ETV Bharat / state

ಶ್ರೀಧರ್​​​​​​​​ ದೊಡ್ಡಿಗೆ ರಾಷ್ಟ್ರಪತಿ ಚಿನ್ನದ ಪದಕ... ಡಿವೈಎಸ್ಪಿಯಾಗಿ ಬಡ್ತಿ - Sridhar Doddi

ಪೊಲೀಸ್ ಇಲಾಖೆಯಲ್ಲಿ ಅತ್ಯಂತ ದಕ್ಷತೆ, ವೃತ್ತಿ ನಿಷ್ಠೆ, ಪ್ರಾಮಾಣಿಕತೆಯಿಂದ ಸಲ್ಲಿಸಿದ ಸೇವೆಯನ್ನು ಮೆಚ್ಚಿ ಬಳ್ಳಾರಿಯ ಎಸಿಬಿ ಇನ್ಸ್​ಪೆಕ್ಟರ್​ ಶ್ರೀಧರ್ ದೊಡ್ಡಿ ಅವರಿಗೆ ರಾಷ್ಟ್ರಪತಿ ಚಿನ್ನದ ಪದಕವನ್ನು ರಾಜ್ಯಪಾಲ ವಜುಭಾಯ್ ವಾಲಾ ಪ್ರದಾನ ಮಾಡಿದ್ದಾರೆ.

ಶ್ರೀಧರ್ ದೊಡ್ಡಿಗೆ ರಾಷ್ಟ್ರಪತಿ ಚಿನ್ನದ ಪದಕ...ಎಸಿಬಿಯಿಂದ ಡಿವೈಎಸ್ಪಿಯಾಗಿ ಬಡ್ತಿ
author img

By

Published : Aug 1, 2019, 6:39 PM IST

ಬಳ್ಳಾರಿ: ಪೊಲೀಸ್ ಇಲಾಖೆಯಲ್ಲಿ ಅತ್ಯಂತ ದಕ್ಷತೆ, ವೃತ್ತಿ ನಿಷ್ಠೆ, ಪ್ರಾಮಾಣಿಕತೆಯಿಂದ ಸಲ್ಲಿಸಿದ ಸೇವೆಯನ್ನು ಮೆಚ್ಚಿ ಬಳ್ಳಾರಿಯ ಎಸಿಬಿ ಇನ್ಸ್​ಪೆಕ್ಟರ್​ ಶ್ರೀಧರ್ ದೊಡ್ಡಿ ಅವರಿಗೆ ರಾಷ್ಟ್ರಪತಿ ಚಿನ್ನದ ಪದಕವನ್ನು ರಾಜ್ಯಪಾಲ ವಜುಭಾಯ್ ವಾಲಾ ಪ್ರದಾನ ಮಾಡಿದ್ದಾರೆ.

ಶ್ರೀಧರ್ ದೊಡ್ಡಿಗೆ ರಾಷ್ಟ್ರಪತಿ ಚಿನ್ನದ ಪದಕ... ಡಿವೈಎಸ್ಪಿಯಾಗಿ ಬಡ್ತಿ

ಶ್ರೀಧರ್ ದೊಡ್ಡಿ ಮೂಲತಃ ಆಂಧ್ರಪ್ರದೇಶದ ಎಮ್ಮಿಗನೂರಿನ ಗ್ರಾಮದವರಾಗಿದ್ದು, ಬಳ್ಳಾರಿಯ ವೀರಶೈವ ಮಹಾವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದರು. ಇವರು 1982ರಲ್ಲಿ ಪೊಲೀಸ್ ಪೇದೆಯಾಗಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಠಾಣೆಯಲ್ಲಿ ಕೆಲಸ ಮಾಡಿದರು. ನಂತರ 2000ರಲ್ಲಿ ಪಿಎಸ್​ಐ ಆಗಿ ಕಲಬುರಗಿಯ ನಿಂಬರಗಾ ಪೊಲೀಸ್ ಠಾಣೆಯಲ್ಲಿ ಕಾರ್ಯವಹಿಸಿದರು. 2018ರ ನವೆಂಬರ್​ನಲ್ಲಿ ಎಸಿಬಿ ಇನ್ಸ್​ಪೆಕ್ಟರ್​ ಆಗಿ ಬಳ್ಳಾರಿಯಲ್ಲಿ ಸೇವೆ ಸಲ್ಲಿಸಿದರು. ಸದ್ಯ ರಾಯಚೂರಿನ ರಾಜ್ಯ ಗುಪ್ತಚರ ಇಲಾಖೆಯ ಡಿವೈಎಸ್ಪಿ ಆಗಿ ಆಗಸ್ಟ್ 2ರಂದು ಕೆಲಸಕ್ಕೆ ಹಾಜರಾಗುತ್ತಿರುವುದಾಗಿ ತಿಳಿಸಿದ್ದಾರೆ.

ಇವರು ಬಳ್ಳಾರಿ, ಕಲಬುರಗಿ, ಬೀದರ್, ವಿಜಯಪುರ, ಹೊಸಪೇಟೆ, ಬೆಂಗಳೂರು, ಶಿವಮೊಗ್ಗ, ರಾಯಚೂರಿನಲ್ಲಿ ಒಟ್ಟು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 2010ರಲ್ಲಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಮತ್ತು 2019 ಜುಲೈ 31ರಂದು ರಾಷ್ಟ್ರಪತಿಗಳ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

Intro:
ಶ್ರೀಧರ್ ದೊಡ್ಡಿಗೆ ರಾಷ್ಟ್ರಪತಿ ಚಿನ್ನದ ಪದಕ.

ಪೊಲೀಸ್ ಪೇದೆಯಿಂದ ಡಿವೈಎಸ್ಪಿ ಆದ ಶ್ರೀಧರ್ ದೊಡ್ಡಿ‌ .

ಪೊಲೀಸ್ ಇಲಾಖೆಯಲ್ಲಿ ಅತ್ಯಂತ ದಕ್ಷತೆ, ವೃತ್ತಿ ನಿಷ್ಠೆ, ಪ್ರಾಮಾಣಿಕತೆಯಿಂದ ಸಲ್ಲಿಸಿದ ಸೇವೆಯನ್ನು ಮೆಚ್ಚಿ ಬೆಂಗಳೂರಿನ ರಾಜ್ಯ ಭವನದಲ್ಲಿ ಬುಧವಾರ ಸಂಜೆ ಬಳ್ಳಾರಿಯ ಎಸಿಬಿ ಇನ್ಸ್ಪೆಕ್ಟರ್ ಶ್ರೀಧರ್ ದೊಡ್ಡಿ ಅವರಿಗೆ ರಾಷ್ಟ್ರಪತಿಗಳ ಚಿನ್ನದ ಪದಕವನ್ನು ರಾಜ್ಯಪಾಲ ವಜುಭಾಯ್ ವಾಲಾ ಪ್ರಧಾನ ನೀಡಿ ಗೌರವಿಸಿದೆ.

ಈಟಿವಿ ಭಾರತ ನೊಂದಿಗೆ ಮಾತನಾಡಿದ ಡಿವೈಎಸ್ಪಿ ಶ್ರೀಧರ್ ದೊಡ್ಡಿ.

Body:ಆಂದ್ರಪ್ರದೇಶದ ಎಮ್ಮಿಗನೂರಿನ ಗ್ರಾಮದವರು ಓದಿದ್ದು ಎಲ್ಲಾ ಬಳ್ಳಾರಿಯ ವೀರಶೈವ ಮಹಾವಿದ್ಯಾಲಯದಲ್ಲಿ.

ಸೇವೆ:

ಆರಂಭದಲ್ಲಿ 1982ರಲ್ಲಿ ಪೊಲೀಸ್ ಪೇದೆಯಾಗಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಠಾಣೆಯಲ್ಲಿ ಕೆಲಸ ಮಾಡಿ ನಂತರ 2003 ರಲ್ಲಿ ಪಿ.ಎಸ್.ಐ ನೇರ ನೇಮಕಾತಿಯಲ್ಲಿ ಉತ್ತಿರ್ಣರಾಗಿ ಗುಲ್ಬರ್ಗದ ನಿಂಬರಗಾ ಪೊಲೀಸ್ ಠಾಣೆಯಲ್ಲಿ ಕಾರ್ಯವಹಿಸುತ್ತಿರುವಾಗ ಸವರ್ಣಿಯರು ಮತ್ತು ದಲಿತರ ನಡುವಿನ ಗಲಾಟೆಯನ್ನು ವಿಷಯ ತಳಿದ ಕೂಡಲೇ ಸ್ಥಳಕ್ಕರ ಧಾವಿಸಿ ಲಾಠಿ ಚಾರ್ಜ್ ಅಲ್ಲದೇ ಗಾಳಿಯಲ್ಲಿ ಗುಂಡು ಹಾರಿಸಿ, ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆದಿದ್ದು, ಹಿರಿಯ ಅಧಿಕಾರಿಗಳ ಮತ್ತು ಎಸ್.ಸಿ, ಎಸ್.ಟಿ ಆಯೋಗದವರ ಮೆಚ್ಚುಗೆಗೆ ಪಾತ್ರರಾಗಿ‌ನಗದು ಬಹುಮಾನವನ್ನು ಪಡೆದುಕೊಂಡರು.

ಪಿ.ಐ ಆಗಿ ಅಬಕಾರಿ‌ ದಳದಲ್ಲಿರುವಾಗ ರಾಯಚೂರಿನಲ್ಲಿ‌ದಾಖಲೆ ಸ್ವರೂಪದ ರೂ 31.51 ಲಕ್ಷ ಬೆಲೆಯ ಅಕ್ರಮ ಸಾರಾಯಿ ದಾಸ್ತಾನನ್ನು ಜಪ್ತಿ ಮಾಡಿದ್ದಾರೆ. ಇಂಡಿ ವೃತ್ತದಲ್ಲಿರುವಾಗ ಮೂವರು ಕುಖ್ಯಾತ ಅಪರಾಧಿಗಳನ್ನು ಬಂಧಿಸಿ,‌ ಅವರಿಂದ 11 ಕಂಟ್ರಿ ಪಿಸ್ತೂಲ್ ಗಳನ್ನು ಪತ್ತೆ ಮಾಡಿ, ಕೊಲೆ, ಡಕಾಯತಿ, ಅಪಹರಣ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.

2014 ರಲ್ಲಿ ಹೊಸಪೇಟೆಯಲ್ಲಿ ಅಕ್ರಮವಾಗಿ ಎಸ್.ಆರ್.ಇ ಬಸ್ ನಲ್ಲಿ ಸಾಗಿಸುತ್ತಿದ್ದ ರೂ 51 ಲಕ್ಷ ನಗದು ಹಣವನ್ನು ಪತ್ತೆ ಮಾಡಿ ಸರ್ಕಾರಕ್ಕೆ ವಹಿಸಿ ಸರ್ಕಾರದಿಂದ ಮೆಚ್ಚುಗೆ ವಹಿಸಿದ್ದಾರೆ.

ನಂತರ 2018 ನವೆಂಬರ್ ನಲ್ಲಿ ಎಸಿಬಿ ಬಳ್ಳಾರಿಗೆ ಕೆಲಸಕ್ಕೆ ಇನ್ಸ್ಪೆಕ್ಟರ್ ಆಗಿ ಸೇವೆಗೆ ಸೇರಿದರು. ಬಳ್ಳಾರಿ‌ ಜಿಲ್ಲೆಯ 16 ಎಸಿಬಿ ರೆಡ್ ಗಳನ್ನು ಮಾಡಿದ್ದೆನೆ. ಅದರಲ್ಲಿ ಪ್ರಮುಖವಾಗಿ ಜಂಟಿ ಆಯುಕ್ತರನ್ನು ಎಸಿಬಿಯಲ್ಲಿ ಬಲೆಗೆ ಹಿಡಿ್ದ್ದುದು ಅತ್ಯುತ್ತಮ ವಾಗಿತ್ತು ಜಿಲ್ಲೆಯ ಜನರು ಉತ್ತಮ ಮಾಹಿತಿಯನ್ನು ನೀಡುತ್ತಿದ್ದರು ಎಂದು ತಿಳಿಸಿದರು.

2019 ರಂದು ಆಗಸ್ಟ್ 2 ರಂದು ರಾಯಚೂರಿನ ರಾಜ್ಯ ಗುಪ್ತ ಇಲಾಖೆಯ ಡಿವೈಎಸ್ಪಿ ಆಗಿ ಕೆಲಸಕ್ಕೆ ಹಾಜರಾಗುತ್ತಿರುವೆ ಎಂದು ಹೇಳಿದರು.

ಬಳ್ಳಾರಿ, ಗುಲ್ಬರ್ಗ, ಬೀದರ್ ,ಬಿಜಾಪುರ, ಹೊಸಪೇಟೆ, ಬೆಂಗಳೂರು, ಶಿವಮೊಗ್ಗ, ರಾಯಚೂರಿನಲ್ಲಿ ಒಟ್ಟು 36 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ.

2010 ರಲ್ಲಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಮತ್ತು 2019 ಜುಲೈ 31 ರಂದು ರಾಷ್ಟ್ರಪತಿಗಳ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 65 ಜನರಿಗೆ ಈ ಪದಕ ನೀಡಿದ್ದಾರೆ 17 ವ್ಯಕ್ತಿ ಶ್ರೀಧರ್ ದೊಡ್ಡಿಯಾಗಿದ್ದಾರೆ.

Conclusion:ಒಟ್ಟಾರೆಯಾಗಿ ದಕ್ಷ ಮತ್ತು ಪ್ರಾಮಾಣಿಕ ಕೆಲಸ ಮಾಡಿದರೇ
ಸಮಾಜವು ನಮ್ಮನ್ನ ಗೌರವಿಸುತ್ತದೆ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.