ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಮೂಗ ಗರ್ಭಿಣಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೇ, ಮಗುವಿನ ಸಾವಿಗೆ ಕಾರಣವಾಗಿದ್ದಾರೆ ಎಂದು ಮಹಿಳೆಯ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.
ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರ ನಿವಾಸಿಯಾದ 43 ವರ್ಷದ ತುಂಬು ಗರ್ಭಿಣಿಯನ್ನು ಬುಧವಾರ ಹಗರಿಬೊಮ್ಮನಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಡರಾತ್ರಿ ಪುರುಷ ಸ್ಟಾಫ್ ನರ್ಸ್ವೊಬ್ಬರು ಗರ್ಭಿಣಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೇ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪಿಸಿದ್ದಾರೆ.
![Nurse misbehave, Nurse misbehave on Dumb pregnant woman, newborn baby death, newborn baby death in government hospital, Hagaribommanahalli government hospital, Hagaribommanahalli government hospital news, ನರ್ಸ್ ಅನುಚಿತ ವರ್ತನೆ, ಮೂಗ ಗರ್ಭಿಣಿ ಮಹಿಳೆಯೊಂದಿಗೆ ನರ್ಸ್ ಅನುಚಿತ ವರ್ತನೆ, ನವಜಾತು ಶಿಶು ಸಾವು, ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತು ಶಿಶು ಸಾವು, ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆ, ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆ ಸುದ್ದಿ,](https://etvbharatimages.akamaized.net/etvbharat/prod-images/11825096_mahile.jpg)
ರಾತ್ರಿ ಆಸ್ಪತ್ರೆ ಸಿಬ್ಬಂದಿ ಮನಬಂದಂತೆ ಶಸ್ತ್ರಚಿಕಿತ್ಸೆ ಮಾಡಿದ್ದು ನವಜಾತ ಶಿಶುವಿನ ಸಾವಿಗೂ ಕಾರಣರಾಗಿದ್ದಾರೆ. ಈ ಮೂಲಕ 43 ವರ್ಷದ ನಂತರ ಮಗು ಪಡೆಯಬೇಕೆಂಬ ಮಹಿಳೆಯ ಕನಸು ನುಚ್ಚು ನೂರಾಗಿದೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಆಸ್ಪತ್ರೆಗೆ ಶಿಫ್ಟ್:
ಕುಟುಂಬಸ್ಥರು ಮಂಜುಳಾಗೆ ಸರಿಯಾದ ಶಸ್ತ್ರಚಿಕಿತ್ಸೆ ದೊರೆಯದ ಕಾರಣ ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಇದೀಗ ಮಂಜುಳಾ ಸಾವು - ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಘಟನೆಗೆ ಕಾರಣವಾದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಗರ್ಭಿಣಿಯ ಅತ್ತೆ ಮತ್ತು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಡ್ಯೂಟಿ ಡಾಕ್ಟರೇ ಇಲ್ಲ:
ಹಗರಿಬೊಮ್ಮನಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರೇ ಇಲ್ವಂತೆ. ಆ ಡಾಕ್ಟರ್ ಡ್ಯೂಟಿಗೆ ಹಾಜರಾದ ಉದಾಹರಣೆಗಳಿಲ್ಲ. ಸಮಯಾನುಸಾರ ಡಾಕ್ಟರ್ ಲಭ್ಯವಾಗದ ಕಾರಣ ಇಂಥ ಅಚಾತುರ್ಯ ನಡೆಯುವುದು ಸಾಮಾನ್ಯವಾಗಿದೆ ಎಂಬ ಆರೋಪವನ್ನೂ ರೋಗಿಗಳು ಮಾಡಿದ್ದಾರೆ.
ಡಿಹೆಚ್‌ಒ ಪ್ರತಿಕ್ರಿಯೆ:
ಈ ಸಂಬಂಧ ಈಟಿವಿ ಭಾರತ ಬಳ್ಳಾರಿ ಪ್ರತಿನಿಧಿ ಡಿಹೆಚ್‌ಒ ಡಾ.ಹೆಚ್.ಎಲ್.ಜನಾರ್ಧನ್ ಅವರನ್ನು ಸಂಪರ್ಕಿಸಿದಾಗ, ಡ್ಯೂಟಿ ಡಾಕ್ಟರ್ ಕರೆಯಿಸಿ ಈ ಬಗ್ಗೆ ವಿಚಾರಿಸುತ್ತೇನೆ. ಈ ಘಟನೆ ನಡೆಯಬಾರದಿತ್ತು. ನಾನ್‌ಕೋವಿಡ್ ರೋಗಿಗಳಿಗೆ ಈ ರೀತಿಯಾದ್ರೆ ಕೋವಿಡ್ ಸೋಂಕಿತರಿಗೆ ಇನ್ಯಾವ ರೀತಿಯ ಚಿಕಿತ್ಸೆ ನೀಡುತ್ತಾರೆಂಬ ಪ್ರಶ್ನೆ ಉದ್ಭವವಾಗುತ್ತೆ. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುವೆ ಎಂದು ಹೇಳಿದರು.
ಇದನ್ನೂ ಓದಿ: ರಾಜಸ್ಥಾನದ ಮಾಜಿ ಸಿಎಂ ಜಗನ್ನಾಥ ಪಹಾಡಿಯಾ ಕೋವಿಡ್ನಿಂದ ಮೃತ