ETV Bharat / state

ನಾನ್‌ ಸತ್ರೂ ವ್ಯಾಕ್ಸಿನ್ ತಗೋಳಲ್ಲ ಅಂತ ವರಾತ ತೆಗೆದ ಅಜ್ಜಿ - hosapete latest news

ಗ್ರಾಮೀಣ ಭಾಗದಲ್ಲಿ ಲಸಿಕೆ ಅಭಿಯಾನವನ್ನು ಗ್ರಾಪಂ ಅಧಿಕಾರಿಗಳು, ಸದಸ್ಯರು ಕೈಗೊಂಡಿದ್ದಾರೆ. ಮನೆ ಮನೆಗೆ ತೆರಳಿ ಲಸಿಕೆ ಪಡೆಯಿರಿ ಅಂತ ಹೋದಾಗ ಇಂತಹ ಸನ್ನಿವೇಶಗಳು ಬೆಳಕಿಗೆ ಬಂದಿವೆ..

people are not ready to get vaccine
ವಾಕ್ಸಿನ್​​ ಹಾಕಿಸಿಕೊಳ್ಳಲು ಹಿಂದೇಟು
author img

By

Published : Jun 26, 2021, 3:07 PM IST

Updated : Jun 26, 2021, 3:20 PM IST

ಹೊಸಪೇಟೆ(ವಿಜಯನಗರ): ನಾನು ಸತ್ರೂ ಕೊರೊನಾ ವ್ಯಾಕ್ಸಿನ್​​ ತಗೋಳಲ್ಲ ಎಂದು ಅಜ್ಜಿಯೊಬ್ಬರು ಹಠ ಹಿಡಿದು ಕುಳಿತ ಘಟನೆ ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡಾದಲ್ಲಿ ಇಂದು ನಡೆದಿದೆ. ನನಗೆ ಒಂದು ವೇಳೆ ಕೊರೊನಾ ಬಂತೆಂದ್ರೆ ನೀವು ನನ್ನನ್ನು ಆಸ್ಪತ್ರೆಗೆ ಬಂದು ನೋಡಬೇಡಿ. ನಾನು ಯಾವುದೇ ಕಾರಣಕ್ಕೂ ಕೊರೊನಾ ಲಸಿಕೆ ಪಡೆಯಲ್ಲ ಎಂದು ವೃದ್ಧೆಯೋರ್ವರು ಹಠ ಮಾಡಿದ್ದಾರೆ.

ವ್ಯಾಕ್ಸಿನ್​​ ಹಾಕಿಸಿಕೊಳ್ಳಲು ಅಜ್ಜಿ ಹಿಂದೇಟು..

ಅದೇ ತಾಂಡದಲ್ಲಿ ಇತ್ತ ಗ್ರಾಪಂ ಸದಸ್ಯರೊಬ್ಬರು ಸ್ನೇಹಿತನಿಗೆ ಲಸಿಕೆ ಹಾಕಿಸು ಎಂದಾಗ, ಸಾವನ್ನು ಯಾರೂ ತಡೆಯೋಕಾಗೋಲ್ಲ. ಸಾಯೋದಿದ್ರೆ ಯಾವತ್ತಾದ್ರೂ ಸಾಯುತ್ತೇವೆ. ನಾನು ಕೋವಿಡ್​ ಇಂಜೆಕ್ಷನ್ ಹಾಕಿಸಿಕೊಳ್ಳಲ್ಲ. ಸಣ್ಣ, ಸಣ್ಣ ವಯಸ್ಸಿನ ಹುಡುಗರು ಸತ್ರು. ಅವರನ್ನು ನಾವು ಉಳಿಸಿಕೊಳ್ಳಲು ಸಾಧ್ಯವಾಯಿತಾ ಎಂದು ಪ್ರಶ್ನೆ ಮಾಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಲಸಿಕೆ ಅಭಿಯಾನವನ್ನು ಗ್ರಾಪಂ ಅಧಿಕಾರಿಗಳು, ಸದಸ್ಯರು ಕೈಗೊಂಡಿದ್ದಾರೆ. ಮನೆ ಮನೆಗೆ ತೆರಳಿ ಲಸಿಕೆ ಪಡೆಯಿರಿ ಅಂತ ಹೋದಾಗ ಇಂತಹ ಸನ್ನಿವೇಶಗಳು ಬೆಳಕಿಗೆ ಬಂದಿವೆ.

ಇದನ್ನೂ ಓದಿ: ತಂದೆ ಆಗುತ್ತಿರುವ ನಿಖಿಲ್ ಕುಮಾರಸ್ವಾಮಿ; ಏನಂದ್ರು ಸ್ಯಾಂಡಲ್​ವುಡ್​ ಯುವರಾಜ?

Last Updated : Jun 26, 2021, 3:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.