ETV Bharat / state

ಬಳ್ಳಾರಿ: 8 ವರ್ಷಗಳಲ್ಲಿ 120 ನವಜಾತ ಹೆಣ್ಣು ಶಿಶುಗಳ ರಕ್ಷಣೆ - The New Mothers' Health Protection Act of 1996

ನವಜಾತ ಶಿಶು ಹತ್ಯೆಗೈದರೆ ಕಾನೂನು ರೀತ್ಯಾ ಶಿಕ್ಷೆ ವಿಧಿಸಲಾಗುತ್ತದೆ. ಜಿಲ್ಲೆಯಲ್ಲಿ ಈವರೆಗೂ ಅಂತಹ ಪ್ರಕರಣಗಳು ನಡೆದಿಲ್ಲ ಎಂದು ವಕೀಲೆ ವಿಜಯಲಕ್ಷ್ಮಿ ಮಾದೂರು ಹೇಳಿದರು.

protect of 120 newborns in 8 year
ನವಜಾತ ಶಿಶುಗಳ ರಕ್ಷಣೆ
author img

By

Published : Feb 11, 2021, 4:42 PM IST

ಬಳ್ಳಾರಿ: 2012-2020ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಬರೋಬ್ಬರಿ 120 ನವಜಾತ ಹೆಣ್ಣುಮಕ್ಕಳ ರಕ್ಷಣೆ ಮಾಡಲಾಗಿದೆ. ವಿಪರ್ಯಾಸ ಎಂದರೆ ಒಂದು ಪ್ರಕರಣ ಕೂಡ ದಾಖಲಾಗಿಲ್ಲ. ಅವುಗಳ ಕೊಲೆ ಅಥವಾ ಸಾವು ಕೂಡ ಸಂಭವಿಸಿಲ್ಲ. ಆದರೆ, ಸುಮೊಟೋ ಕೇಸ್ ದಾಖಲಿಸಬೇಕಿದ್ದ ಪೊಲೀಸ್ ಇಲಾಖೆ ಮಾತ್ರ ಮೌನವಹಿಸಿದೆ.

ಆಗತಾನೇ ಜನಿಸಿದ ಶಿಶುವನ್ನು ತ್ಯಜಿಸಿರುವ ಪೋಷಕರಿಗೆ ಕನಿಷ್ಠ ಶಿಕ್ಷೆಯನ್ನೂ ನೀಡದೆ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂಬುದು ಈ ಮೂಲಕ ಗೊತ್ತಾಗುತ್ತಿದೆ. ಎಂಟು ವರ್ಷಗಳಿಂದ ಜಿಲ್ಲೆಯಲ್ಲಿ ರಕ್ಷಿಸಲಾದ 185 ನವಜಾತ ಶಿಶುಗಳ ಪೈಕಿ 120 ನವಜಾತ ಹೆಣ್ಣು ಶಿಶುಗಳಿವೆ. ಒಟ್ಟು 140 ಶಿಶುಗಳನ್ನು ಅವಲಂಬಿತರಿಗೆ ನೀಡಲಾಗಿದೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸೈಯದ್ ಚಾಂದ್ ಬಾಷಾ ಮಾತನಾಡಿ, ನವಜಾತ ಹೆಣ್ಣು ಶಿಶುಗಳ ರಕ್ಷಣೆಯೇ ಹೆಚ್ಚು. ಈಗಾಗಲೇ 185 ನವಜಾತ ಶಿಶುಗಳ ಪೈಕಿ 140 ನವಜಾತ ಶಿಶುಗಳನ್ನು ಅವರ ಅವಲಂಬಿತರಿಗೆ ನೀಡಲಾಗಿದೆ. ಉಳಿದ ಶಿಶುಗಳನ್ನು‌ ಜಿಲ್ಲಾ ಮಕ್ಕಳ‌ ರಕ್ಷಣಾ ಘಟಕದ ಶಿಶುಗೃಹದಲ್ಲಿಟ್ಟು ಪೋಷಣೆ ಮಾಡಲಾಗುತ್ತಿದೆ ಎಂದರು.

ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ವಕೀಲೆ ವಿಜಯಲಕ್ಷ್ಮಿ ಮಾದೂರು, ಈವರೆಗೂ ನವಜಾತ ಶಿಶುಗಳ‌ ಹತ್ಯೆ ಪ್ರಕರಣ ನಡೆದಿಲ್ಲ. ಅಂತಹ ವಿಶೇಷ ಪ್ರಕರಣಗಳನ್ನ ಪತ್ತೆಹಚ್ಚುವ ಸಲುವಾಗಿಯೇ ಎಸ್​ಜೆಪಿ ಪೊಲೀಸ್ ಪಡೆ ಇದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.