ETV Bharat / state

ಬಳ್ಳಾರಿ: 3 ಗ್ರಾಪಂ ಬಿಟ್ಟು ಉಳಿದ 234 ಪಂಚಾಯಿತಿಗಳಲ್ಲಿ ಕೊರೊನಾ ಸೋಂಕು ಪತ್ತೆ - ಕೊರೊನಾ ಸುದ್ದಿ

ಜಿಲ್ಲೆಯಲ್ಲಿರುವ ಎಲ್ಲ ಗ್ರಾ.ಪಂಗಳಲ್ಲಿ ಗ್ರಾಪಂ ಟಾಸ್ಕ್​​ಫೋರ್ಸ್‍ಗಳನ್ನು ಕ್ರಿಯಾಶೀಲಗೊಳಿಸಲಾಗಿದೆ. ಇದರ ಜೊತೆಗೆ ಬಳ್ಳಾರಿ ಜಿಲ್ಲಾಡಳಿತವು ವಿಶೇಷವಾಗಿ ಕುಟುಂಬ ಸಂರಕ್ಷಣಾ ಟಾಸ್ಕ್​ಫೋರ್ಸ್ ಅಂತ ರಚಿಸಿದ್ದು, ಪ್ರತಿ 50 ತಂಡಗಳಿಗೆ ಒಂದರಂತೆ ತಂಡಗಳನ್ನು ರಚಿಸಲಾಗಿದ್ದು, ಈ ತಂಡದ ಸದಸ್ಯರು ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ ಎಂದಿದ್ದಾರೆ.

ಜಿಪಂ ಸಿಇಒ ಕೆ.ಆರ್.ನಂದಿನಿ
ಜಿಪಂ ಸಿಇಒ ಕೆ.ಆರ್.ನಂದಿನಿ
author img

By

Published : May 22, 2021, 9:45 PM IST

Updated : May 22, 2021, 10:12 PM IST

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿರುವ 237 ಗ್ರಾಪಂಗಳಲ್ಲಿ 234 ಗ್ರಾಪಂಗಳಲ್ಲಿನ ಜನರಿಗೆ ಕೊರೊನಾ ಸೊಂಕು ತಗುಲಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಹೇಳಿದ್ದಾರೆ. ಹಡಗಲಿ ತಾಲೂಕಿನ ಹ್ಯಾರಾಡ ಗ್ರಾಪಂ ಸೇರಿದಂತೆ 3 ಗ್ರಾಪಂಗಳಲ್ಲಿ ಮಾತ್ರ ಕೊರೊನಾ ಸೊಂಕಿತರಿಲ್ಲ. ಉಳಿದ ಎಲ್ಲ ಗ್ರಾ.ಪಂಗಳಲ್ಲಿ ಕೊರೊನಾ ಸೋಂಕಿತರಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿರುವ ಎಲ್ಲ ಗ್ರಾ.ಪಂಗಳಲ್ಲಿ ಗ್ರಾಪಂ ಟಾಸ್ಕ್​​ಫೋರ್ಸ್‍ಗಳನ್ನು ಕ್ರಿಯಾಶೀಲಗೊಳಿಸಲಾಗಿದೆ. ಇದರ ಜೊತೆಗೆ ಬಳ್ಳಾರಿ ಜಿಲ್ಲಾಡಳಿತವು ವಿಶೇಷವಾಗಿ ಕುಟುಂಬ ಸಂರಕ್ಷಣಾ ಟಾಸ್ಕ್​ಫೋರ್ಸ್ ಅಂತ ರಚಿಸಿದ್ದು, ಪ್ರತಿ 50 ತಂಡಗಳಿಗೆ ಒಂದರಂತೆ ತಂಡಗಳನ್ನು ರಚಿಸಲಾಗಿದ್ದು, ಈ ತಂಡದ ಸದಸ್ಯರು ಮನೆ - ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ ಎಂದರು.

ಸಮೀಕ್ಷೆಯ ಸಂದರ್ಭದಲ್ಲಿ ಜ್ವರ, ಶೀತ, ಕೆಮ್ಮುವಿನಂತ ಲಕ್ಷಣಗಳಿದ್ದಲ್ಲಿ ಜನರಲ್ ಮೆಡಿಕಲ್ ಕಿಟ್ ನೀಡಲಿದ್ದು, ಮೂರು ದಿನಗಳಲ್ಲಿ ಕಡಿಮೆಯಾಗದಿದ್ದಲ್ಲಿ ಆರೋಗ್ಯ ಸಿಬ್ಬಂದಿ ರ‍್ಯಾಪಿಡ್ ಆಂಟಿಜೇನ್ ಕಿಟ್ ಮುಖಾಂತರ ತಪಾಸಣೆ ನಡೆಸಿ ಪಾಸಿಟಿವ್ ಬಂದಲ್ಲಿ ಕೋವಿಡ್ ಕಿಟ್ ನೀಡಲಿದ್ದಾರೆ ಎಂದರು.

ಎರಡು ದಿನ ಮಾತ್ರ ಲಾಕ್​​ಡೌನ್ ಸಡಿಲಿಕೆ

ಮೇ 24 ಮತ್ತು 25 ರಂದು ಮಾತ್ರ ಲಾಕ್​​ಡೌನ್ ಸಡಿಲಿಕೆ ಮಾಡಿದ್ದು, ಈ ಎರಡು ದಿನ ಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಸ್ಪಷ್ಟಪಡಿಸಿದ್ದಾರೆ.

ಕಳೆದ 5 ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​ ಮೇ 24ರಂದು ಕೊನೆಗೊಳ್ಳಲಿದ್ದು, ಕೇವಲ ಎರಡು ದಿನಗಳು ಮಾತ್ರ ಅಗತ್ಯ ವಸ್ತುಗಳ ಖರೀದಿಗಾಗಿ ಲಾಕ್​​ಡೌನ್ ಸಡಿಲಿಕೆ ಮಾಡಲಾಗುವುದು ಎಂದಿದ್ದಾರೆ.

ಮೇ 24 ಮತ್ತು 25 ರಂದು ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದ್ದು, ಮೇ 25 ರಂದು ಮಧ್ಯಾಹ್ನ 12 ಗಂಟೆಯಿಂದ ಮೇ 31ರವರೆಗೆ ಸಂಪೂರ್ಣವಾಗಿ ಲಾಕ್​ಡೌನ್ ಮಾಡಲಾಗುವುದೆಂದು ಘೋಷಿಸಿದ್ದಾರೆ.

ಮೇ 31ರ ಬಳಿಕ ಮತ್ತೆ ಒಂದು ದಿನಕ್ಕೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗುವುದು.‌ ಇದಾದ ಬಳಿಕ ಮತ್ತೆ 5 ದಿನ ಸಂಪೂರ್ಣ ಲಾಕ್​ಡೌನ್ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Last Updated : May 22, 2021, 10:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.