ಹೊಸಪೇಟೆ :ಹಂಪಿ ಉತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡುತ್ತಿದೆ ಎಂದು ಲೋಕಸಭಾ ಸದಸ್ಯ ವೈ.ದೇವೆಂದ್ರಪ್ಪ ತಿಳಿಸಿದ್ರು.
ಕನ್ನಡ ವಿಶ್ವವಿದ್ಯಾಲಯದಲ್ಲಿ ಹಂಪಿಯ ಉತ್ಸವಕ್ಕೆ ಶಿಲ್ಪ ಕಲಾವಿದರಿಗೆ ಹತ್ತು ದಿನಗಳ ಕಾಲ ಶಿಬಿರ ಆಯೋಜನಾ ಕಾರ್ಯಕ್ರಮಕ್ಕೆ ಸಂಸದ ವೈ ದೇವೆಂದ್ರಪ್ಪ ಚಾಲನೆ ನೀಡಿದ್ರು. ಪ್ರವಾಸೋದ್ಯಮ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಡೆಯಿಂದ ಹಂಪಿ ಉತ್ಸವಕ್ಕಾಗಿ ಅನುದಾನ ಪಡೆದುಕೊಂಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉತ್ಸವಕ್ಕೆ 5 ಕೋಟಿ ರೂ. ಹಣವನ್ನು ಮಂಜೂರು ಮಾಡುತ್ತಾರೆ ಎಂದರು.
ವಿಜಯನಗರ ಜಿಲ್ಲೆಯ ವಿಷಯದಲ್ಲಿ ನಾನು ಏನೂ ಹೇಳಲಾರೆ. ಈ ವಿಷಯ ಸಿಎಂ ನಿರ್ಧಾರದ ಮೇಲೆ ನಿಂತಿದೆ. ಶಾಸಕ ಆನಂದ ಸಿಂಗ್ ಮತ್ತು ಸೋಮಶೇಖರ ರೆಡ್ಡಿ ಅವರಿಬ್ಬರ ಮಧ್ಯೆ ಇದ್ದೇನೆ. ಎರಡು ದೋಣಿಯ ಮೇಲೆ ಕಾಲಿಟ್ಟಿದ್ದೇನೆ. ಅದಕ್ಕಾಗಿ ಸರಕಾರ ಮತ್ತೊಮ್ಮೆ ಜಿಲ್ಲೆಯ ಶಾಸಕರ ಜೊತೆಗೆ ಸಭೆ ನಡೆಸಿ ಈ ಚರ್ಚೆಸಲಿದೆ ಎಂದ್ರು.
ಜಿಲ್ಲೆಯ ಹರಪ್ಪನಹಳ್ಳಿ ಕೂಡ್ಲಿಗಿ ಹಗಿರಿಬೊಮ್ಮನಹಳ್ಳಿ ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಯನ್ನು ಹಾಕಿಕೊಂಡಿದೆ. ನಾನು ರೈತರ ಮಗ ಅದಕ್ಕಾಗಿ ಕೆರೆಗಳಿಗೆ ನೀರು ತುಂಬಿದರೆ ಎಲ್ಲಾ ರೈತರಿಗೆ ಅನುಕೂಲವಾಗುತ್ತದೆ. ಜಿಲ್ಲೆಯ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹಂಪಿ ಉತ್ಸವಕ್ಕೆ ಹಣ ಬಿಡುಗಡೆ ಮಾಡಿಸುವ ಕುರಿತು ಸಿಎಂ ಮನವೊಲಿಸುತ್ತಿದ್ದಾರೆ ಎಂದ್ರು.