ETV Bharat / state

ಲಾಕ್​ಡೌನ್ ಎಫೆಕ್ಟ್: ಮಾಸಾಶನವಿಲ್ಲದೆ ಪರದಾಡುತ್ತಿರುವ ಬಡ ಕಲಾವಿದರು - ಗಣಿನಾಡು ಬಳ್ಳಾರಿ ಜಿಲ್ಲೆ

ಕಳೆದ ಎರಡು‌ ತಿಂಗಳಿಂದಲೂ ಮಾಸಾಶನ ಬಾರದೆ ಕಲಾವಿದರೆಲ್ಲರೂ ಕಂಗಾಲಾಗಿದ್ದಾರೆ. ಅಂದಾಜು 411 ಮಂದಿ ಕಲಾವಿದರು ಮಾಸಾಶನ ಪಡೆಯುವಲ್ಲಿ ಅರ್ಹರಿದ್ದು, ಇದೀಗ ಮಾಸಾಶನ ಇಲ್ಲದೇ ಅವರೆಲ್ಲರ ಬದುಕು ದುಸ್ತರವಾಗಿದೆ.

Bellary
ಲಾಕ್​ಡೌನ್ ಎಫೆಕ್ಟ್
author img

By

Published : Jun 2, 2020, 8:42 PM IST

ಬಳ್ಳಾರಿ: ಲಾಕ್​ಡೌನ್ ಜಿಲ್ಲೆಯ ಕಲಾವಿದರ‌ ಮಾಸಾಶನಕ್ಕೂ ಕುತ್ತು ತಂದಿದ್ದು, ಬಡ ಕಲಾವಿದರ ಬದುಕು ಅಕ್ಷರಶಃ ಬೀದಿ ಪಾಲಾಗಿದೆ.

ಕಳೆದ ಎರಡು‌ ತಿಂಗಳಿಂದಲೂ ಮಾಸಾಶನ ಬಾರದೆ ಕಲಾವಿದರೆಲ್ಲರೂ ಕಂಗಾಲಾಗಿದ್ದಾರೆ. ಅಂದಾಜು 411 ಮಂದಿ ಕಲಾವಿದರು ಮಾಸಾಶನ ಪಡೆಯುವಲ್ಲಿ ಅರ್ಹರಿದ್ದು, ಬಯಲಾಟ, ಹಗಲು ವೇಷ ಸೇರಿದಂತೆ ನಾನಾ ಕಲಾ ಪ್ರಕಾರಗಳ ನೂರಾರು ಕಲಾವಿದರು, ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ನೀಡುವ ಈ ಮಾಸಾಶನದಲ್ಲೇ ಜೀವನ ಸಾಗಿಸುತ್ತಿದ್ದವರು. ಆದರೆ ಇದೀಗ ಮಾಸಾಶನ ಇಲ್ಲದೇ ಬದುಕು ದುಸ್ತರವಾಗಿದೆ.

ಪ್ರತಿದಿನವೂ ಬಳ್ಳಾರಿಯ ಡಾ.ರಾಜ್ ರಸ್ತೆಯಲ್ಲಿರುವ ಸಾಂಸ್ಕೃತಿಕ ಸಮುಚ್ಚಯದ ಬಯಲು ರಂಗಮಂದಿರ ಆವರಣದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಾಸಾಶನದ ಅರ್ಜಿಗಳನ್ನ ಹಿಡಿದುಕೊಂಡು ಬರುವ ಕಲಾವಿದರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವರೆಗೂ ಅಂದಾಜು 1500 ಅರ್ಜಿಗಳನ್ನ ಸ್ವೀಕರಿಸಿದ ಇಲಾಖೆಯ ಅಧಿಕಾರಿಗಳು ಈಗಾಗಲೇ 875 ಮಂದಿ ಅರ್ಹ ಕಲಾವಿದರನ್ನ ಗುರುತಿಸಿ, ಅವರ ಅರ್ಜಿಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ.

ಜಿಲ್ಲೆಯ ಸೋಮಲಾಪುರ ಗ್ರಾಮದ ಹಗಲು ವೇಷ ಕಲಾವಿದ ರಾಮಾಂಜಿನಪ್ಪ ಈಟಿವಿ ಭಾರತದೊಂದಿಗೆ ಮಾತನಾಡಿ, ಹಿಂದಿನ ಎರಡು ತಿಂಗಳು ಹಾಗೂ ಕಳೆದ ಎರಡು ತಿಂಗಳು ಸೇರಿ ನಾಲ್ಕು ತಿಂಗಳ ಕಾಲ ಮಾಸಾಶನವೇ ಬಂದಿಲ್ಲ. ಅದರಿಂದ ನಮ್ಮ‌ ಜೀವನ‌ ನಿರ್ವಹಣೆಗೂ ಕಷ್ಟಕರವಾಗಿದೆ. ಈ ಮೊದಲು ಕೇವಲ 1500 ರೂಪಾಯಿ ಮಾಸಾಶನ ನೀಡಲಾಗುತ್ತಿತ್ತು. ‌ಅದೀಗ ಎರಡು ಸಾವಿರ ರೂಪಾಯಿ ಆಗಿದೆ ಅಂತ ಹಿಂದಿನ‌ ಸಹಾಯಕ‌ ನಿರ್ದೇಶಕರು ಹೇಳಿದ್ದರು. ಲಾಕ್​ಡೌನ್​ನಿಂದಾಗಿ‌ ಕಾರ್ಯಕ್ರಮಗಳೂ ಇಲ್ಲದೇ, ಇತ್ತ ಮಾಸಾಶನವೂ ಇಲ್ಲದೇ ನಮ್ಮಂತಹ‌ ಬಡ ಕಲಾವಿದರ ಪರದಾಟ ಹೇಳತೀರದಾಗಿದೆ ಎಂದು ತಮ್ಮ ಅಳಲನ್ನ ತೋಡಿಕೊಂಡರು.

ಬಾಪೂಜಿ ನಗರದ ಬಯಲಾಟ ಕಲಾವಿದೆ ಲಕ್ಷ್ಮೀದೇವಿ ಈಟಿವಿ ಭಾರತದೊಂದಿಗೆ ಮಾತನಾಡಿ, ಕೇವಲ 1500 ರೂ.ಗಳ‌ ಮಾಸಾಶನ ನಮಗೆ ಏನಕ್ಕೂ ಸಾಲದು. ಅದರಲ್ಲೂ ಈ ಲಾಕ್​ಡೌನ್ ಸಮಯದಲ್ಲಿ ನಮ್ಮ‌ ಜೀವನೋಪಾಯ ಕಷ್ಟಕರವಾಗಿದೆ. ಹೀಗಾಗಿ, ರಾಜ್ಯ ಸರ್ಕಾರ ಮಾಸಾಶನ ಪಡೆಯುವಂತಹ ಬಡ ಕಲಾವಿದರಿಗೆ ಸಹಾಯಹಸ್ತ ನೀಡಬೇಕೆಂದು ಕೋರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.