ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮರಿಯಮ್ಮನಹಳ್ಳಿಯ 17 ವರ್ಷದ ಬಾಲಕಿಯ ಬಾಲ್ಯ ವಿವಾಹವನ್ನು ವಿವಿಧ ಇಲಾಖೆಯ ಅಧಿಕಾರಿಗಳು ತಡೆದಿದ್ದಾರೆ.
ಇಂದು ಮದುವೆ ನಿಗದಿಯಾಗಿತ್ತು. ಈ ಸ್ಥಳಕ್ಕೆ ನಿನ್ನೆ ಪಿಡಿಒ ಖಜಾಬಾನಿ , ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವ ಕುಮಾರ್, ಸಿಡಿಪಿಒ ಸುದೀಪ್, ಸೂಪರ್ ವೈಜರ್ ರೇಣುಕಾ, ಗ್ರಾಮ ಲೆಕ್ಕಾಧಿಕಾರಿ ಮತ್ತು ಮಕ್ಕಳ ಸಹಾಯವಾಣಿ ಸಿಬ್ಬಂದಿ ನಾಗರಾಜ್ ಭೇಟಿ ನೀಡಿದರು.
ಬಾಲಕಿಯ ಮನೆಗೆ ತೆರಳಿ ಪೋಷಕರಿಗೆ ಬಾಲ್ಯ ವಿಹಾದ ನಿಷೇಧ ಕಾನೂನಿನ ಕುರಿತು ತಿಳಿವಳಿಕೆ ನೀಡಿದ್ದಾರೆ. ನಂತರ ಪೋಷಕರಿಂದ ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ.
ತಾಲೂಕಿನ ಮಗಿಯಮ್ಮನಹಳ್ಳಿ ಗ್ರಾಮಗಳಿಂದ ಬಾಲ್ಯ ವಿವಾಹ ಸಿದ್ಧತೆ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಾಹಿತಿ ಬಂದಿದೆ. ಮಾಹಿತಿ ನೀಡಿದ್ದರಿಂದ ಜುಲೈ 25ರಂದು ಮದುವೆ ನಿಗದಿಯಾಗಿದ್ದ ಸ್ಥಳಕ್ಕೆ ಹೋಗಿ ಇದನ್ನು ತಿಳಿದ ಅಧಿಕಾರಿಗಳು ಮದುವೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಕ್ಕಳ ಸಹಾಯವಾಣಿ ಸಿಬ್ಬಂದಿ ನಾಗರಾಜ್ ದೂರವಾಣಿ ಮೂಲಕ ಈಟಿವಿ ಭಾರತದ ಪ್ರತಿನಿಧಿಗೆ ತಿಳಿಸಿದರು.