ಬಳ್ಳಾರಿ: ಜಿಲ್ಲೆಯ ಕೊಟ್ಟೂರು ತಾಲೂಕಿನ ಚಿರಬಿ ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಗುರುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ ಪರಿಶಿಷ್ಟ ಪಂಗಡದ ಮಹಿಳೆ ದೇವಿರಮ್ಮ ಅಧ್ಯಕ್ಷರಾಗಿ, ಸಾಮಾನ್ಯ ವರ್ಗದ ಚಿನ್ಮಯನಂದ ಸ್ವಾಮಿ ಉಪಾಧ್ಯಕ್ಷರಾಗಿ ಲಾಟರಿ ಮೂಲಕ ಆಯ್ಕೆಯಾಗಿದ್ದಾರೆ.
10 ಸದಸ್ಯ ಬಲವುಳ್ಳ ಗ್ರಾಮ ಪಂಚಾಯತ್ಗೆ ಒಬ್ಬ ಸದಸ್ಯ ಗೈರಾಗಿದ್ದರಿಂದ 9 ಜನರ ಸಂಖ್ಯಾ ಬಲದಲ್ಲಿ ರೇಖಾ ಹಾಗೂ ಗಂಗಾಧರಪ್ಪ ಬಣದ 5 ಮತಗಳ ಪೈಕಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರೇಖಾ ಅವರ ಮತ ಬ್ಯಾಲೆಟ್ ಪತ್ರದಲ್ಲಿ ಸಹಿ ಮಾಡಿ ಚಲಾಯಿಸಿದ್ದರಿಂದ ಹಾಗೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಚಲಾಯಿಸಿದ ಎರಡು ಮತಗಳು ತಿರಸ್ಕೃತಗೊಂಡು 4 ಮತಗಳು ಸಮಬಲವಾದ್ದರಿಂದ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಲಾಟರಿ ಮೂಲಕ ಅಧ್ಯಕ್ಷರಾಗಿ ದೇವಿರಮ್ಮ ಹಾಗೂ ಉಪಾಧ್ಯಕ್ಷರಾಗಿ ಚಿನ್ಮಯನಂದ ಸ್ವಾಮಿ ಆಯ್ಕೆಯಾದರು.
ಓದಿ : ಫಲಕಗಳಲ್ಲಿ ಕನ್ನಡ ಕಡ್ಡಾಯ: ಆಯುಕ್ತೆ ಪ್ರೀತಿ ಗೆಹ್ಲೋಟ್ ಆದೇಶ
ಚುನಾವಣಾಧಿಕಾರಿಯಾಗಿ ಮರಿಸ್ವಾಮಿ ಕಾರ್ಯನಿರ್ವಹಿಸಿದರು, ಸದಸ್ಯರಾದ ಪಿ.ನಾಗರಾಜ, ಎಂ.ಶಾಂತಮ್ಮ, ಬಿಜೆಪಿ ಜಿಲ್ಲಾಧ್ಯಕ್ಷ ಪಿ.ಚನ್ನಬಸವನಗೌಡ, ತಾಲೂಕು ಪಂಚಾಯತ್ ಅಧ್ಯಕ್ಷ ಎಸ್.ಗುರುಮೂರ್ತಿ, ಪಿ.ಹೆಚ್.ಕೊಟ್ರೇಶ್, ಬೂದಿ ನಾಗರಾಜ ಹನುಂಮತಪ್ಪ, ಅವಿನಾಶ್, ಮೂಗಪ್ಪ, ತೂಲಹಳ್ಳಿ ನಾಗರಾಜ, ರಂಗಪ್ಪ ತೂಪಕಹಳ್ಳಿ ರಮೇಶ, ಎನ್.ತಿಪ್ಪಣ್ಣ, ವಿಶ್ವನಾಥ ಸಂತೋಶ, ಚಿರಬಿ ಕೊಟ್ರೇಶ್, ಅರವಿಂದ ಇನ್ನಿತರರು ಇದ್ದರು.