ಬಳ್ಳಾರಿ: ರಾಘವ ಕಲಾಮಂದಿರ ಅಸೋಸಿಯೇಷನ್ ಸದಸ್ಯರು 81 ಸಾವಿರ ರೂ.ಗಳ ನೆರೆಪರಿಹಾರವನ್ನು ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರಾಘವ ಕಲಾಮಂದಿರ ಅಸೋಸಿಯೇಷನ್ ಸದಸ್ಯರು, ಒಟ್ಟು81 ಸಾವಿರ ರೂಪಾಯಿ ಚಕ್ ಅನ್ನು ನೆರೆಹಾವಳಿಯ ಸಂತ್ರಸ್ತರಿಗೆ, ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಮೂಲಕ ಸಲ್ಲಿಸಿದರು.
ಈ ಸಮಯದಲ್ಲಿ ರಾಘವ ಕಲಾಮಂದಿರ ಅಸೋಸಿಯೇಷನ್ ಸದಸ್ಯರಾದ ಬಸವರಾಜ್, ರಮೇಶ್ ಗೌಡ ಪಾಟೀಲ್ ಮತ್ತು ಇನ್ನಿತರರು ಹಾಜರಿದ್ದರು.