ETV Bharat / state

ಮುಂಡರಗಿ ಬಡಾವಣೆಯಲ್ಲಿ ಜಿ+2 ಮಾದರಿ ಮನೆಗಳ ನಿರ್ಮಾಣ ಪ್ರಗತಿ ಪರಿಶೀಲನಾ ಸಭೆ...

author img

By

Published : Oct 5, 2020, 11:49 PM IST

ಮುಂಡರಗಿ ವಸತಿ ಯೋಜನಾ ಪ್ರದೇಶದ ಸಭಾಂಗಣದಲ್ಲಿಯೇ ನಡೆದ ಸಭೆಯಲ್ಲಿ ಇದುವರೆಗೆ ಆಗಿರುವ ಪ್ರಗತಿ, ಫಲಾನುಭವಿಗಳ ವಂತಿಗೆ, ಬ್ಯಾಂಕ್‍ಗಳ ಸಹಕಾರ ಹಾಗೂ ಇನ್ನೂ ಆಗಬೇಕಾದ ಕೆಲಸ-ಕಾರ್ಯಗಳ ಕುರಿತು ಸುಧೀರ್ಘ ಚರ್ಚೆಗಳು ನಡೆದವು.

ballary
ಪ್ರಗತಿ ಪರಿಶೀಲನಾ ಸಭೆ

ಬಳ್ಳಾರಿ: ನಗರದ ಹೊರವಲಯದ ಮುಂಡರಗಿ ಆಶ್ರಯ ಮಹಾತ್ಮಗಾಂಧಿ ಟೌನ್‍ಶಿಫ್ ಅಡಿ ಜಿ+2 ಮಾದರಿಯ ಮನೆಗಳ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಧ್ಯಕ್ಷತೆಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ಜರುಗಿತು.

ಮುಂಡರಗಿ ವಸತಿ ಯೋಜನಾ ಪ್ರದೇಶದ ಸಭಾಂಗಣದಲ್ಲಿಯೇ ನಡೆದ ಸಭೆಯಲ್ಲಿ ಇದುವರೆಗೆ ಆಗಿರುವ ಪ್ರಗತಿ, ಫಲಾನುಭವಿಗಳ ವಂತಿಗೆ, ಬ್ಯಾಂಕ್‍ಗಳ ಸಹಕಾರ ಹಾಗೂ ಇನ್ನೂ ಆಗಬೇಕಾದ ಕೆಲಸ-ಕಾರ್ಯಗಳ ಕುರಿತು ಸುಧೀರ್ಘ ಚರ್ಚೆಗಳು ನಡೆದವು. ಈಗಾಗಲೇ 5,616 ಮನೆಗಳನ್ನು ನಿರ್ಮಾಣ ಮಾಡಲು ಅನುಮೋದನೆಯಾಗಿದ್ದು, 5,616 ಮನೆಗಳ ಪೈಕಿ 2,592 ಮನೆಗಳನ್ನು ಮೊದಲನೇ ಹಂತದಲ್ಲಿ ನಿರ್ಮಿಸಲು ಮತ್ತು ಉಳಿದ ಮನೆಗಳನ್ನು ಎರಡನೇ ಹಂತದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

2,259 ಫಲಾನುಭವಿಗಳು ವಂತಿಕೆ ಪಾವತಿಸಿದ್ದಾರೆ. ಉಳಿದ 250 ಫಲಾನುಭವಿಗಳು ವಂತಿಗೆ ಪಾವತಿಸಿದ ನಂತರ ದಾಖಲೆಗಳನ್ನು ಪಡೆದು ಅಟ್ಯಾಚ್‍ಮೆಂಟ್ ಮಾಡಲು ಕ್ರಮ ವಹಿಸಲಾಗುವುದು ಎಂದು ಅವರು ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ತಿಳಿಸಿದರು.

ಇದರಲ್ಲಿ 1,265 ಫಲಾನುಭವಿಗಳಿಗೆ ಕೆನರಾ ಬ್ಯಾಂಕ್, 994 ಫಲಾನುಭವಿಗಳಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಾಲ-ಸೌಲಭ್ಯ ಕಲ್ಪಿಸಲಿದೆ. 1,055 ಎಸ್ಸಿ/ಎಸ್ಟಿ ಫಲಾನುಭವಿಗಳು, 1,204 ಇತರೆ/ಅಲ್ಪಸಂಖ್ಯಾತ ಫಲಾನುಭವಿಗಳು ಸೇರಿದಂತೆ ಒಟ್ಟು 2,259 ಫಲಾನುಭವಿಗಳು 4.59ಕೋಟಿ ರೂ.ಹಣ ಪಾವತಿಸಿದ್ದಾರೆ. ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ 50 ಸಾವಿರ ಮತ್ತು ಇತರೆ/ಅಲ್ಪಸಂಖ್ಯಾತ ಸಮುದಾಯಗಳಿಗೆ 1ಲಕ್ಷ ರೂ. ಮುಂಗಡ ವಂತಿಕೆ ಗುರಿ ನಿಗದಿಪಡಿಸಲಾಗಿತ್ತು ಎಂದು ಅವರು ತಿಳಿಸಿದರು.

ಅಗತ್ಯ ಮೂಲಸೌಕರ್ಯ ಕಲ್ಪಿಸುವಿಕೆಗೆ ಸೂಚನೆ: ಮುಂಡರಗಿ ವಸತಿ ಯೋಜನೆಯ ಇದುವರೆಗಿನ ಸಂಪೂರ್ಣ ಪ್ರಗತಿಯನ್ನು ಪರಿಶೀಲಿಸಿದ ಡಿಸಿ ನಕುಲ್ ಅವರು ಈ ಟೌನ್‍ಶಿಪ್‍ನಲ್ಲಿ ರಸ್ತೆ, ಒಳಚರಂಡಿ, ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನು ಈಗಾಗಲೇ ಎಲ್ಲೆಲ್ಲಿ ಮನೆಗಳು ನಿರ್ಮಿಸಲಾಗಿದೆಯೋ ಅಲ್ಲಲ್ಲಿ ಮೊದಲು ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಕೆಎಸ್​ಆರ್​ಟಿಸಿ ಬಸ್‍ಗಳ ಸಂಚಾರಕ್ಕೆ ಕ್ರಮ ವಹಿಸಲಾಗುವುದು ಮತ್ತು ಈ ಟೌನ್‍ಶಿಫ್ ಬಳಿ ಕೈಗಾರಿಕೆಗಳು ಸ್ಥಾಪಿಸುವ ನಿಟ್ಟಿನಲ್ಲಿಯೂ ಈಗಾಗಲೇ ಪ್ರಯತ್ನ ನಡೆಸಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಮುಂಡರಗಿ ವಸತಿ ಯೋಜನೆಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಈ ಸಮಯದಲ್ಲಿ ಪ್ರೋಬೆಷನರಿ ಐಎಎಸ್ ರಾಹುಲ್ ಸಂಕನೂರು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ, ಕಾರ್ಯನಿರ್ವಾಹಕ ಇಂಜಿನಿಯರ್ ಕಾಳಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.