ಬಳ್ಳಾರಿ : ಲಾಕ್ಡೌನ್ ಹಿನ್ನೆಲೆ ಗಣಿನಗರಿಯ ಮಾರುತಿ ಕಾಲೊನಿಯಲ್ಲಿನ ಬಡ ಹಾಗೂ ಕೂಲಿ ಕಾರ್ಮಿಕರಿಗೆ ಪ್ರಗತಿ ಸೇವಾ ಟ್ರಸ್ಟ್‌ನಿಂದ ತರಕಾರಿ ಪಾಕೇಟ್ ವಿತರಿಸಲಾಯಿತು. ಪ್ರಗತಿ ಸೇವಾ ಟ್ರಸ್ಟ್ನ ಅಧ್ಯಕ್ಷ ಟಿ ಎಸ್ ಸುರೇಶಕುಮಾರ ಅವರ ನೇತೃತ್ವದಲ್ಲಿ ಹಲವು ತಂಡಗಳನ್ನು ಮಾಡಿಕೊಂಡು ಮಾರುತಿ ಕಾಲೋನಿಯ ಬಡ ಹಾಗೂ ಕೂಲಿಕಾರ್ಮಿಕರು ವಾಸಿಸುತ್ತಿರುವ ಪ್ರದೇಶಕ್ಕೆ ತೆರಳಿ ಅಂದಾಜು 400ಕ್ಕೂ ಅಧಿಕ ತರಕಾರಿ ಪಾಕೇಟ್‌ನ ವಿತರಿಸಿದರು.
ಟ್ರಸ್ಟ್ನ ಪದಾಧಿಕಾರಿಗಳಾದ ಗೋವಿಂದ್, ನಾಗೇಶ್, ರೋಷನ್ ಹಾಗೂ ಖಾಸೀಂ ಸೇರಿದಂತೆ ಇತರರು ಇದ್ದರು.