ಹೊಸಪೇಟೆ (ವಿಜಯನಗರ): ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಯುವಕನನ್ನು ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ತಾಲೂಕಿನ ಅರಸೀಕೆರೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಲ್ಲಪನಹಳ್ಳಿ ಗ್ರಾಮದ ಡಿ.ಚಿರಂಜೀವಿ ಎಂಬಾತ ಬಂಧಿತ ಯುವಕ. ಈತ 2019ರಿಂದ ಪವನಪುರದ 21 ವರ್ಷದ ಯುವತಿ ಮೇಲೆ ಮನೆಯಲ್ಲಿ ಯಾರು ಇಲ್ಲದಿದ್ದಾಗ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ.
ಅಲ್ಲದೆ, ಮದುವೆಯಾಗುವುದಾಗಿ ನಂಬಿಸಿ, ನಾಲ್ಕುವರೆ ತೊಲೆ ಬಂಗಾರ ಹಾಗೂ 1.50 ಲಕ್ಷ ರೂ ಪಡೆದು ಮೋಸ ಮಾಡಿದ್ದಾನೆಂದು ಯುವತಿ ನೀಡಿದ ದೂರಿನ್ವಯ ಅರಸಿಕೇರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನನ್ನು ಅರಸಿಕೇರೆ ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಅತ್ತೆ-ಸೋದರಳಿಯನ ಪ್ರೀತಿಗೆ ಸಂಬಂಧಿಕರು ಅಡ್ಡಿ.. ಆತ್ಮಹತ್ಯೆಗೆ ಯತ್ನಿಸಿದ ಜೋಡಿ!