ಹೊಸಪೇಟೆ (ವಿಜಯನಗರ): ಹರಪನಹಳ್ಳಿ ತಾಲೂಕಿನ ಮದಕರಿ ಕ್ಯಾಂಪ್ ಬಳಿ ರಸ್ತೆ ಅಪಘಾತದಲ್ಲಿ ಗಾಯವಾಗೊಂಡಿದ್ದ ಯುವಕ ಒಂದೂವರೆ ಗಂಟೆಗಳ ಕಾಲ ಸಾವು ಬದುಕಿನ ಹೋರಾಟ ನಡೆಸಿದ ಘಟನೆ ನಡೆದಿದೆ.
ಶ್ರೀನಿವಾಸ್ ಬಳ್ಳಾರಿ ಎಂಬ ಯುವಕ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ ಯುವಕ. ದಾವಣಗೆರೆಯಿಂದ ಹರಪನಳ್ಳಿ ಕಡೆ ಹೋಗುತಿದ್ದ ಯುವಕನ ಬೈಕ್ ಸ್ಕೀಡ್ ಆಗಿ ಬಿದ್ದು ತೀವ್ರ ಗಾಯಗೊಂಡು ಒದ್ದಾಡುತ್ತಿದ್ದರೂ ಸಹ ಸ್ಥಳಕ್ಕೆ ಆಂಬ್ಯುಲೆನ್ಸ್ ಬಂದಿಲ್ಲ. ಈ ವೇಳೆ ಯುವಕನನ್ನು ಉಳಿಸಲು ಸಾರ್ವಜನಿಕರು ಹರಸಾಹಸ ಪಟ್ಟಿದ್ದಾರೆ.
ಆಂಬುಲೆನ್ಸ್ ಬಾರದಿದ್ದಕ್ಕೆ ಯುವಕನನ್ನು ಟಾಟಾ ಏಸ್ನಲ್ಲಿ ಹಾಕಿ ಸಾರ್ವಜನಿಕರು ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. 108 ವಾಹನ ಸಮಯಕ್ಕೆ ಸರಿಯಾಗಿ ಸಿಗದೆ ಇದ್ದಿದ್ದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದರು.