ETV Bharat / state

ಬಳ್ಳಾರಿಯಲ್ಲಿ ಕರ್ನಾಟಕ ಬಂದ್ ಬಿಸಿ ಜೊತೆ ವಿಜಯನಗರ ಜಿಲ್ಲೆಗೆ ವಿರೋಧ.. - Karnataka Defense Forum protest

ಆಟೋ, ಬಸ್ಸು, ಬೈಕ್, ರಸ್ತೆಗೆ ಇಳಿದಿರುವ ದೃಶ್ಯ ಸಹ ಕಂಡು ಬಂದಿದೆ. ಎಂದಿನಂತೆ ಹೂ-ಹಣ್ಣು, ತರಕಾರಿ, ಹಾಲು, ಮೆಡಿಕಲ್, ಕಿರಾಣಿ ಅಂಗಡಿಗಳು, ಪೆಟ್ರೋಲ್ ಬಂಕ್ ಒಪನ್ ಆಗಿದ್ದವು. ಯಾವುದೇ ಕನ್ನಡಪರ ಸಂಘಟನೆಗಳು ರಸ್ತೆಗೆ ಇಳಿದಿರಲಿಲ್ಲ. ಗ್ರಾಮಾಂತರ ಪ್ರದೇಶದ ಕೌಲ್ ಬಜಾರ್ ವ್ಯಾಪ್ತಿಯಲ್ಲಿ ಪೊಲೀಸರ ಬಂದೋಬಸ್ತ್ ಕಾಣಲಿಲ್ಲ‌‌..

Bellary
ಕರವೇ ಸಂಘಟನೆಯಿಂದ ಪ್ರತಿಭಟನೆ
author img

By

Published : Dec 5, 2020, 1:49 PM IST

ಬಳ್ಳಾರಿ : ಮರಾಠ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ವಿರೋಧಿಸಿ ಈ ದಿನ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಗಣಿನಾಡು ಬಳ್ಳಾರಿಯಲ್ಲಿಂದು ಬೆಳಗ್ಗೆ 11 ಗಂಟೆಗೆ ಕರವೇ ಸಂಘಟನೆಗಳ ಮುಖಂಡರು ಬೀದಿಗಿಳಿದು ಹೋರಾಟ ನಡೆಸಿದರು.

ಬಳ್ಳಾರಿಯಲ್ಲಿಂದು ಕರವೇ ಸಂಘಟನೆಗಳ ಮುಖಂಡರು ಬೀದಿಗಿಳಿದು ಹೋರಾಟ..

ನಗರದ ಗಡಿಗಿ ಚನ್ನಪ್ಪ ವೃತ್ತಕ್ಕೆ ಬೈಕ್ ಹಾಗೂ ಕಾಲ್ನಡಿಗೆಯಲ್ಲಿ ಆಗಮಿಸಿದ ಕರವೇ ನಾರಾಯಣಗೌಡ ಬಣ ಹಾಗೂ ಪ್ರವೀಣ ಶೆಟ್ಟಿ ಬಣದವರು ಮರಾಠ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಹಾಗೂ ಶಾಸಕ ಬಸವರಾಜ ಪಾಟೀಲ ಯತ್ನಾಳ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟನಾ ಮೆರವಣಿಗೆ ಮಾಡೋ ಮುಖೇನ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ ಕನ್ನಡಪರ ಸಂಘಟನೆ ಬಂದ್ ಕರೆ ಹಿನ್ನಡೆ :

ಗ್ರಾಮಾಂತರ ಪ್ರದೇಶದ ಕೌಲ ಬಜಾರ್, ಸುಧಾಕ್ರಾಸ್, ರೇಡಿಯೋ ಪಾರ್ಕ್, ಕುವೆಂಪು ನಗರ ರಸ್ತೆ, ತಿಲಕ‌ನಗರದಲ್ಲಿ ಅನೇಕ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡದೇ ಎಂದಿನಂತೆ ತೆರೆದಿದ್ದವು. ಸಾರ್ವಜನಿಕರು ಕೂಡ ಎಂದಿನಂತೆ ರಸ್ತೆಗೆ ಇಳಿದು ಓಡಾಡುವ ಪರಿಸ್ಥಿತಿ ಇತ್ತು.

ಆಟೋ, ಬಸ್ಸು, ಬೈಕ್, ರಸ್ತೆಗೆ ಇಳಿದಿರುವ ದೃಶ್ಯ ಸಹ ಕಂಡು ಬಂದಿದೆ. ಎಂದಿನಂತೆ ಹೂ-ಹಣ್ಣು, ತರಕಾರಿ, ಹಾಲು, ಮೆಡಿಕಲ್, ಕಿರಾಣಿ ಅಂಗಡಿಗಳು, ಪೆಟ್ರೋಲ್ ಬಂಕ್ ಒಪನ್ ಆಗಿದ್ದವು. ಯಾವುದೇ ಕನ್ನಡಪರ ಸಂಘಟನೆಗಳು ರಸ್ತೆಗೆ ಇಳಿದಿರಲಿಲ್ಲ. ಗ್ರಾಮಾಂತರ ಪ್ರದೇಶದ ಕೌಲ್ ಬಜಾರ್ ವ್ಯಾಪ್ತಿಯಲ್ಲಿ ಪೊಲೀಸರ ಬಂದೋಬಸ್ತ್ ಕಾಣಲಿಲ್ಲ‌‌.

ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಗೆ ಕರವೇ ಆಕ್ರೋಶ :

ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿರೋದನ್ನು ಖಂಡಿಸಿ ಕರವೇ ನಾರಾಯಣ ಗೌಡ ಬಣದ ಅಧ್ಯಕ್ಷ ಚಾನಾಳು ಶೇಖರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಹೋದ ಕಾರ್ಯಕರ್ತರು, ಮುಖಂಡರನ್ನು ತಡೆದು ಪೊಲೀಸರು ಬಂಧಿಸಿ ಕರೆದೊಯ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.