ETV Bharat / state

'ವೇದ' ಕೌಟುಂಬಿಕ ಸದಭಿರುಚಿಯ ಸಿನಿಮಾ: ನಟ ಶಿವರಾಜ್​ ಕುಮಾರ್​ - ವೇದ ಸಿನಿಮಾದ ಪ್ರಮೋಶನ್

ನಟ ಶಿವರಾಜ್​ ಕುಮಾರ್​ ತಮ್ಮ 125ನೇ ಸಿನಿಮಾ 'ವೇದ'ದ ಪ್ರಮೋಶನ್‌ನಲ್ಲಿ ನಿರತರಾಗಿದ್ದಾರೆ.

Actor Shivaraj Kumar
ಹಿರಿಯ ನಟ ಶಿವರಾಜ್​​ ಕುಮಾರ್
author img

By

Published : Dec 15, 2022, 5:23 PM IST

'ವೇದ' ಸಿನಿಮಾ ಪ್ರಮೋಶನ್‌ನಲ್ಲಿ ನಟ ಶಿವರಾಜ್‌ ಕುಮಾರ್

ವಿಜಯನಗರ: ನನಗೆ ಹೊಸಪೇಟೆಯ ನಂಟು ಹೊಸದೇನಲ್ಲ. ನಮ್ಮ ತಂದೆಯವರ ಕಾಲದಿಂದಲೂ ಇದೆ. ತಂದೆಯಿಂದ ಹಿಡಿದು ನನಗೂ ಖುಷಿ ನೀಡಿದ ಪ್ರದೇಶವಿದು ಎಂದು ಹಿರಿಯ ನಟ ಶಿವರಾಜ್​​ ಕುಮಾರ್​ ಹೇಳಿದರು.

ಹೊಸಪೇಟೆ ನಗರಕ್ಕೆ ತಮ್ಮ ಮುಂದಿನ 'ವೇದ' ಸಿನಿಮಾದ ಪ್ರಮೋಶನ್‌ಗಾಗಿ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು. ವೇದ ಕೌಟುಂಬಿಕ ಸದಭಿರುಚಿಯ ಚಿತ್ರ. ಒಂದು ಧಾರ್ಮಿಕ ಹಿನ್ನೆಲೆಯ ಪ್ರೇರಣೆ ಹೊಂದಿದೆ. ಸಮಾಜಕ್ಕೆ ಉತ್ತಮ ಸಂದೇಶ, ಗ್ರಾಮೀಣ ಸೊಗಡು ಇದರಲ್ಲಿದ್ದು, ಮನೆ ಮಂದಿಯೆಲ್ಲಾ ಕುಳಿತು ಆಸ್ವಾದಿಸಬಹುದು ಎಂದರು.

ಇದನ್ನೂ ಓದಿ: ಹೆದರೋದೂ ಇಲ್ಲ.. ಕ್ಷಮಿಸೋದು ಇಲ್ಲ: ಶಿವಣ್ಣನ 'ವೇದ' ಟ್ರೈಲರ್​ಗೆ ಫ್ಯಾನ್ಸ್​ ಫಿದಾ

ಪ್ರೀತಿ, ಪ್ರೇಮ, ಸಂತೋಷ, ಬದುಕು, ನಂಬಿಕೆ ಇವೆಲ್ಲವನ್ನೊಳಗೊಂಡ ಚಿತ್ರವೇ ವೇದ. ಬೇಗನೆ ಚಿತ್ರೀಕರಣ ಪ್ರಾರಂಭಿಸಿ ಅಷ್ಟೇ ವೇಗದಲ್ಲಿ ಮುಗಿಸಿದ್ದೇವೆ. ಗೀತಾ ಹೆಸರಿನ ಬ್ಯಾನರ್ ಅಡಿಯಲ್ಲಿ ಇದು ಮೊದಲ ಚಿತ್ರ ಎಂದು ತಿಳಿಸಿದರು. ಇದೇ ವೇಳೆ, ನನ್ನ ತಮ್ಮನ ಮೂರ್ತಿಯನ್ನು ಕಲ್ಲಾಗಿ ನೋಡುವುದಕ್ಕೆ ಇಷ್ಟ ಆಗೋದಿಲ್ಲ. ಈ ಪ್ರೀತಿ, ಅಭಿಮಾನಕ್ಕೆ ನಾವು ಚಿರಋಣಿ ಎಂದು ಶಿವರಾಜ್‌ ಕುಮಾರ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.