ಹೊಸಪೇಟೆ (ವಿಜಯನಗರ) : ಕಾರು ಡಿಕ್ಕಿ ಹೊಡೆದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಹಾರುವನಹಳ್ಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನಡೆದಿದೆ.
ಶಿವಕುಮಾರ್ (20) ಮೃತ ದುರ್ದೈವಿ. ಈತ ಚಿಲಕನಹಟ್ಟಿಗೆ ಹೋಗಿ ಔಷಧಿ ತೆಗೆದುಕೊಂಡು ಬರುವಾಗ ಈ ಘಟನೆ ನಡೆದಿದೆ. ಸ್ಥಳೀಯರು ಕಾರನ್ನು ಬೆನ್ನಟ್ಟಿ ಡಾಣಾಪುರ ಬಳಿ ಹಿಡಿದಿದ್ದಾರೆ. ಫ್ಲೈಓವರ್ಗಳು, ಸರ್ವೀಸ್ ರಸ್ತೆಗಳು ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದಾರೆ.
ಹೆದ್ದಾರಿಯಲ್ಲಿ ಯುವಕನ ಮೃತದೇಹವನ್ನಿಟ್ಟು ಸ್ಥಳೀಯರು ಪ್ರತಿಭಟಿಸಿದರು. ಇದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ವಿಷಯ ತಿಳಿದು ಘಟನಾ ಸ್ಥಳಕ್ಕೆ ಕೂಡ್ಲಿಗಿ ಸಿಪಿಐ ವಸಂತ್ ಅಸೋದೆ ಆಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸಿದರು.