ETV Bharat / state

ಕೋವಿಡ್ ಇಳಿಮುಖವಾದ ನಂತರ 3 ದಿನ ಹಂಪಿ ಉತ್ಸವ ಆಚರಿಸಿ : ಸಿಎಂಗೆ ಮನವಿ - 3 ದಿನಗಳ ಕಾಲ ಹಂಪಿ ಉತ್ಸವ ಆಚರಿಸುವಂತೆ ಮನವಿ

ಒಂದು ದಿನದ ತುಂಗಾರತಿಯನ್ನು ಹಂಪಿ ಉತ್ಸವವೆಂದು ಬಿಂಬಿಸದೆ, ಕೋವಿಡ್ 19 ನಿಯಂತ್ರಣಕ್ಕೆ ಬಂದ ನಂತರ ಮೂರು ದಿನಗಳ ಕಾಲ ಪೂರ್ಣ ಪ್ರಮಾಣದ ಹಂಪಿ ಉತ್ಸವ ಮಾಡಬೇಕು..

plea to organize hampi utsav after corona
ಬಳ್ಳಾರಿ
author img

By

Published : Nov 9, 2020, 5:52 PM IST

ಬಳ್ಳಾರಿ : ಒಂದು ದಿನದ ತುಂಗಾರತಿಯನ್ನು ಹಂಪಿ ಉತ್ಸವವೆಂದು ಬಿಂಬಿಸದೆ, ಕೋವಿಡ್ 19 ತಿಳಿಯಾದ ನಂತರ ಮೂರು ದಿನಗಳ ಕಾಲ ಪೂರ್ಣ ಪ್ರಮಾಣದ ಹಂಪಿ ಉತ್ಸವ ಮಾಡಲು ಜಿಲ್ಲಾಧಿಕಾರಿ ಮ‌ೂಲಕ ಮುಖ್ಯಮಂತ್ರಿಗಳಿಗೆ ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆ ಮನವಿ‌ ಮಾಡಿದೆ.

ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ
ಬಳ್ಳಾರಿ ನಗರದ ರಾಯಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಹಂಪಿ ಉತ್ಸವವನ್ನು ಮೂರು ದಿನಗಳವರೆಗೆ ಆಚರಣೆ ಮಾಡಬೇಕು ಎಂದು ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆ ಸಂಸ್ಥಾಪಕ ಜೆ.ಎಂ ಬಸವರಾಜ್ ಮಾತನಾಡಿ, ಒಂದು ದಿನದ ತುಂಗಾರತಿಯನ್ನು ಹಂಪಿ ಉತ್ಸವವೆಂದು ಬಿಂಬಿಸದೆ, ಕೋವಿಡ್ 19 ನಿಯಂತ್ರಣಕ್ಕೆ ಬಂದ ನಂತರ ಮೂರು ದಿನಗಳ ಕಾಲ ಪೂರ್ಣ ಪ್ರಮಾಣದ ಹಂಪಿ ಉತ್ಸವ ಮಾಡಬೇಕು.
ಹಾಗೇ ಪ್ರತಿ ವರ್ಷ ಮುಂಗಡ ಪತ್ರದಲ್ಲಿ ಶಾಶ್ವತ ಅನುದಾನವನ್ನು ಒದಗಿಸಲು ಘೋಷಣೆ ಮಾಡಬೇಕು ಎಂದ್ರು.ಹಂಪಿ ಉತ್ಸವ ಮೂರು ದಿನಗಳ ಆಚರಣೆ ಮಾಡಬೇಕು ಹಾಗೂ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬೇಕೆಂದು ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಬಳ್ಳಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕಲಾವಿದರಾದ ಜಿಲಾನಿ ಭಾಷ, ಅಭಿಶೇಕ್, ಟಿ.ಸಾಯಿ ಪ್ರವಾಲಿಕ, ಮಂಜುನಾಥ ಗೋವಿಂದವಾಡ, ಗೌರಿ ಶಂಕರ್ ಇನ್ನಿತರರು ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.