ಬಳ್ಳಾರಿ: ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಆರ್.ಕೆ.ಎಸ್ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ಮಾಡಲು ಹೊರಟಿದೆ. ಅದನ್ನು ವಿರೋಧಿಸಿ ಪತ್ರಿಭಟನೆ ಮಾಡುತ್ತಿದ್ದೆವೆ ಎಂದರು.
ತಿದ್ದುಪಡಿ ಮಾಡುತ್ತಿರುವುದು ರೈತ ವಿರೋಧಿ, ಕೃಷಿ ಕಾರ್ಮಿಕರ ವಿರೋಧಿ, ಜನ ವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿದರು.

ಕೃಷಿಕರಲ್ಲದವರಿಗೂ ಈ ಭೂಮಿ ಖರೀದಿ ಮಾಡಲು ಅವಕಾಶವಿರಲಿಲ್ಲ. ಆದಾಯದ ಮಿತಿ ಕೂಡಾ ಕಡಿಮೆ ಇತ್ತು.

ಸರ್ಕಾರ ಭೂಸುಧಾರಣೆ ಕಾಯ್ದೆ 1961ರಲ್ಲಿ ತಿದ್ದುಪಡಿ ತಂದು ಕಾಯ್ದೆ ಕಲಂ 79 ಎ, ಬಿ, ಸಿ ಮತ್ತು 80ನ್ನು ತೆಗೆದು ಹಾಕಲು ಕರಡು ಮಸೂದೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿರುತ್ತದೆ. ಆದರೆ ನಾಔಉ ಇದನ್ನು ಒಪ್ಪುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಇ.ಹನುಮಂತಪ್ಪ, ಜಗದೀಶ, ಎರಿಸ್ವಾಮಿ ಮತ್ತು ಶ್ರೀಧರಗಡ್ಡೆ ಗ್ರಾಮದ ರೈತರು ಭಾಗವಹಿಸಿದ್ದರು.