ಹೊಸಪೇಟೆ (ವಿಜಯನಗರ): ಹಾಡಹಗಲೇ ಕೊಡಲಿಯಿಂದ ಕೊಚ್ಚಿ ತಮ್ಮನೇ ತನ್ನ ಅಣ್ಣನನ್ನು ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಅಲ್ಲಿಪುರ ಗ್ರಾಮದಲ್ಲಿ ನಡೆದಿದೆ. ಇಬ್ಬರು ಸಹೋದರರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಶಿವಪ್ಪ (30) ಕೊಲೆಯಾದ ವ್ಯಕ್ತಿಯಾಗಿದ್ದು, ಪಕ್ಕಿರೇಶ್ ಎಂಬಾತ ಕೊಲೆ ಆರೋಪಿಯಾಗಿದ್ದಾನೆ. ನಿತ್ಯ ಅಣ್ಣ-ತಮ್ಮಂದಿರ ನಡುವೆ ಜಗಳ ನಡೆಯುತ್ತಿತ್ತು. ಯಾವಾಗಲೂ ನಿನ್ನನ್ನು ಕೊಲೆ ಮಾಡುವೆ ಎಂದು ಪಕ್ಕಿರೇಶ್ ತನ್ನ ಅಣ್ಣನಿಗೆ ಹೇಳುತ್ತಿದ್ದನಂತೆ. ಕೊಲೆಯಾದ ಶಿವಪ್ಪ ಮದ್ಯವ್ಯಸನಿಯಾಗಿದ್ದ ಎಂದು ಹೇಳಲಾಗುತ್ತಿದೆ.
ಆರೋಪಿ ಪಕ್ಕಿರೇಶ್ 5 ವರ್ಷಗಳ ಹಿಂದೆ ತಾಯಿಯನ್ನೂ ಕೂಡ ಕೊಲೆ ಮಾಡಿದ್ದನಂತೆ. ಸ್ಥಳಕ್ಕೆ ಹಿರೇಹಡಗಲಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Telangana Rape case: ಆರೋಪಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ