ಬಳ್ಳಾರಿ: ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳನನ್ನು ಸೆರೆ ಹಿಡಿದ ಪೊಲೀಸರು 9,59,150 ರೂಪಾಯಿ ಮೌಲ್ಯದ ಬಂಗಾರ, ಬೆಳ್ಳಿ, ನಗದು ವಶ ಪಡಿಸಿಕೊಂಡಿದ್ದಾರೆ.
ಗಣಿನಾಡು ಬಳ್ಳಾರಿಯ ಗ್ರಾಮಾಂತರ ಪ್ರದೇಶ ಠಾಣೆಯ ಸರಹದ್ದಿನ ಗುಗ್ಗರಹಟ್ಟಿಯ ಬೊಬ್ಬಕುಂಟ, ಕಮ್ಮರಚೇಡು, ಕಮ್ಮರಚೇಡು ಕ್ರಾಸ್ನ ಗ್ರಾಮಗಳಲ್ಲಿ ನಾಲ್ಕು ಕಡೆ ಮತ್ತು ಪರಮದೇವನಹಳ್ಳಿ ಠಾಣೆಯ ಸರಹದ್ದಿನ ರೂಪನಗುಡಿ, ಲಿಂಗದೇವರಹಳ್ಳಿ, ವೈ.ಕಗ್ಗಲ್ ಗ್ರಾಮಗಳಲ್ಲಿನ ಮೂರು ಕಡೆ ಹಗಲಿನಲ್ಲಿ ಮನೆಗಳಲ್ಲಿನ ಬಂಗಾರ, ಬೆಳ್ಳಿ, ಮೊಬೈಲ್, ಮೋಟರ್ ಸೈಕಲ್, ನಗದು ಹಣ ಕಳ್ಳತನ ಮಾಡಿರುವುದಾಗಿ ಆರೋಪಿ ಪ್ರಕಾಶ್ ( 22 ) ಒಪ್ಪಿಕೊಂಡಿದ್ದಾನೆ.
![press release](https://etvbharatimages.akamaized.net/etvbharat/prod-images/kn-01-bly-101019-crimenews-ka10007_10102019215800_1010f_1570724880_813.jpg)
ಆರೋಪಿ ಒಟ್ಟು 9,59,150 ರೂಪಾಯಿ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳು ಮತ್ತು ನಗದು ಹಣ ಕಳ್ಳತನ ಮಾಡಿದ್ದಾನೆ.
ಅದರಲ್ಲಿ 341 ಗ್ರಾಂ ವಿವಿಧ ಬಂಗಾರ ಆಭರಣದ ಮೌಲ್ಯ 9,42,000 ರೂಪಾಯಿ, 43 ಗ್ರಾಂ ಬೆಳ್ಳಿಯ ವಸ್ತುಗಳ ಮೌಲ್ಯ 1,150 ರೂಪಾಯಿ, ಕಳ್ಳತನ ಮಾಡಿದ ನಗದು ಹಣ 3,000, ಕೃತ್ಯಕ್ಕೆ ಬಳಸಿದ ಮೋಟರ್ ಸೈಕಲ್ 10,000 ರೂಪಾಯಿ, ಕೃತ್ಯಕ್ಕೆ ಬಳಸಿದ ಮೊಬೈಲ್ 3,000 ರೂ, ಕೃತ್ಯಕ್ಕೆ ಬಳಿಸಿದ ಒಂದು ಕಬ್ಬಿಣದ ರಾಡ್ ಜಪ್ತಿಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.