ಹೊಸಪೇಟೆ: ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ ಬಿಷ್ಟಪ್ಪಯ್ಯ ಗೋಪುರ ಮುಂಭಾಗದ ನಿರ್ಮಾಣ ಹಂತದಲ್ಲಿರುವ ಸಾಲು ಮಂಟಪದಲ್ಲಿ ಸಂಗ್ರಹವಾಗಿದ್ದ ಮಳೆ ನೀರನ್ನು ಪಂಪಸೆಟ್ ಮೂಲಕ ಹೊರ ಹಾಕಲಾಯಿತು.
ಕಳೆದ ಮೂರ್ನಾಲ್ಕು ದಿನಗಳಿಂದ ಹೊಸಪೇಟೆ ತಾಲೂಕಿನಲ್ಲಿ ರಾತ್ರಿ ವೇಳೆ ಎಡಬಿಡದೆ ಮಳೆ ಸುರಿಯುತ್ತಿದೆ. ಹಾಗಾಗಿ ಬಿಷ್ಟಪ್ಪಯ್ಯ ಗೋಪುರ ಮುಂಭಾಗದ ನಿರ್ಮಾಣ ಹಂತದಲ್ಲಿರುವ ಸಾಲು ಮಂಟಪದಲ್ಲಿ ಮಳೆ ನೀರು ಸಂಗ್ರಹವಾಗಿತ್ತು. ಆ ಮಳೆ ನೀರನ್ನು ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆ ಸಿಬ್ಬಂದಿ ಪಂಪ್ ಸೆಟ್ ಮೂಲಕ ಹೊರಕ್ಕೆ ಹಾಕಿದರು.
ಹಲವು ತಿಂಗಳುಗಳಿಂದ ಪುರಾತತ್ವ ಇಲಾಖೆ ಸಾಲು ಮಂಟಪಗಳನ್ನು ಮರು ನಿರ್ಮಾಣ ಮಾಡುತ್ತಿದೆ. ಮಳೆ ಬಂದರೇ ಸಾಕು ಕೆಳ ಮಂಟಪಗಳಲ್ಲಿ ಮಳೆ ನೀರು ಸಂಗ್ರಹವಾಗುತ್ತಿದೆ. ಇದರಿಂದ ಮಂಟಪಗಳಿಗೆ ತೊಂದರೆ ಆಗುತ್ತದೆ.
ಮಳೆ ರಸ್ತೆ ಪ್ರವಾಸಿಗರಿಗೆ ತೊಂದರೆ:
ಪಂಪ್ ಸೆಟ್ ಮೂಲಕ ಮಳೆ ನೀರನ್ನು ರಸ್ತೆಗೆ ಹರಿಸಲಾಗುತ್ತಿದ್ದು, ಇದರಿಂದ ರಸ್ತೆಯಲ್ಲಿ ಗಲೀಜು ಸೃಷ್ಟಿಯಾಗುತ್ತಿದೆ. ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಬರುವ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ತೊಂದರೆ ಉಂಟಾಗುತ್ತಿದೆ. ಮಳೆ ನೀರನ್ನು ವ್ಯವಸ್ಥೆವಾಗಿ ನದಿ ಭಾಗಕ್ಕೆ ಹರಿಸಬೇಕು. ಇದರಿಂದ ರಸ್ತೆಯಲ್ಲಿ ಗಲೀಜು ಸೃಷ್ಟಿಯಾಗುವುದಿಲ್ಲ. ಈ ಕುರಿತು ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರವಾಸಿಗರು ಆಗ್ರಹಿಸಿದರು.