ETV Bharat / state

ರಸ್ತೆ ಅಗಲೀಕರಣದಲ್ಲಿ ತಾರತಮ್ಯ ಆರೋಪ: ಅಧಿಕಾರಿಗಳ ವಿರುದ್ಧ ಆಕ್ರೋಶ - Ballari Road Construction News

ಬಳ್ಳಾರಿ ನಗರ ಹೊರವಲಯದ ತಾಳೂರು ರಾಜ್ಯ ಹೆದ್ದಾರಿ ರಸ್ತೆ 128ನ್ನು ಅಗಲೀಕರಣ ಮಾಡುವಂತೆ ಕಳೆದ 8 ವರ್ಷಗಳಿಂದ ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಅಖಿಲ ಭಾರತ ಜನಗಣ ಒಕ್ಕೂಡ ರಾಷ್ಟ್ರೀಯ ಸಂಚಾಲಕರಾದ ಎನ್.ಗಂಗಿರೆಡ್ಡಿ ದೂರಿದ್ದಾರೆ.

officers-delay-for-the-road-construction-
ರಸ್ತೆ ಅಗಲೀಕರಣದಲ್ಲಿ ತಾರತಮ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ
author img

By

Published : Jan 4, 2020, 10:01 AM IST

ಬಳ್ಳಾರಿ: ನಗರ ಹೊರವಲಯದ ತಾಳೂರು ರಾಜ್ಯ ಹೆದ್ದಾರಿ ರಸ್ತೆ 128ನ್ನು ಅಗಲೀಕರಣ ಮಾಡುವಂತೆ ಕಳೆದ 8 ವರ್ಷಗಳಿಂದ ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಅಖಿಲ ಭಾರತ ಜನಗಣ ಒಕ್ಕೂಡ ರಾಷ್ಟ್ರೀಯ ಸಂಚಾಲಕ ಎನ್.ಗಂಗಿರೆಡ್ಡಿ ದೂರಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕಳೆದ 8 ವರ್ಷಗಳಿಂದ ರಾಜ್ಯ ಹೆದ್ದಾರಿ 128 ಚಾನಾಳು ಕ್ರಾಸ್​​ನಿಂದ ಚೆಳ್ಳಗುರ್ಕಿವರೆಗೆ ರಸ್ತೆ ಅಗಲೀಕರಣ ಮಾಡುವಂತೆ ಅನೇಕ ಬಾರಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾಗಿದೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ತಾಳೂರು ರಸ್ತೆಯಿಂದ ಕನಿಷ್ಠ ನಗರದ ಪಾಲಿಕೆಯ ಸರಹದ್ದಿನವರೆಗೆ ಸರ್ಕಾರದ ಆದೇಶದ ಮೇರೆಗೆ ಅಗಲೀಕರಣ ಮತ್ತು ಡಿವೈಡರ್ ಹಾಕಬೇಕೆಂದು ಒತ್ತಾಯ ಮಾಡಿದರು.

ತಾಳೂರು ರಸ್ತೆಯಲ್ಲಿರುವ ಮುಖ್ಯ ಕಾಲುವೆ ಬ್ರಿಡ್ಜ್ ಹತ್ತಿರದಿಂದ ಕೇವಲ 450 ಮೀಟರ್ ರಸ್ತೆಯನ್ನು ಮಾತ್ರ ಅಗಲೀಕರಣ ಮಾಡಲು ಮುಂದಾಗಿದ್ದಾರೆ. ಇದ್ಯಾವ ಸೀಮೆ ನ್ಯಾಯ ಎಂದು ಗುಡುಗಿದರು.

ರಸ್ತೆ ಅಗಲೀಕರಣದಲ್ಲಿ ತಾರತಮ್ಯ ಆರೋಪ: ಅಧಿಕಾರಿಗಳ ವಿರುದ್ಧ ಆಕ್ರೋಶ

56.20 ಕಿಲೋ ಮೀಟರ್ ಉದ್ದವಿರುವ ಈ ರಸ್ತೆ ಚಾನಾಳು ಕ್ರಾಸ್​ನಿಂದ ಹಂದಿಹಾಳು, ಗಯಡುದೂರು ಕ್ರಾಸ್, ಕೊರ್ಲಗುಂದಿ, ಬಾಲಾಜಿನಗರ, ಶ್ರೀಧರಗಡ್ಡೆ, ಗುಡಾರನಗರ, ಮಹಾನಂದಿ ಕೊಟ್ಟಂ, ಬಳ್ಳಾರಿ, ಬಿ.ಗೋನಾಳು, ಶಂಕರಬಂಡೆ, ರೂಪನಗುಡಿ, ಗ್ರಾಮಗಳಿಂದ ಚೆಳ್ಳಗುರ್ಕಿ ತಲುಪುತ್ತದೆ. ಮೊದಲು ಈ ಭಾಗದಲ್ಲಿ ರಸ್ತೆ ಅಗಲೀಕರಣ ಮಾಡಬೇಕು ಮತ್ತು ಅದರಿಂದ ಸ್ಥಳೀಯರಿಗೆ ಅನೂಕೂಲವಾಗುತ್ತದೆ. ಈ ಭಾಗದ ರಸ್ತೆ ಅಗಲೀಕರಣಕ್ಕೆ 20 ಕೋಟಿ ಬಂದಿದೆ ಎನ್ನುವ ಮಾಹಿತಿ ರೇವಣ್ಣವರಿಂದ ಬಂದಿದೆ. ಆದರೂ ಕಾಮಗಾರಿ ಆರಂಭಗೊಂಡಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ರಸ್ತೆ ಅಗಲೀಕರಣದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ತಾರತಮ್ಯ ಮಾಡುತ್ತಿದ್ದಾರೆ. ಈ ರಸ್ತೆಯಲ್ಲಿ ಕೋರ್ಟ್, ಕಾಲೇಜು, ಶಾಲೆಗಳು, ಆಸ್ಪತ್ರೆಗಳಿವೆ. ಪಾದಾಚಾರಿಗಳು ಸೇರಿದಂತೆ ವಾಹನಗಳು ಸಂಚಾರ ಮಾಡುವುದರಿಂದ ಅಪಘಾತ, ಅನಾಹುತಗಳು ಸಂಭವಿಸುತ್ತವೆ ಎಂದು ಅಂಬೇಡ್ಕರ್ ನಗರದ ನಿವಾಸಿ ಲಕ್ಷ್ಮಣ ಹೇಳಿದರು.

Intro:
kn_bly_02_030120_ Roadcuttingnews_ka10007

ರಸ್ತೆಯ ಅಗಲೀಕರಣದಲ್ಲಿ ತಾರತಮ್ಯ ಏಕೆ ? ರಾಜಕೀಯ ವ್ಯಕ್ತಿಗಳ, ಅಧಿಕಾರಿಗಳ ಕೈವಾಡ, ಗೋಲ್ ಮಾಲ್ ಇದೆ : ಸಾರ್ವಜನಿಕರಿಂದ ಆರೋಪ.

ಬಳ್ಳಾರಿ ಜಿಲ್ಲೆಯ ಹೊರವಲಯದ ತಾಳೂರು ರಾಜ್ಯ ಹೆದ್ದಾರಿ ರಸ್ತೆ 128 ನ್ನು ಅಗಲೀಕರಣ ಮಾಡುವಂತೆ ಕಳೆದ 8 ವರ್ಷಗಳಿಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ, ರಾಜಕಾರಣಿಗಳಿ್ಗೆಗೆ, ಮಂತ್ರಿಗಳಿಗೆ ಎಲ್ಲರಿಗೂ ಮನವಿಪತ್ರವನ್ನು ಸಲ್ಲಿಸಿದ್ದೇನೆ ಆದ್ರೇ ಯಾವುದೇ ಪ್ರಯೋಜನೆ ಆಗಿಲ್ಲ ಎಂದು ಅಖಿಲ ಭಾರತ ಜನಗಣ ಒಕ್ಕೂಡ ರಾಷ್ಟ್ರೀಯ ಸಂಚಾಲಕರಾದ ಎನ್.ಗಂಗಿರೆಡ್ಡಿ ದೂರಿದರು

ಬೈಟ್ :-

೧.) ಗಂಗಿರೆಡ್ಡಿ
ಅಖಿಲ ಭಾರತ ಜನಗಣ ಒಕ್ಕೂಟದ ರಾಷ್ಟ್ರೀಯ ಸಂಚಾಲಕ.
ಬಳ್ಳಾರಿ.

೨.) ಲಕ್ಷ್ಮಣ
ಅಂಬೇಡ್ಕರ್ ‌ನಗರ ನಿವಾಸಿ.
ಬಳ್ಳಾರಿ.

Body:.

ನಗರದ ತಾಳೂರು ರಸ್ತೆಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಗಂಗಿರೆಡ್ಡಿ ಅವರು ಕಳೆದ 8 ವರ್ಷಗಳಿಂದ ರಾಜ್ಯ ಹೆದ್ದಾರಿ 128 ಚಾನಾಳು ಕ್ರಾಸ್ ನಿಂದ ಚೇಳ್ಳಗುರ್ಕಿ ವರೆಗೆ ರಸ್ತೆ ಅಗಲಿಕರಣಕ್ಕೆ ಅನೇಕ ಬಾರಿ ಜಿಲ್ಲಾಧಿಕಾರಿಗಳಿಗೆ ಮತ್ತು ಇನ್ನಿತರ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದ್ದೆನೆ ಎಂದರು.

ಕೇವಲ ತಾಳೂರು ರಸ್ತೆ ಯಿಂದ ಸೋನಿ ಕಾಂಪ್ಲೆಕ್ಸ್ ಎದುರುಗಡೆಯಿಂದ ಕನಿಷ್ಟ ನಗರದ ಪಾಲಿಕೆಯ ಸರಹದ್ದು ವರೆಗೆ ಸರ್ಕಾರದ ಆದೇಶದ ಮೇರೆಗೆ ಅಗಲೀಕರಣ ಮತ್ತು ಡಿವೈಡರ್ ಹಾಕಬೇಕೆಂದು ಒತ್ತಾಯ ಮಾಡಿದ್ದಾರೆ. ಆದ್ರೇ ಇದಕ್ಕೆ ಸಂಭಂದಿಸಿದಂತೆ ಕಾನೂನು ಮೊರೆನು ಸಹ ಹೋಗಿದ್ದಾರೆ. ಈಗ ತಾಳೂರು ರಸ್ತೆಯಲ್ಲಿರುವ ಮುಖ್ಯ ಕಾಲುವೆ ಬ್ರಿಡ್ಜ್ ಹತ್ತರದಿಂದ ಕೇವಲ 450 ಮೀಟರ್ ರಸ್ತೆ ಕಾಮಗಾರಿಯನ್ನು ಮಾಡುತ್ತಿದ್ದಾರೆ.
450 ಮೀಟರ್ ಮತ್ತು ಅಗಲೀಕರಣ 30 ಮೀಟರ್ ಇದು ಸರ್ಕಾರದ ಆದೇಶದ ಪ್ರಕಾರ 30 ಮೀಟರ್ ಅಗಲೀರಣ ಇರುತ್ತದೆ. ಈಗ ಇವರು ಕಾಮಗಾರಿಗೆ ಕೇವಲ 23 ಮೀಟರ್ ಮಾತ್ರ ಕಾಮಗಾರಿಯ ಮಾರ್ಕ್ ಹಾಕಿದ್ದಾರೆ ಎಂದು ದೂರಿದರು. ಸರ್ಕಾರದ ಆದೇಶದ ಪ್ರಕಾರವಾಗಿ 30 ಮೀಟರ್ ಇರಬೇಕು ಎಂದು ಪ್ರಶ್ನೆ ಮಾಡಿದರು.

ರಾಜ್ಯ ಹೆದ್ದಾರಿ 128 ತಾಳೂರು ರಸ್ತೆ ಈ ಉಪ ವಿಭಾಗದ ವ್ಯಾಪ್ತಿಯಲ್ಲಿ (ಚಾನಾಳು ಕ್ರಾಸ್ ಯಿಂದ ) 180.44 ಕಿಲೋಮೀಟರ್ ದಿಂದ ಪ್ರಾರಂಭವಾಗಿ ( ಚಳ್ಳಗುರ್ಕಿ ವರೆಗೆ )
236.64 ಕಿಲೋಮೀಟರ್ ಬಗೆ ಮುಕ್ತಾಯ ಗೊಳ್ಳುತ್ತಿದ್ದು. ಒಟ್ಟು 56.20 ಕಿಲೊಮೀಟರ್ ಉದ್ದವಿರುತ್ತದೆ. ಈ ರಸ್ತೆ ಚಾನಾಳು ಕ್ರಾಸ್ ನಿಂದ ಹಂದಿಹಾಳು, ಗಯಡುದೂರು ಕ್ರಾಸ್, ಕೊರ್ಲಗುಂದಿ, ಬಾಲಾಜಿನಗರ, ಶ್ರೀಧರಗಡ್ಡೆ, ಗುಡಾರನಗರ, ಮಹಾನಂದಿ ಕೊಟ್ಟಂ, ಬಳ್ಳಾರಿ, ಬಿ.ಗೋನಾಳು, ಶಂಕರಬಂಡೆ, ರೂಪನಗುಡಿ, ಗ್ರಾಮಗಳಿಂದ ಚಳ್ಖಗುರ್ಕಿ ತಲುಪುತ್ತದೆ ಎಂದರು.

ಕರ್ನಾಟಕ ರಾಜ್ಯ ಹೆದ್ದಾರಿ ಅಧಿನಿಯಮ 1964 ರ ಕಲಂ (7) (2) ರ ಅನ್ವಯ, ಸರ್ಕಾರದ ಆದೇಶದ ಸಂಖ್ಯೆ : ಪಿ.ಡಬ್ಲ್ಯೂ.ಡಿ : 362: ಸಿ.ಆರ್.ಎಂ:98 ಬೆಂಗಳೂರು ದಿನಾಂಕ 09:10:1998 ರಲ್ಲಿ ರಾಜ್ಯ ಹೆದ್ದಾರಿಗಳ ಗಡಿರೇಖೆ ಗಳನ್ನು ಪಟ್ಟಣ ಪದ್ರೇಶದಲ್ಲಿ ರಸ್ತೆ ಮಧ್ಯರೇಖೆಯಿಂದ 15 ಮೀಟರ್ ಗ್ರಾಮ ಪ್ರದೇಶಗಳಲ್ಲಿ 15 ಮೀಟರ್ ಮತ್ತು ಹೊರವಲಯದ ಪ್ರದೇಶದಲ್ಲಿ 22.5 ಮೀಟರ್ ಅಂತರವನ್ನು ನಿಗದಿಪಡಿಸಲಾಗಿರುತ್ತದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಪತ್ರ್ ಮೂಲಕ ತಿಳಿಸಿದ್ದಾರೆ ಎಂದು ಹೇಳಿದರು‌.

ಈ ರಸ್ತೆ ಅಗಲೀಕರಣಕ್ಕೆ 20 ಕೋಟಿ ಬಂದಿದೆ ಎನ್ನುವ ಮಾಹಿತಿ ರೇವಣ್ಣವರಿಂದ ಬಂದಿದೆ ಎಂದು ತಿಳಿಸಿದರು. ಈ ರಸ್ತೆ ಅಗಲೀಕರಣಕ್ಕೆ ಮುಖ್ಯಮಂತ್ರಿಗಳು, ಸಚಿವರು, ಎಂ.ಎಲ್.ಎ, ಜಿಲ್ಲಾಧಿಕಾರಿಗಳಿಗೆ, ಪಿ.ಡಬ್ಲ್ಯೂ.ಡಿ, ಗಮನಕ್ಕೂ ತಂದಿದ್ದೆನೆ ಎಂದು ತಿಳಿಸಿದರು. ‌

ಪ್ರಸ್ತುತ 70 ಅಡಿ ಮಾತ್ರ ಅಗಲೀಕರಣಕ್ಕೆ ಮುಂದಾಗಿದ್ದಾರೆ ಅದು, 450 ಮೀಟರ್ ಮಾತ್ರ ಏಕೆ ಮಾಡಿದ್ದಾರೆ, ಸೋನಿ‌ ಕಾಂಪ್ಲೆಕ್ಸ್ ನಿಂದ ಹಿಡಿದು ಮಹಾನಗರಪಾಲಿಕೆ ಸರಹದ್ದಿನ ವರೆಗೆ ಮಾಡಿ ಎಂದು ದೂರಿದರು.

ಈಟಿವಿ ಭಾರತ ದೊಂದಿಗೆ ಅಂಬೇಡ್ಕರ್ ನಗರದ ನಿವಾಸಿ ಲಕ್ಷ್ಮಣ ಮಾತನಾಡಿ ತಾಳೂರು ರಸ್ತೆ, ಶ್ರೀನಗರ, ಮಹಾನಂದಿ ಕೋಟಂ, ಅಂಬೇಡ್ಕರ್ ನಗರ, ರೇಣುಕಾ ನಗರ ಪ್ರದೇಶದಲ್ಲಿ ಬರುವ ರಸ್ತೆಯಾಗಿದೆ. ಈ ರಸ್ತೆ 100 ಮೀಟರ್ ಇದೆ. ಇದು ಡಬಲ್ ರಸ್ತೆಯಾಗಿದೆ ಎಂದು ತಿಳಿಸಿದರು. ತಾಳೂರು ರಸ್ತೆಯಿಂದಲೇ ಕಾಮಗಾರಿ ಆರಂಭವಾಗಬೇಕು ಎಂದು ತಿಳಿಸಿದರು. ಶಾಲಾ ಕಾಲೇಜದ ಮತ್ತು ಆಸ್ಪತ್ರೆಗೆ ಬರುವ ರೋಗಿಗಳಿಗೂ ಅನುಕೂಲಕರವಾಗುತ್ತದೆ ಎಂದು ಹೇಳಿದರು.

ಈ ರಸ್ತೆಯಲ್ಲಿ ಕೋರ್ಟ್, ಕಾಲೇಜ್ ಗಳು, ಶಾಲೆಗಳು, ಆಸ್ಪತ್ರೆಗಳು ಇವೆ. ಈ ರಸ್ತೆಯಲ್ಲಿ ಅನೇಕ‌ ಜನರು, ವಾಹನಗಳು ಸಂಚಾರವಾಗುವುದರಿಂದ ಅಪಘಾತಗಳು, ಅನಾಹುತಗಳು ನಡೆಯುತ್ತವೆ ಎಂದು ತಿಳಿಸಿದರು.

Conclusion:ಒಟ್ಟಾರೆಯಾಗಿ ಈ ರಸ್ತೆ ಅಗಲೀಕರಣಕ್ಕೆ ಸಂಬಂದಿಸಿದಂತೆ ಮುಂದಿನ ದಿನಗಳಲ್ಲಿ ಪಬ್ಲಿಕ್ ಲಿಟಿಗೇಷನ್ ಹಾಕೋಣ ಎಂದು ತಿರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.