ಬಳ್ಳಾರಿ: ಜಿಲ್ಲಾ ಖನಿಜ ನಿಧಿಯಿಂದ (ಡಿಎಂಎಫ್) ಬಳ್ಳಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸರಿ ಸುಮಾರು 27 ಹೊಸ ಬುಲೆರೊ ವಾಹನಗಳು ಬಂದಿವೆ. ಕಳೆದ ಎರಡು ದಶಕಗಳಿಂದಲೂ ಬಳಕೆ ಮಾಡಲಾಗುತ್ತಿದ್ದ ಹಳೆಯ ವಾಹನಗಳು ಈಗ ಮೂಲೆ ಗುಂಪಾಗಿವೆ.
ಹೌದು, ಕಳೆದ 20 ವರ್ಷಗಳಿಂದ ಉಭಯ ಇಲಾಖೆಗಳ ಮೇಲಾಧಿಕಾರಿಗಳು ಹಳೆಯ ವಾಹನಗಳನ್ನ ಬಳಕೆ ಮಾಡುತ್ತಿದ್ದರು. ಸಮಯಾನುಸಾರ ನಿಗದಿತ ಸ್ಥಳಕ್ಕೆ ತೆರಳಲು ಬಹಳ ಸಂಕಷ್ಟವನ್ನು ಎದುರಿಸುತ್ತಿದ್ದರು. ಇದನ್ನರಿತ ಜಿಲ್ಲಾಡಳಿತ ಜಿಲ್ಲಾ ಖನಿಜ ನಿಧಿಯಿಂದ (ಡಿಎಂಎಫ್) ಅಂದಾಜು 27 ಬುಲೆರೋ ವಾಹನಗಳನ್ನ ಖರೀದಿಸಿದ್ದು, ಉಭಯ ಇಲಾಖೆಗಳ ಮೇಲಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಈಗಾಗಲೇ ಈ ವಾಹನಗಳ ಚಾಲಕರು ಎರಡೂ ಇಲಾಖೆಗಳಲ್ಲೂ ಲಭ್ಯವಾಗಿದ್ದು, ಎಲ್ಲ ಮೇಲಧಿಕಾರಿಗಳು ಸಮರ್ಪಕವಾಗಿ ವಾಹನಗಳ ಬಳಕೆ ಮಾಡಲು ಮುಂದಾಗಿದ್ದಾರೆ.
ಈ ಸಂಬಂಧ ಈ ಟಿವಿ ಭಾರತದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯಾಧಿಕಾರಿ ಡಾ.ಹೆಚ್.ಎಲ್. ಜನಾರ್ಧನ ಮಾತನಾಡಿ, ಕಳೆದ 20 ವರ್ಷಗಳಿಂದಲೂ ಕೂಡ ಹಳೆಯ ವಾಹನಗಳನ್ನ ಮೇಲಿಂದ ಮೇಲೆ ಸರ್ವೀಸ್ ಮಾಡುತ್ತಲೇ ಬಳಕೆ ಮಾಡಲಾಗುತ್ತಿತ್ತು. ಇದರಿಂದ ನಮ್ಮ ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯ ಅಧಿಕಾರಿಗಳು ಕೂಡ ಈ ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ತೊಂದರೆಗೀಡಾಗಿದ್ದರು.
ಕೆಲವೊಮ್ಮೆ ಸಮಯಕ್ಕೆ ಸರಿಯಾಗಿ ಕೂಡ ಘಟನಾ ಸ್ಥಳಕ್ಕೆ ಹೋಗಲಾರದಂತಹ ಪರಿಸ್ಥಿತಿ ಕೂಡ ಈ ವಾಹನಗಳಿಂದ ನಿರ್ಮಾಣ ಆಗಿತ್ತು. ದಾರಿಯ ಮಾರ್ಗದ ಮಧ್ಯೆದಲ್ಲಿಯೇ ಹಳೆಯದಾದ ವಾಹನಗಳು ದುರಸ್ತಿಗೀಡಾದ ಸಂದರ್ಭ ಕೂಡ ಎದುರಾಗಿತ್ತು. ಅದನ್ನ ಸೂಕ್ಷ್ಮವಾಗಿ ಅರಿತುಕೊಂಡ ನಾನು ಹೊಸ ವಾಹನಗಳ ಖರೀದಿಗಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಕೂಡ ಬರೆದಿದ್ದೆ.
ಸಮರ್ಥ ವಾಹನಗಳ ಕೊರತೆ ಇದೆ ಎಂಬುದನ್ನರಿತ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಹೊಸದಾದ ಬುಲೆರೋ ವಾಹನಗಳ ಖರೀದಿಗೆ ಸಮ್ಮತಿ ಸೂಚಿಸಿದ್ರು. ಅವರು ಸಹಕಾರ ಮನೋಭಾವದಿಂದ ಈಗ ಹೊಸ ವಾಹನಗಳು ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲಾಧಿಕಾರಿಗಳ ಸೇವೆಗೆ ಅಂದಾಜು 27 ವಾಹನಗಳು ಮುಂದಾಗಿರುವುದು ಕೂಡ ಈಗ ಗಮನಾರ್ಹ ಎಂದರು.