ಹೊಸಪೇಟೆ: ನಗರದಲ್ಲಿ ಪ್ರತಿನಿತ್ಯದಂತೆ ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ನಗರಕ್ಕೆ ಆಗಮಿಸಿದ್ದರು. ಆದರೆ ಕೊರೊನಾ ವೈರಸ್ ಹಿನ್ನಲೆ ಬಸ್ ನಿಲ್ದಾಣದಲ್ಲಿ ಬಸ್ಗಳಿಲ್ಲದ ಕಾರಣ ಪ್ರಯಾಣಿಕರು ಪರದಾಡುವಂತಾಗಿದ್ದು, ಖಾಸಗಿ ವಾಹಗಳನ್ನು ಏರಿ ತಮ್ಮ ಗ್ರಾಮಗಳತ್ತ ಸಾಗಿದರು.
ಇಲ್ಲಿನ ಗಾಂಧಿ ವೃತ್ತ, ಅಂಬೇಡ್ಕರ್ ಸರ್ಕಲ್, ಎಂ.ಜಿ.ರೋಡ್ ವಾಲ್ಮೀಕಿ ವೃತ್ತ, ಮೇನ್ ಬಜಾರ್ ರೋಟರಿ ಸರ್ಕಲ್ ಸೇರಿದಂತೆ ನಗರದಲ್ಲಿ ಕೊರೊನಾ ವೈರಸ್ ಭೀತಿಯಿದ್ದರೂ ಅನಿವಾರ್ಯವಾಗಿ ಮತ್ತು ದಿನನಿತ್ಯ ಕೆಲಸ ಕಾರ್ಯಗಳಿಗೆ ಆಗಮಿಸಿದ್ದರು. ಆದರೆ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಪ್ರಯಾಣಿಕರಿಗೆ ಸಾರಿಗೆ ಇಲಾಖೆಯ ಸಿಬ್ಬಂದಿ ಬಸ್ ಇವತ್ತು ಬರವುದಿಲ್ಲ ಹೊರಗಡೆ ಹೋಗಿ ಎಂದು ವಾಪಸ್ ಕಳಿಸುತ್ತಿದ್ದರು.
ಇನ್ನು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮುಖಕ್ಕೆ ಮಾಸ್ಕ್ ಧರಿಸಿ ಇವಾಗ ಕೊರೊನಾ ಬಂದಿದೆ ಮನೆಯನ್ನು ಬಿಟ್ಟು ಯಾರು ಹೊರಗೆ ಬರಬಾರದು ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳಿ. ಊಟವನ್ನು ಮಾಡುವಾಗ ಸಾಬೂನು ಹಚ್ಚಿಕೊಂಡು ಚೆನ್ನಾಗಿ ಕೈಗಳನ್ನು ತೊಳೆದುಕೊಳ್ಳಿ ಎಂದು ಸಲಹೆ ನೀಡಿದ್ರು.