ETV Bharat / state

ಸಚಿವ ಸಂಪುಟ ಉಪಸಮಿತಿಗೆ ನಿರ್ದಿಷ್ಟ ನಿಬಂಧನೆ, ನಿಯಮಾವಳಿ ಮಾಡಿ: ಹಿರೇಮಠ ಆಗ್ರಹ

author img

By

Published : Jun 25, 2019, 12:48 AM IST

ನಿನ್ನೆ ಅಥವಾ ಮೊನ್ನೆಯ ದಿನ ಈ ಸಚಿವ ಸಂಪುಟದ ಉಪಸಮಿತಿ ರಚನೆಯಾಗಿಲ್ಲ. 2007ರಿಂದಲೇ ಸಮಿತಿ ರಚನೆಯಾಗಿದೆ. ಉಪಸಮಿತಿಯಲ್ಲಿ ನಿರ್ದಿಷ್ಟವಾದ ಚೌಕ್ಕಟ್ಟನ್ನು ಹೊಂದಿರಬೇಕು. ಅದರ ನಿಬಂಧನೆ ಹಾಗೂ ನಿಯಮಾವಳಿಗಳನ್ನು ಮೊದಲು ರಾಜ್ಯ ಸರ್ಕಾರ ಮಾಡಲಿ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರು ಆಗ್ರಹಿಸಿದ್ದಾರೆ.

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ

ಬಳ್ಳಾರಿ: ರಾಜ್ಯ ಸರ್ಕಾರವು ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡಿರುವ ಕುರಿತು ಕೂಲಂಕುಷವಾಗಿ ಪರಿಶೀಲನೆ ನಡೆಸಲು ಸಚಿವ ಸಂಪುಟದ ಉಪಸಮಿತಿ ರಚನೆ ಮಾಡಲಾಗಿದೆ. ಆದರೆ ನಿರ್ದಿಷ್ಟ ನಿಬಂಧನೆ, ನಿಯಮಾವಳಿಗಳನ್ನು ಮೊದಲು ರಾಜ್ಯ ಸರ್ಕಾರ ಮಾಡಲಿ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಅವರು ಆಗ್ರಹಿಸಿದ್ದಾರೆ.

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ

ನಗರದ ಹೊಟೇಲ್​​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಅಥವಾ ಮೊನ್ನೆಯ ದಿನ ಈ ಸಚಿವ ಸಂಪುಟದ ಉಪಸಮಿತಿ ರಚನೆಯಾಗಿಲ್ಲ. 2007ರಿಂದಲೇ ಸಮಿತಿ ರಚನೆಯಾಗಿದೆ. ಆಗಿನ ಸಮಿತಿಯಲ್ಲಿ ಯಾರೆಲ್ಲಾ ಇದ್ದರು ಎಂಬುದು ನನಗೆ ಗೊತ್ತಿದೆ. ಉಪಸಮಿತಿಯಲ್ಲಿ ನಿರ್ದಿಷ್ಟವಾದ ಚೌಕ್ಕಟ್ಟನ್ನು ಹೊಂದಿರಬೇಕು. ಅದರ ನಿಬಂಧನೆ ಹಾಗೂ ನಿಯಮಾವಳಿಗಳು ಸ್ಪಷ್ಟತೆಯನ್ನು ಹೇಳಬೇಕು ಎಂದರು.

ಸಜ್ಜನಿಕೆಯೆ ಇಲ್ಲದ ಸಜ್ಜನ್ ಜಿಂದಾಲ್:
ಜಿಂದಾಲ್ ಸಮೂಹ ಸಂಸ್ಥೆಯ ಮುಖ್ಯಸ್ಥ ಸಜ್ಜನ್ ಜಿಂದಾಲ್ ಅವರಿಗೆ ಸಜ್ಜನಿಕೆಯೆ ಇಲ್ಲ. ಅವನೊಬ್ಬ ಭೂ ಬಕಾಸುರನಾಗಿದ್ದಾನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದ ಪೋಸ್ಕೋ ಕಂಪನಿಯು ವಿದೇಶದಲ್ಲೂ ಕೇವಲ 2 ಸಾವಿರ ಎಕರೆ ಭೂಮಿಯಲ್ಲಿ ಮಾತ್ರ ತನ್ನ ಕೈಗಾರಿಕಾ ವಲಯವನ್ನು ವಿಸ್ತರಿಸಿಕೊಂಡಿದೆ. ಆದರೆ ಕರ್ನಾಟಕ ರಾಜ್ಯದ ಜಿಲ್ಲೆಯಲ್ಲಿ ಈಗಾಗಲೇ 11 ಸಾವಿರ ಎಕರೆ ಭೂಮಿಯನ್ನು ಹೊಂದಿರುವ ಜಿಂದಾಲ್ ಕಾರ್ಖಾನೆ ಈಗ ಮತ್ತಷ್ಟು ಭೂಮಿಯನ್ನು ಕಬಳಿಸುವ ಹುನ್ನಾರಕ್ಕೆ ಕೈ ಹಾಕಿದೆ. ಜಿಂದಾಲ್ ಭೂ ಬಕಾಸುರ ಕಂಪನಿಯಾಗಿ ಹೊರ ಹೊಮ್ಮಿದಂತಾಗಿದೆ ಎಂದು ದೂರಿದ್ದಾರೆ.
ರಾಜ್ಯ ಸರ್ಕಾರ ಜಿಂದಾಲ್ ಸಂಸ್ಥೆಗೆ ಈವರೆಗೂ ಮಂಜೂರು ಮಾಡಿರುವ ಭೂಮಿ ಎಷ್ಟು. ಜಿಂದಾಲ್ ಸಂಸ್ಥೆ ರೈತರಿಂದ ನೇರವಾಗಿ ಖರೀದಿಸಿರುವ ಭೂಮಿ ಎಷ್ಟು. ಆ ಪೈಕಿ ಉದ್ದೇಶಿತ ಕೈಗಾರಿಕಾ ಸ್ಥಾಪನೆಗೆ ಬಳಸಿಕೊಂಡಿರುವ ಭೂಮಿ ಎಷ್ಟು ಎಂಬುದರ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಸಚಿವ ಕೃಷ್ಣ ಬೈರೇಗೌಡರ ವಿರುದ್ಧಕಿಡಿ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕಷ್ಣ ಬೈರೇಗೌಡರು ವಿದೇಶದಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ‌. ಆತನೊಬ್ಬ ಜಾಣ ಸಚಿವ ಎಂದುಕೊಂಡಿದ್ದೆ. ಆತನೂ ಕೂಡ ಮಹಾಭೂಪ. ಸಚಿವರಾದ ಕೆ.ಜೆ.ಜಾರ್ಜ್​, ಡಿ.ಕೆ.ಶಿವಕುಮಾರ್​ ಅವರ ಹಾದಿಯಲ್ಲೇ ನಡೆಯುತ್ತಿರುವುದು ನನಗೆ ಬೇಸರ ಮೂಡಿಸಿದೆ. ಸಾತ್ವಿಕವಾದವನ್ನ ಮಂಡಿಸಿರುವ ಶಾಸಕ ಹೆಚ್.ಕೆ. ಪಾಟೀಲ್​​, ಬಸವರಾಜ ಹೊರಟ್ಟಿ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹೆಚ್.ವಿಶ್ವನಾಥ್​ ಅವರ ಹಾದಿಯನ್ನು ತುಳಿಯಬೇಕು. ಜಿಂದಾಲ್ ಸಂಸ್ಥೆಯ ವಿರುದ್ಧದ ಅವರ ಸಾತ್ವಿಕ ನಿಲುವಿಗೆ ಸಚಿವ ಕೃಷ್ಣ ಬೈರೇಗೌಡ ನಿಲ್ಲಬೇಕು ಎಂದು ತಾಕೀತು ಮಾಡಿದ್ದಾರೆ.

ಜಾರ್ಜ್ ಜೈಲಿಗೆ ಹೋಗಬೇಕಿತ್ತು:
ಕೈಗಾರಿಕಾ ಅಭಿವೃದ್ಧಿ ಖಾತೆ ಸಚಿವ ಕೆ.ಜೆ. ಜಾರ್ಜ್ ಅವರು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯಂತೆ ಯಾವಾಗ್ಲೋ ಜೈಲು ಪಾಲಾಗಬೇಕಿತ್ತು. ಮುಂದೊಂದು ಅಂತಹ ಸನ್ನಿವೇಶವು ಸಚಿವ ಜಾರ್ಜ್​ಗೆ ಎದುರಾಗಬಹುದು. ಅಂತಹವರ ಹಾದಿಯನ್ನು ಯುವ ಸಚಿವನಾದ ಕೃಷ್ಣ ಬೈರೇಗೌಡರು ತುಳಿಯೋದು ಬೇಡ ಎಂದರು.

ಕೇಂದ್ರ ಸರ್ಕಾರದ ವಿರುದ್ಧ ಹಿರೇಮಠ ವಾಗ್ದಾಳಿ:

ಕಪ್ಪು ಹಣ ಹೊರಗೆ ತರುತ್ತೀವಿ ಎಂದ ಕೇಂದ್ರ ಸರ್ಕಾರ ಸಾರಿದ ಬೆನ್ನಲ್ಲೇ ಕರ್ನಾಟಕದ ಮಾಜಿ ಸಿಎಂ ಬಿಎಸ್​ವೈ, ಜಿಂದಾಲ್ ಸಮೂಹ ಸಂಸ್ಥೆಯ ಮುಖ್ಯಸ್ಥ ಸಜ್ಜನ್ ಜಿಂದಾಲ್ ಅವರು ಯಾರೂ ಪ್ರಧಾನಿ ಮೋದಿಯವರಿಗೆ ಕಾಣಲಿಲ್ಲ. ಇನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯಂತೂ ಮೋದಿಯವರ ಕಣ್ಣಿಗೆ ಕಾಣಲಾರದಂತೆ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದಾರೆ ಎಂದು ಹಿರೇಮಠ ದೂರಿದ್ದಾರೆ.

ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡಿರೋದರ ವಿರುದ್ಧ ದೊಡ್ಡ ಆಂದೋಲನವನ್ನೆ ಮಾಡಲಾಗುವುದು. ಕಾನೂನಾತ್ಮಕವಾಗಿಯೂ ಕೂಡ ಹೋರಾಟ ಮುನ್ನಡೆಸಲಾಗುವುದು. ಸಚಿವ ಸಂಪುಟದ ಉಪಸಮಿತಿಗೆ ಜಿಂದಾಲ್ ಸಂಸ್ಥೆಯ ಭ್ರಷ್ಟಾಚಾರದ ಕುರಿತ ಸುದೀರ್ಘ ವರದಿಯನ್ನು ಸಲ್ಲಿಸಲು ಮಂಗಳವಾರ ಅಥವಾ ಬುಧವಾರ ಬೆಂಗಳೂರಿಗೆ ತೆರಳುವುದಾಗಿ ಹಿರೇಮಠ ತಿಳಿಸಿದ್ದಾರೆ.

Intro:ಸಚಿವ ಸಂಪುಟದ ಉಪಸಮಿತಿಗೆ ನಿರ್ದಿಷ್ಟ ನಿಬಂಧನೆ, ನಿಯಮಾವಳಿ ಮೊದ್ಲು ಮಾಡಿ: ಎಸ್.ಆರ್.ಹಿರೇಮಠ ಆಗ್ರಹ!
ಬಳ್ಳಾರಿ: ರಾಜ್ಯ ಸರ್ಕಾರವು ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,667 ಎಕರೆಯ ಭೂಮಿ ಪರಭಾರೆ ಮಾಡಿರುವ ಕುರಿತ ಕೂಲಂಕಷವಾಗಿ ಪರಿಶೀಲನೆ ನಡೆಸುವ ಸಲುವಾಗಿಯೇ ಸಚಿವ ಸಂಪುಟದ ಉಪಸಮಿತಿ ರಚನೆ ಮಾಡಲಾಗಿದೆ. ಆದರೆ, ನಿರ್ದಿಷ್ಟ ನಿಬಂಧನೆ- ನಿಯಮಾವಳಿಗಳನ್ನು ಮೊದ್ಲು ರಾಜ್ಯ ಸರ್ಕಾರ ಮಾಡ್ಲಿ ಎಂದು ಸಮಾಜ ಪರಿವರ್ತನಾ ಸಮುದಾಯ ದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರು ಆಗ್ರಹಿಸಿದ್ದಾರೆ.
ಬಳ್ಳಾರಿ ನಗರದ ಮಯೂರ ಹೊಟೇಲ್ ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಿನ್ನೆ ಅಥವಾ ಮೊನ್ನೆಯ ದಿನ ಈ ಸಚಿವ ಸಂಪುಟದ ಉಪಸಮಿತಿ ರಚನೆ ಯಾಗಿಲ್ಲ. 2007 ರಿಂದಲೇ ಈ ಉಪಸಮಿತಿ ರಚನೆಯಾಗಿದೆ. ಅಂದಿನ ಯಾರು ಯಾರು ಉಪಸಮಿತಿಯಲ್ಲಿದ್ದರು ಎಂಬುದು ನನಗೆ ಗೊತ್ತಿದೆ. ಹೀಗಾಗಿ, ಉಪಸಮಿತಿಯಲ್ಲಿ ನಿರ್ದಿಷ್ಟವಾದ ಚೌಕ್ಕಟ್ಟನ್ನು ಹೊಂದಿರಬೇಕು. ಅದರ ನಿಬಂಧನೆ ಹಾಗೂ ನಿಯಮಾವಳಿಗಳು ಸ್ಪಷ್ಟತೆಯನ್ನು ಹೇಳಬೇಕು ಎಂದರು.
ಸಜ್ಜನಿಕೆಯೇ ಇಲ್ಲದ ಸಜ್ಜನ್ ಜಿಂದಾಲ್: ಜಿಂದಾಲ್ ಸಮೂಹ ಸಂಸ್ಥೆಯ ಮುಖ್ಯಸ್ಥ ಸಜ್ಜನ್ ಜಿಂದಾಲ್ ಅವರಿಗೆ ಸಜ್ಜನಿಕೆಯೇ ಇಲ್ಲ. ಅವನೊಬ್ಬ ಭೂ ಬಕಾಸುರನಾಗಿದ್ದಾನೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದ ಪೋಸ್ಕೋ ಕಂಪನಿಯು ವಿದೇಶದಲ್ಲೂ ಕೇವಲ ಎರಡು ಸಾವಿರ ಎಕರೆ ಭೂಮಿಯಲ್ಲಿ ಮಾತ್ರ ತನ್ನ ಕೈಗಾರಿಕಾ ವಲಯವನ್ನು ವಿಸ್ತರಿಸಿ ಕೊಂಡಿದೆ. ಆದರೆ, ಕರ್ನಾಟಕ ರಾಜ್ಯದ ಬಳ್ಳಾರಿಯಲ್ಲಿ ಈಗಾಗಲೇ ಹನ್ನೊಂದು ಸಾವಿರ ಎಕರೆ ಭೂಮಿಯನ್ನು ಹೊಂದಿರುವ ಜಿಂದಾಲ್ ಉಕ್ಕು ಕಾರ್ಖಾನೆಯು ಈಗ ಮತ್ತಷ್ಟು ಭೂಮಿಯನ್ನು ಕಬಳಿಸುವ ಹುನ್ನಾರಕ್ಕೆ ಕೈಹಾಕಿದೆ. ಜಿಂದಾಲ್ ಭೂ ಬಕಾಸುರ ಕಂಪನಿಯಾಗಿ ಹೊರಹೊಮ್ಮಿದಂತಾಗಿದೆ ಎಂದು ದೂರಿದ್ದಾರೆ.
ಹೀಗಾಗಿ, ರಾಜ್ಯ ಸರ್ಕಾರವು ಜಿಂದಾಲ್ ಸಂಸ್ಥೆಗೆ ಈವರೆಗೂ ಮಂಜೂರು ಮಾಡಿರುವ ಭೂಮಿಯೆಷ್ಟು?. ಜಿಂದಾಲ್ ಸಂಸ್ಥೆ ರೈತರಿಂದ ನೇರವಾಗಿ ಖರೀದಿಸಿರುವ ಭೂಮಿಯೆಷ್ಟು?. ಆ ಪೈಕಿ ಉದ್ದೇಶಿತ ಕೈಗಾರಿಕಾ ಸ್ಥಾಪನೆಗೆ ಬಳಸಿಕೊಂಡಿರುವ ಭೂಮಿ ಯೆಷ್ಟು? ಎಂಬುದರ ಕುರಿತು ಸಮಗ್ರ ತನಿಖೆಯಾಗಬೇಕು ಎಂದರು.

Body:ಸಚಿವ ಕೃಷ್ಣೇಭೈರೇಗೌಡರ ವಿರುದ್ಧ ಹಿರೇಮಠ ಕಿಡಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕಷ್ಣೇಭೈರೇಗೌಡರು ವಿದೇಶದಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ‌. ಆತನೊಬ್ಬ ಜಾಣ ಸಚಿವ ಎಂದು ಕೊಂಡಿದ್ದೆ. ಆತನೂ ಕೂಡ ಮಹಾಭೂಪ ಸಚಿವರಾದ ಕೆ.ಜೆ.ಜಾರ್ಜ್ಹಾ, ಡಿ.ಕೆ.ಶಿವಕುಮಾರ ಅವರ ಹಾದಿಯಲ್ಲೇ ನಡೆಯುತ್ತಿರುವುದು ನನಗೆ ಬೇಸರ ಮೂಡಿಸಿದೆ. ಸಾತ್ವಿಕವಾದವನ್ನ ಮಂಡಿಸಿರುವ ಶಾಸಕ ಹೆಚ್.ಕೆ.ಪಾಟೀಲ, ಬಸವರಾಜ ಹೊರಟ್ಟಿ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹೆಚ್.ವಿಶ್ವನಾಥ ಅವರ ಹಾದಿಯನ್ನು ತುಳಿಯಬೇಕು. ಜಿಂದಾಲ್ ಸಂಸ್ಥೆಯ ವಿರುದ್ಧದ ಅವರ ಸಾತ್ವಿಕ ನಿಲುವಿಗೆ ಸಚಿವ ಕೃಷ್ಣೇಭೈರೇಗೌಡ ನಿಲ್ಲಬೇಕು ಎಂದು ಹಿರೇಮಠ ತಾಕೀತು ಮಾಡಿದ್ದಾರೆ.
ಜಾರ್ಜ್ ಜೈಲಿಗೆ ಹೋಗಬೇಕಿತ್ತು: ಕೈಗಾರಿಕಾ ಅಭಿವೃದ್ಧಿ ಖಾತೆ ಕೆ.ಜೆ.ಜಾರ್ಜ್ ಅವರು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಯಂತೆ ಯಾವಾಗ್ಲೋ ಜೈಲುಪಾಲಾಗಬೇಕಿತ್ತು. ಮುಂದೊಂದು ಅಂತಹ ಸನ್ನಿವೇಶವು ಸಚಿವ ಜಾರ್ಜ್ ಗೆ ಎದುರಾಗಬಹುದು. ಅಂತಹವರ ಹಾದಿಯನ್ನು ಯುವ ಸಚಿವನಾದ ಕೃಷ್ಣೇ ಭೈರೇ ಗೌಡರು ತುಳಿಯೋದು ಬೇಡ ಎಂದರು.
ಸಜ್ಜನ್ ಜಿಂದಾಲ್ ಮೊದಲನೇ ಆರೋಪಿ: ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ವಿರುದ್ಧದ ಹೋರಾಟದ ಹಾದಿ ತುಳಿದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿ ಯೂರಪ್ಪನವರು ಪ್ರೇರಣಾ ಟ್ರಸ್ಟ್ ಹೆಸರಿನಡಿ ಜಿಂದಾಲ್ ಸಮೂಹ ಸಂಸ್ಥೆಯಿಂದ ಚೆಕ್ ಮೂಲಕ ಪಡೆದ 20 ಕೋಟಿ ರೂ‌.ಗಳ ಹಣದಲ್ಲೇ ಸಜ್ಜನ್ ಜಿಂದಾಲ್ ಅವರನ್ನು ಮೊದಲನೇ ಆರೋಪಿಯನ್ನಾಗಿಸಲು ಅವಕಾಶವಿತ್ತಾದರೂ, ಮಹಾಭೂಪ ಮಾಜಿ ಸಿಎಂ ಸಿದ್ದರಾಮಯ್ಯನವರು ಅದರ ಗೋಜಿಗೂ ಹೋಗಲಿಲ್ಲ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಹಿರೇಮಠ ವಾಗ್ದಾಳಿ: ಕಪ್ಪು ಹಣ
ಹೊರಗೆ ತರ್ತೀವಿ ಅಂತಾ ಕೇಂದ್ರ ಸರ್ಕಾರ ಸಾರಿದ
ಬೆನ್ನಲ್ಲೇ ಕರ್ನಾಟಕದ ಮಾಜಿ ಸಿಎಂ ಬಿಎಸ್ ವೈ, ಜಿಂದಾಲ್ ಸಮೂಹ ಸಂಸ್ಥೆಯ ಮುಖ್ಯಸ್ಥ ಸಜ್ಜನ್ ಜಿಂದಾಲ್ ಅವರು ಯಾರೂ ಪ್ರಧಾನಿ ಮೋದಿಯವರಿಗೆ ಕಾಣಲಿಲ್ಲ. ಇನ್ನೂ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯಂತೂ ಮೋದಿಯವರ ಕಣ್ಣಿಗೆ ಕಾಣಲಾರದಂತೆ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದಾರೆಂದೂ ಹಿರೇಮಠ ದೂರಿದ್ದಾರೆ.
ಹೀಗಾಗಿ, ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡಿರೋದರ ವಿರುದ್ಧ ದೊಡ್ಡ ಆಂದೋಲನವನ್ನೇ ಮಾಡ ಲಾಗುವುದು. ಕಾನೂನಾತ್ಮಕವಾಗಿಯೂ ಕೂಡ ಹೋರಾಟ ಮುನ್ನಡೆಸಲಾಗುವುದೆಂದರು. ಅಲ್ಲದೇ, ಸಚಿವ ಸಂಪುಟದ ಉಪಸಮಿತಿಗೆ ಜಿಂದಾಲ್ ಸಂಸ್ಥೆಯ ಭ್ರಷ್ಟಾಚಾರದ ಕುರಿತ ಸುದೀರ್ಘ ವರದಿಯನ್ನು ಸಲ್ಲಿಸಲು ನಾಳೆ ಅಥವಾ ನಾಡಿದ್ದು ಬೆಂಗಳೂರಿಗೆ ತೆರಳುವುದಾಗಿ ಹಿರೇಮಠ ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_04_24_S.R.HIREMATH_PRESS_MEET_BYTE_7203310

KN_BLY_04d_24_S.R.HIREMATH_PRESS_MEET_BYTE_7203310

KN_BLY_04e_24_S.R.HIREMATH_PRESS_MEET_BYTE_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.