ಬಳ್ಳಾರಿ: ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ.ನಾಗೇಂದ್ರ ಎಂಬವರು ನಿಧನ ಹೊಂದಿರುವುದಕ್ಕೆ ಮೆಡಿಕಲ್ ಸರ್ವಿಸ್ ಸೆಂಟರ್ ರಾಜ್ಯ ಸಮಿತಿ ಹಾಗು ದಂತ ವೈದ್ಯಕೀಯ ವಿದ್ಯಾರ್ಥಿಗಳ ವೇದಿಕೆ ವೈಟ್ಸ್ಪಾರ್ಕ್ ಸಂಘಟನೆಗಳು ತೀವ್ರವಾದ ನೋವು ಮತ್ತು ವಿಷಾದ ವ್ಯಕ್ತಪಡಿಸುತ್ತಿವೆ.
ಕೆಲಸದೊತ್ತಡ ಹಾಗೂ ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕಳೆದ ಮೂರು ದಿನಗಳ ಹಿಂದೆ ನಂಜನಗೂಡು ತಾಲ್ಲೂಕು ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರ ನಿಧನ ಹೊಂದಿರುವುದಕ್ಕೆ ವೈಟ್ ಸ್ಪಾರ್ಕ್ಸ್ ಮೆಡಿಕಲ್ ಆ್ಯಂಡ್ ಡೆಂಟಲ್ ವಿದ್ಯಾರ್ಥಿಗಳ ವೇದಿಕೆ ಮತ್ತು ಮೆಡಿಕಲ್ ಸರ್ವಿಸ್ ಸೆಂಟರ್ ನೇತೃತ್ವದಲ್ಲಿ ಇಂದು ಆನ್ಲೈನ್ ಪ್ರತಿಭಟನೆ ನಡೆಯಿತು.
ಕೊರೊನಾ ಸಮಯದಲ್ಲಿ ರಾಜ್ಯದ ವಿವಿಧ ಜಿಲ್ಲೆಯ ನೂರಾರು ವೈದ್ಯರು ಮತ್ತು ಸಿಬ್ಬಂದಿ ಬಹಳ ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ. ಆದ್ರೆ ಸರ್ಕಾರ ವೈದ್ಯರಿಗೆ ಮತ್ತು ಸಿಬ್ಬಂದಿಗೆ ಆರೋಗ್ಯ ಕ್ಷೇತ್ರದಲ್ಲಿ, ವಿಶೇಷವಾಗಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕಡೆಗಣಿಸುತ್ತಾ ಬಂದಿದೆ. ಖಾಸಗೀಕರಣ ನೀತಿಯನ್ನು ಅನುಸುರಿಸುತ್ತ ಬಂದಿರುವುದರಿಂದಾಗಿ ಇಂದು ಈ ದುಸ್ಥಿತಿ ಬಂದಿದೆ ಎಂದರು.
ಈ ಸಮಯದಲ್ಲಿ ವೈಟ್ ಸ್ಪಾರ್ಕ್ಸ್ ಮೆಡಿಕಲ್ ಅಂಡ್ ಡೆಂಟಲ್ ವಿದ್ಯಾರ್ಥಿಗಳ ವೇದಿಕೆ ಮತ್ತು ಮೆಡಿಕಲ್ ಸರ್ವಿಸ್ ಸೆಂಟರ್ ನೂರಾರು ವೈದ್ಯರು, ಮೆಡಿಕಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬೇಡಿಕೆಗಳು :
1. ಡಾ.ನಾಗೇಂದ್ರ ಅವರಿಗೆ ನ್ಯಾಯಕೊಡಿ.
2. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರರಿಗೆ ಶಿಕ್ಷೆ ವಿಧಿಸಿ.
3. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ಉಳಿಸಿ.
4. ಸಾರ್ವಜನಿಕರು ಆರೋಗ್ಯ ಬಲಪಡಿಸಿ