ಬಳ್ಳಾರಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕೆ ಮನನೊಂದು ಹೊಸಪೇಟೆ ನಗರದ ವಿದ್ಯಾರ್ಥಿನಿಯೊಬ್ಬಳು ಸಂಚರಿಸುತ್ತಿದ್ದ ರೈಲಿನಡಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ನಗರದ ಕೆ.ಎಸ್.ಪಿಎಲ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಶ್ರೇಯಾ ಎಸ್.ಕದಂ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಳು. ಈ ಹಿನ್ನೆಲೆಯಲ್ಲಿ ಬೇಸರಗೊಂಡು ಈಕೆ ರೈಲಿನಡಿ ಜಿಗಿದಿದ್ದಾಳೆ. ಈ ವೇಳೆ ಜೊತೆಯಲ್ಲಿದ್ದ ಗೆಳತಿ ರೂಪಾ ಮೇಟಿ ರಕ್ಷಣೆಗೆ ಧಾವಿಸಿದ್ದಾಳೆ. ಘಟನೆಯಲ್ಲಿ ಶ್ರೇಯಾ ಕೈಬೆರಳು ತುಂಡಾಗಿದ್ದು, ತಲೆ ಹಾಗು ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ರೂಪಾಳಿಗೆ ಸೊಂಟ ಹಾಗು ದೇಹದ ಇನ್ನಿತರ ಭಾಗಗಳಿಗೆ ಗಾಯವಾಗಿದೆ.
ಗಾಯಗೊಂಡಿರುವ ಶ್ರೇಯಾಳನ್ನು ಮೊದಲು ಹೊಸಪೇಟೆ ನಗರದ ಆಸ್ಪತ್ರೆಗೆ ದಾಖಲಿಸಲಾಯ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಆ್ಯಂಬುಲೆನ್ಸ್ ಮೂಲಕ ಬಳ್ಳಾರಿಗೆ ಕಳುಹಿಸಲಾಗಿದೆ. ರೂಪಾಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ರೈಲ್ವೇ ಪೊಲೀಸರು ಕೇಸು ದಾಖಲಿಸಿಕೊಡಿದ್ದಾರೆ.