ETV Bharat / state

ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ 7 ಬಾಲಕಾರ್ಮಿಕರ ರಕ್ಷಣೆ....ಜಿಲ್ಲಾಧಿಕಾರಿಗಳಿಂದ ಎಚ್ಚರಿಕೆ - ಕೇಂದ್ರದ ಸಂಯೋಜಕ ಚಿದಾನಂದ

ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ ಒಟ್ಟು 7 ಮಕ್ಕಳನ್ನು ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಗಳು ದಿಢೀರನೆ ದಾಳಿ ಮಾಡಿ ರಕ್ಷಣೆ ಮಾಡಿದ್ದಾರೆ.

protection-of-7-child-laborers-engaged-in-agricultural-activities-in-bellary
ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ 7 ಬಾಲಕಾರ್ಮಿಕ ಮಕ್ಕಳ ರಕ್ಷಣೆ
author img

By

Published : Feb 12, 2020, 9:50 PM IST

ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕು ಸುಗ್ಗೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹೊನ್ನಳ್ಳಿ ಹಾಗೂ ಎಸ್.ಆರ್ ಪುರ ವ್ಯಾಪ್ತಿಯ 7 ಶಾಲಾ ಮಕ್ಕಳು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದು, ವಿವಿಧ ಇಲಾಖೆಯ ಅಧಿಕಾರಿಗಳ ಸಹಾಯದೊಂದಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಅವರನ್ನು ರಕ್ಷಿಸಿದ್ದಾರೆ.

ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ 7 ಬಾಲಕಾರ್ಮಿಕ ಮಕ್ಕಳ ರಕ್ಷಣೆ.

ಸದರಿ‌ ಶಾಲೆಗೆ ಪುನರ್ವಸತಿ ಮಾಡಿ ವಾಹನಗಳ ಮಾಲೀಕರಿಗೆ, ಚಾಲಕರು, ಹಾಗೂ ಕೃಷಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಒಟ್ಟು 7 ಮಕ್ಕಳ ವಯಸ್ಸು 15 ರಿಂದ 18 ವರ್ಷದೊಳಗಿನವರಾಗಿದೆ.

ಈ ದಾಳಿಯನ್ನು ಜಿಲ್ಲಾ ಕಾರ್ಮಿಕ ಇಲಾಖೆ 2ನೇ ವೃತ್ತದ ಕಾರ್ಮಿಕ ನಿರೀಕ್ಷಕರಾದ ಭೂಪಾಲ್, ಮಕ್ಕಳ ಸಹಾಯ ವಾಣಿ ಕೇಂದ್ರದ ಸಂಯೋಜಕ ಚಿದಾನಂದ, ನೇತ್ರಾ, ಪೊಲೀಸ್ ಇಲಾಖೆ ಕುಡುತಿನಿ ಸಹಾಯಕ ಉಪ ನಿರೀಕ್ಷಕ ವೆಂಕಟೇಶ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ರಾಘವೇಂದ್ರ,‌ ಹೊನ್ನಳಿ ಶಾಲೆಯ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ದ್ವಾವಣ್ಣ, ಸುಭಾನಿ, ಶಾಲೆಯ ಮುಖ್ಯಗುರುಗಳ ಸಹಯೋಗದೊಂದಿಗೆ ದಿಡೀರನೆ ಕೃಷಿ ಕ್ಷೇತ್ರಗಳಿಗೆ ದಾಳಿ ಮಾಡಿ 7 ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ದಾಳಿ ನಂತರ ಹೊನ್ನಳಿ ಶಾಲಾ ಮಕ್ಕಳಿಗೆ ಮಕ್ಕಳ ಹಕ್ಕುಗಳು ಹಾಗೂ ಕಾಯ್ದೆಗಳ ಕುರಿತು ಜಾಗೃತಿ‌ ಮೂಡಿಸಿದ್ದಾರೆ

.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.