ಬಳ್ಳಾರಿ: ಪೊಲೀಸರಾಗಿ ಕಾರ್ಯನಿರ್ವಹಿಸಲು ಇಲಾಖೆಯಲ್ಲೇ ನಾನಾ ಅವಕಾಶಗಳಿದ್ದು, ಗುಡಾಚಾರಿ, ಗುಪ್ತಚರ ಇಲಾಖೆ, ಭ್ರಷ್ಟಾಚಾರ ನಿಗ್ರಹದಳ, ವಿಮಾನ ನಿಲ್ದಾಣ ರಕ್ಷಣ ಪಡೆ, ಹಾಗೂ ವಿಶ್ವಸಂಸ್ಥೆಗೆ ಹೋಗಿ ಕೆಲಸ ಮಾಡುವ ಸಾರ್ಮರ್ಥವನ್ನು ಪೊಲೀಸರು ಬೆಳೆಸಿಕೊಳ್ಳಿ ಎಂದು ಐಜಿಪಿ ಎಂ.ನಂಜುಂಡಸ್ವಾಮಿ ಕರೆ ನೀಡಿದರು.
ನಗರದ ಡಿಎಆರ್ ಮೈದಾನದಲ್ಲಿ ಶುಕ್ರವಾರ ನಡೆದ 12ನೇ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ಗಳ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಬಳ್ಳಾರಿ ವಲಯದ ಐಜಿಪಿ ಎಂ.ನಂಜುಂಡಸ್ವಾಮಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಜೀವನಪೂರ್ತಿ ಇಂತಹದ್ದೇ ಕೆಲಸ ಬೇಕು ಎಂದು ಚಿಂತಿಸುತ್ತಾ ಕಾಲ ಕಳೆಯದೇ, ಯಾವುದೇ ಕೆಲಸ ಕೊಟ್ಟರು ಸಹ ಸಂತೋಷದಿಂದ ಮಾಡಿ ಎಂದು ಹೇಳಿದ್ದಾರೆ.
ನಾವೆಲ್ಲ ಭಾರತೀಯರು, ನಮ್ಮ ಧರ್ಮ ಭಾರತೀಯ ಧರ್ಮ, ನಮ್ಮ ಧರ್ಮ ಗ್ರಂಥ ಭಾರತದ ಸಂವಿಧಾನ ಹಾಗಾಗಿ ಸಮಾಜದಲ್ಲಿರು ವ ಪ್ರತಿಯೊಬ್ಬ ಪ್ರಜೆಯು ಸಂವಿಧಾನಕ್ಕೆ ಗೌರವವನ್ನು ಸಲ್ಲಿಸಬೇಕೆಂದು ಐಜಿಪಿ ಎಂ.ನಂಜುಂಡಸ್ವಾಮಿ ಹೇಳಿದರು.