಎಂದಾದರೂ ನೋಡಿದ್ದೀರಾ?. ವಿಜಯನಗರಕ್ಕೆ ವಲಸೆ ಬಂದಿದ್ದು, ದರ್ಶನ ನೀಡಿದೆ.

Siberian rubythroat bird
ಸೈಬೀರಿಯನ್ ರೂಬಿಥ್ರೋಟ್ ಪಕ್ಷಿ
author img

By

Published : Feb 3, 2023, 2:59 PM IST

ವಿಜಯನಗರ : ಚಳಿಗಾಲದ ವಲಸೆಗಾರ ಸೈಬೀರಿಯನ್ ರೂಬಿಥ್ರೋಟ್ (ಕ್ಯಾಲಿಯೋಪ್) ಎಂಬ ಅಪರೂಪದ ಪಕ್ಷಿ ಹಂಪಿ ಪ್ರದೇಶದಲ್ಲಿ ಕಾಣಸಿಕ್ಕಿದೆ. ಸೈಬೀರಿಯಾದ ಕೋನಿಫೆರಸ್ ಕಾಡುಗಳಲ್ಲಿ ಸಂತಾನೋತ್ಪತ್ತಿ ಮಾಡುವ ಈ ಪಕ್ಷಿಯು ಭಾರತ, ಥಾಯ್ಲೆಂಡ್, ಇಂಡೋನೇಷ್ಯಾ ಮತ್ತು ಬಾಂಗ್ಲಾ ದೇಶದಲ್ಲಿ ಇದನ್ನು ಚಳಿಗಾಲದ ವಲಸೆ ಪಕ್ಷಿ ಎಂದು ಕರೆಯುತ್ತಾರೆ. ವಿಜಯನಗರದಲ್ಲಿ ಛಾಯಾಗ್ರಾಹಕ ನಾಗರಾಜ್‌.ಡಿ ಅವರು ದರೋಜಿ ಕರಡಿಧಾಮದ ಪರಿಸರದಲ್ಲಿ ಈ ಬಾನಡಿಯ ಫೋಟೋ ಕ್ಲಿಕ್ಕಿಸಿದ್ದಾರೆ. ಈ ಪಕ್ಷಿಯೊಂದಿಗೆ 'ನವರಂಗ' (ಇಂಡಿಯನ್ ಪಿಟ್ಟ) ಪ್ಯಾನ್ ಟೈಲ್ ಫೈ ಕ್ಯಾಚರ್, ಟಿಕಲ್ಸ್ ಬ್ಲೂ ಫೈ ಕ್ಯಾಚರ್, ಬ್ಲಾಕ್ ರೆಡ್ ಸ್ಪಾಟ್ ಎಂಬ ಅಪರೂಪದ ಪಕ್ಷಿಗಳೂ ಇದ್ದವು ಎಂದು ಅವರು ತಿಳಿಸಿದ್ದಾರೆ.

ಇದುವರೆಗೆ ಈ ಪಕ್ಷಿಯನ್ನು ನೋಡಿಲ್ಲ ಎಂದು ಪರಿಸರ ಮಾರ್ಗದರ್ಶಿ, ವನ್ಯಜೀವಿ ಛಾಯಗ್ರಾಹಕ ಪಂಪಯ್ಯಸ್ವಾಮಿ ಮಠ ಹೇಳಿದರು. "ಇದು ವಲಸೆ ಪಕ್ಷಿ. ಹಂಪಿ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ನೋಡಲು ಸಿಕ್ಕಿದೆ. ಬೆಂಗಳೂರು, ಪಶ್ಚಿಮಘಟ್ಟ ಹಾಗೂ ತಮಿಳುನಾಡಿನ ನೀಲಗಿರಿ ಪ್ರದೇಶದಲ್ಲಿ ಈ ಹಿಂದೆ ಕಾಣಿಸಿಕೊಂಡಿತ್ತು. ಹವಾಮಾನ ಬದಲಾವಣೆಯಿ೦ದಾಗಿ ಉತ್ತರ ಧ್ರುವದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದ್ದು ವಲಸೆ ಹಕ್ಕಿಗಳು ದಕ್ಷಿಣ ಭೂಭಾಗಕ್ಕೆ ಬರುತ್ತಿವೆ" ಎಂದು ಪಕ್ಷಿ ಸಂಶೋಧಕ ಸಮದ್‌ ಕೊಟ್ಟೂರು ಹೇಳಿದರು.

ಇದನ್ನೂ ಓದಿ: 11 ವರ್ಷಗಳ ಬಳಿಕ ಹಕ್ಕಿ ಗಣತಿ: ಬಿಳಿಗಿರಿ ಬನದಲ್ಲಿ 274 ಪಕ್ಷಿ ಗುರುತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.