ETV Bharat / state

ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಜನಸಂಖ್ಯೆ ಗಣನೀಯ ಏರಿಕೆ - ವಿಜಯನಗರ ಜಿಲ್ಲೆಯಲ್ಲಿ ಜನಸಂಖ್ಯೆ ಗಣನೀಯ ಏರಿಕೆ

ಉಭಯ ಜಿಲ್ಲೆಗಳಲ್ಲಿ 2011ರ ಜನ ಗಣತಿಯ ಪ್ರಕಾರ ಒಟ್ಟು ಜನಸಂಖ್ಯೆ 27,54,598 ಇತ್ತು. ಈ ಪೈಕಿ ಪುರುಷರು13,91,243, ಮಹಿಳೆಯರು13,63,355 ಇದ್ದರು. 2021ರಲ್ಲಿ ಒಟ್ಟು ಜನಸಂಖ್ಯೆ 33,80,240 ಕ್ಕೇರಿದೆ.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಜನಸಂಖ್ಯೆ ಗಣನೀಯ ಏರಿಕೆ

author img

By

Published : Jul 12, 2021, 10:43 PM IST

ಬಳ್ಳಾರಿ: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸರಿಸುಮಾರು 33.80 ಲಕ್ಷಕ್ಕೆ ಜನಸಂಖ್ಯೆ ಏರಿಕೆಯಾಗಿದೆ. ಕಳೆದೊಂದು ದಶಕದಲ್ಲಿ 6.5 ಲಕ್ಷ ಜನಸಂಖ್ಯೆ ಹೆಚ್ಚಾಗಿದೆ.

ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ವಿಪತ್ತಿನಲ್ಲೂ ಕುಟುಂಬ ಯೋಜನೆ ಸೇವೆ, ಸ್ವಾವಲಂಬಿ ರಾಷ್ಟ್ರ ಮತ್ತು ಕುಟುಂಬಕ್ಕೆ ಹಾದಿ ಎಂಬ ಘೋಷವಾಕ್ಯದಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಗೃತಿ ರಥದ ಅಭಿಯಾನದಲ್ಲಿ ಬಿಡುಗಡೆ ಮಾಡಿರುವ ಅಂಕಿ- ಅಂಶಗಳಿವು‌. ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಡಿ. ಪವಿತ್ರ್ರಾ ಅವರು ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿಂದು ಜಾಗೃತಿ ಮೂಡಿಸುವ ರಥಕ್ಕೆ ಹಸಿರು ನಿಶಾನೆ ತೋರಿದರು.

ಜನಸಂಖ್ಯೆ ಗಣನೀಯ ಏರಿಕೆ: ಉಭಯ ಜಿಲ್ಲೆಗಳಲ್ಲಿ 2011ರ ಜನ ಗಣತಿಯ ಪ್ರಕಾರ ಒಟ್ಟು ಜನಸಂಖ್ಯೆ 27,54,598 ಇತ್ತು. ಈ ಪೈಕಿ ಪುರುಷರು13,91,243, ಮಹಿಳೆಯರು13,63,355 ಇದ್ದರು. ಸದ್ಯ ಅಂದರೇ 2021ರಲ್ಲಿ ಒಟ್ಟು ಜನಸಂಖ್ಯೆ 33,80,240 ಕ್ಕೇರಿದೆ. ಇದರಲ್ಲಿ ಪುರುಷರು 17,06,387, ಮಹಿಳೆಯರು 16,73,842 ಸಂಖ್ಯೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಕಿ- ಸಂಖ್ಯೆಗಳು ತಿಳಿಸಿವೆ.

ಜನಸಂಖ್ಯೆ ನಿಯಂತ್ರಣಕ್ಕಾಗಿ ಪ್ರಸ್ತುತ ಪುರುಷ ಮತ್ತು ಮಹಿಳೆಯರಿಗೆ ಶಾಶ್ವತ ಶಸ್ತ್ರಚಿಕಿತ್ಸಾ ವಿಧಾನಗಳು ಲಭ್ಯವಿವೆ. ಮಹಿಳೆಯರಿಗೆ ಲ್ಯಾಪ್ರೊಸ್ಕೋಪಿಕ್ ಮತ್ತು ಟ್ಯುಬೆಕ್ಟಮಿ‌‌ ಶಸ್ತ್ರಚಿಕಿತ್ಸೆ ಇದ್ದು ಇದರ ಅಡಿಯಲ್ಲಿ ಇಲ್ಲಿಯವರೆಗೆ 13,158 ಮಹಿಳಾ ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪುರುಷರಿಗೆ ನೋ ಸ್ಕಾಲ್‍ ಪೇಲ್ ವ್ಯಾಸಕ್ಟಮಿ ಶಸ್ತ್ರಚಿಕಿತ್ಸೆ ಇದ್ದು ಇದರ ಅಡಿಯಲ್ಲಿ 04 ಜನ ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಜನನದ ಮಧ್ಯೆ ಅಂತರವಿಡಲು ತಾತ್ಕಾಲಿಕ ವಿಧಾನಗಳು ಅಡಿಯಲ್ಲಿ ಇಲ್ಲಿಯವರೆಗೆ 8,852 ಮಹಿಳೆಯರಿಗೆ ವಂಕಿ ಅಳವಡಿಸಲಾಗಿದ್ದು, 8,458 ಮಹಿಳಾ ಫಲಾನುಭವಿಗಳಿಗೆ ನುಂಗುವ ಮಾತ್ರೆ ವಿತರಿಸಲಾಗಿದೆ. ಇತ್ತೀಚೆಗೆ ಬಂದ ಎಮ್.ಪಿ.ಎ (ಅಂತರ) ಗರ್ಭ ನಿರೋಧಕ ಚುಚ್ಚುಮದ್ದನ್ನು 2,983 ಫಲಾನುಭವಿಗಳು ಪಡೆಯುತ್ತಿದ್ದಾರೆ.

ವಿಶೇಷವಾಗಿ ಹೆರಿಗೆಯಾದ ತಕ್ಷಣ ಪಿಪಿಐಯುಸಿಡಿ(ವಂಕಿ) 48 ಗಂಟೆ ಒಳಗಡೆ 5,886 ಮಹಿಳೆಯರಿಗೆ ಪಿಪಿಐಯುಸಿಡಿ ಅಳವಡಿಸುವುದರಿಂದ ಗಣನೀಯವಾಗಿ ಜನಸಂಖ್ಯೆಯನ್ನು ನಿಯಂತ್ರಿಸಲಾಗಿದೆ. ಮತ್ತು ಪುರುಷರಿಗೆ ನಿರೋಧ್ ಲಭ್ಯವಿದ್ದು 41,850 ಫಲಾನುಭವಿಗಳಿಗೆ ನಿರೋಧ್ ವಿತರಿಸಿ ಜಿಲ್ಲೆಯಲ್ಲಿ ಜನಸಂಖ್ಯೆ ನಿಯಂತ್ರಿಸಲು ವ್ಯಾಪಕ ಕ್ರಮಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.