ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಜಿಲ್ಲಾಮಟ್ಟದ ಅಂಚೆ ಚೀಟಿ ಪ್ರದರ್ಶನ ನಡೆಯಲಿದೆ.
ನಗರದ ಸೆಂಟ್ರನರಿ ಹಾಲ್ ಸಭಾಂಗಣದಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಆರ್ ಶ್ರೀನಿವಾಸ ವಿಶೇಷ ಲಕೋಟೆ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದರು.
ಜಿಲ್ಲಾ ಅಂಚೆ ಅಧಿಕ್ಷಕ ಕೆ. ಮಹದೇವಪ್ಪ ಮಾತನಾಡಿ, ಭಾರತದಲ್ಲಿ ಆರಂಭದಲ್ಲಿ 25 ಅಂಚೆ ಕಚೇರಿಗಳು ಇದ್ದವು. ಇಂದು 1,55,000 ಅಂಚೆ ಕಚೇರಿಗಳಿವೆ. ಮುಖ್ಯವಾಗಿ ಅತಿ ಹೆಚ್ಚು ಗ್ರಾಮೀಣ ಪ್ರದೇಶದಲ್ಲಿ 1,40,000 ಅಂಚೆ ಕಚೇರಿಗಳು ಇವೆ. ಇಂದು ಬಳ್ಳಾರಿ ಜಿಲ್ಲೆಯ ವಿಶೇಷ ವ್ಯಕ್ತಿಗಳ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದೇವೆ. ಅವುಗಳಲ್ಲಿ ಪ್ರಾದೇಶಿಕ, ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಅಂಚೆ ಚೀಟಿಗಳನ್ನು ಒಳಗೊಂಡಿವೆ ಎಂದು ತಿಳಿಸಿದರು.
ವಿಶೇಷ ಅಂಚೆ ಚೀಟಿಗಳಲ್ಲಿ ವ್ಯಕ್ತಿಗಳು, ಶಾಲಾ ಕಾಲೇಜ್, ಸಂಘ ಸಂಸ್ಥೆಗಳ ಬಗ್ಗೆ ಮೂರು ದಿನಗಳಲ್ಲಿ 15 ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡುತ್ತವೆ. ಐದು ಲಕೋಟೆಗಳಲ್ಲಿ ಡಿ.ಬಿ.ಡ್ಯಾಂ, ದರೋಜಿ ಕರಡಿಧಾಮ, ಗ್ರೇಟ್ ಇಂಡಿಯನ್ ಬ್ರಸ್ಟಡ್, ರಂಗಭಾರತಿ, ಸುಕೋ ಬ್ಯಾಂಕ್ ಬಿಡುಗಡೆ ಮಾಡಲಾಗುತ್ತದೆ ಎಂದರು. ತಮ್ಮ ಭಾವಚಿತ್ರದ ಅಂಚೆ ಚೀಟಿ (ಮೈ ಸ್ಟ್ಯಾಂಪ್ಯನ್ನು) ಪಡೆಯಲು 300 ರೂಪಾಯಿ ಬೆಲೆ ನೀಡಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ನಾಗಮೋಹನ್, ಮೋಹಿತ್ ಮಸ್ಕಿ, ಜಿಲ್ಲಾ ಅರಣ್ಯಾಧಿಕಾರಿ ಡಾ.ಪಿ. ರಮೇಶ್ ಕುಮಾರ್, ಅಂಚೆ ಅದೀಕ್ಷಕ ಮಹದೇವಪ್ಪ, ಕೆ.ಬಸವರಾಜ್, ಧ್ವಾರಕೇಶ ರೆಡ್ಡಿ ಮತ್ತು ಶಾಲಾ ವಿದ್ಯಾರ್ಥಿಗಳು , ಅಂಚೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.