ಬಳ್ಳಾರಿ: ಮುಂದಿನ ಐದು ದಿನ ಅಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಹವಾಮಾನ ಘಟಕ (ಡಿಎಎಂಯು) ಮುನ್ಸೂಚನೆ ನೀಡಿದೆ.

ಮೇ 8 ಮತ್ತು 9ರಂದು ಮಳೆಯ ಮುನ್ಸೂಚನೆ ಇದ್ದರೂ ಉಭಯ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣದಲ್ಲಿ ಮಾತ್ರ ಶೂನ್ಯ ಸಾಧನೆಯಾಗಿದೆ. ಮೇ 10ರಂದು ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ 3.9, ಹಗರಿ ಬೊಮ್ಮನಹಳ್ಳಿ ತಾಲೂಕಿನಲ್ಲಿ 1.8, ಹರಪನಹಳ್ಳಿ ತಾಲೂಕಿನಲ್ಲಿ 1.9 ಮಿಲಿ ಮೀಟರ್ನಷ್ಟು ಮಳೆಯಾಗುವ ಸಾಧ್ಯತೆ ಇದೆ. ಮೇ 11ರಂದು ಬಳ್ಳಾರಿ ತಾಲೂಕಿನಲ್ಲಿ 4.4, ಹಡಗಲಿ ತಾಲೂಕಿನಲ್ಲಿ 5, ಹಗರಿಬೊಮ್ಮನ ಹಳ್ಳಿ ತಾಲೂಕಿನಲ್ಲಿ 2.9, ಹರಪನಹಳ್ಳಿ ತಾಲೂಕಿನಲ್ಲಿ 12.3, ಹೊಸಪೇಟೆ ತಾಲೂಕಿನಲ್ಲಿ 0.6, ಕೂಡ್ಲಿಗಿ ತಾಲೂಕಿನಲ್ಲಿ 6.1, ಸಂಡೂರು ತಾಲೂಕಿನಲ್ಲಿ16, ಸಿರುಗುಪ್ಪ ತಾಲೂಕಿನಲ್ಲಿ 0.4 ಮಿಲಿ ಮೀಟರ್ನಷ್ಟು ಮಳೆಯಾಗಲಿದೆ.
ಮೇ 12ರಂದು ಬಳ್ಳಾರಿ ತಾಲೂಕಿನಲ್ಲಿ 1.1, ಹಡಗಲಿ ತಾಲೂಕಿನಲ್ಲಿ 29.1, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 35.5, ಹರಪನಹಳ್ಳಿ ತಾಲೂಕಿನಲ್ಲಿ 39.2, ಹೊಸಪೇಟೆ ತಾಲೂಕಿನಲ್ಲಿ 5.1, ಕೂಡ್ಲಿಗಿ ತಾಲೂಕಿನಲ್ಲಿ 60.3, ಸಂಡೂರು ತಾಲೂಕಿನಲ್ಲಿ 24.4, ಸಿರುಗುಪ್ಪ ತಾಲೂಕಿನಲ್ಲಿ 0.4 ಮಿಲಿ ಮೀಟರ್ನಷ್ಟು ಮಳೆಯಾಗುವ ಮುನ್ಸೂಚನೆ ಇದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರವು ತಿಳಿಸಿದೆ.
ಓದಿ : ಅನಾಥ, ನಿರ್ಗತಿಕರಿಗೆ ಆಹಾರ, ಅಗತ್ಯ ವಸ್ತು ವಿತರಣೆ.. ಗಂಗಾವತಿಯ ಅಧಿಕಾರಿಯಿಂದ ಮಾನವೀಯ ಕಾರ್ಯ