ಬಳ್ಳಾರಿ: ನಗರದಲ್ಲಿ ಪೊಲೀಸ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಇಲ್ಲಿನ ನಲ್ಲಚೆರವು ಪ್ರದೇಶ ವ್ಯಾಪ್ತಿಯಲ್ಲಿ ಬರುವ ವಾಲ್ಮೀಕಿ ಭವನದಲ್ಲಿ ಅಂದಾಜು 50 ಬೆಡ್ಗಳುಳ್ಳ ಕೋವಿಡ್ ಕೇರ್ ಸೆಂಟರ್ ಕಾರ್ಯಾರಂಭ ಮಾಡಿದೆ.
![BALLARI DIST POLICE COVID CARE CENTER NEWS](https://etvbharatimages.akamaized.net/etvbharat/prod-images/kn-bly-3-police-covid-care-center-vsl-7203310_10082020154432_1008f_1597054472_39.jpg)
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರ ಕೋರಿಕೆಯ ಮೇರೆಗೆ ಜಿಲ್ಲಾಡಳಿತದಿಂದ ಈ ವ್ಯವಸ್ಥೆಯನ್ನ ಮಾಡಲಾಗಿದ್ದು, ಇದೀಗ ಕೇವಲ 50 ಬೆಡ್ಗಳನ್ನ ಮಾತ್ರ ವ್ಯವಸ್ಥೆ ಮಾಡಲಾಗಿದೆ. ಹಂತ ಹಂತವಾಗಿ ಬೆಡ್ಗಳ ಸಂಖ್ಯೆಯನ್ನ ಹೆಚ್ಚಳ ಮಾಡುವ ಚಿಂತನೆಯನ್ನ ಜಿಲ್ಲಾಡಳಿತ ಇಟ್ಟುಕೊಂಡಿದೆ.
![BALLARI DIST POLICE COVID CARE CENTER NEWS](https://etvbharatimages.akamaized.net/etvbharat/prod-images/kn-bly-3-police-covid-care-center-vsl-7203310_10082020154432_1008f_1597054472_797.jpg)
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಹಾಗೂ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ವಾಲ್ಮೀಕಿ ಭವನಕ್ಕೆ ಭೇಟಿ ನೀಡಿ, ಕೋವಿಡ್ ಕೇರ್ ಸೆಂಟರ್ ಪರಿಶೀಲನೆ ನಡೆಸಿದರು.
![BALLARI DIST POLICE COVID CARE CENTER NEWS](https://etvbharatimages.akamaized.net/etvbharat/prod-images/kn-bly-3-police-covid-care-center-vsl-7203310_10082020154432_1008f_1597054472_514.jpg)
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಪೊಲೀಸ್ ಸಿಬ್ಬಂದಿ ಹಾಗೂ ಇನ್ನಿತರೆ ಇಲಾಖಾ ಅಧಿಕಾರಿ ವರ್ಗದವರಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಈ ಕೋವಿಡ್ ಕೇರ್ ಸೆಂಟರ್ ನಿರ್ಮಿಸಲಾಗಿದೆ. ಈ ಕೇರ್ ಸೆಂಟರ್ಅನ್ನು ವಿಶೇಷವಾಗಿ ಪೊಲೀಸ್ ಸಿಬ್ಬಂದಿ ಸಲುವಾಗಿಯೇ ಸ್ಥಾಪಿಸಲಾಗಿದೆ. ಮೊದಲನೇ ಆದ್ಯತೆ ಪೊಲೀಸರಿಗೆ ನೀಡಲಾಗುತ್ತದೆ. ಎರಡನೇಯದಾಗಿ ಇನ್ನಿತರೆ ಅಧಿಕಾರಿವರ್ಗಕ್ಕೆ ಮೀಸಲಿಸಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಈವರೆಗೆ 1801 ಮಂದಿಯನ್ನ ಕೋವಿಡ್ ಟೆಸ್ಟ್ಗೆ ಒಳಪಡಿಸಿದ್ದು, ಅದರಲ್ಲಿ 296 ಮಂದಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ ಎಂದರು.