ಬಳ್ಳಾರಿ: ಎನ್‍ಸಿಸಿಯ 34ನೇ ಕರ್ನಾಟಕ ಬೆಟಾಲಿಯನ್‍ನ ಶಿಬಿರಾರ್ಥಿಗಳ ತಂಡವು ಸ್ವಚ್ಛ ಭಾರತ ಅಭಿಯಾನ ಹಾಗೂ ಆರೋಗ್ಯಕರ ಜೀವನಶೈಲಿ ಸುಧಾರಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನಗರದಲ್ಲಿ ಜಾಥಾ ನಡೆಸಿತು.
![NCC Battalion Awareness of Cleanliness-Health, ಸ್ವಚ್ಛತೆ-ಆರೋಗ್ಯದ ಅರಿವು ಮೂಡಿಸಿದ ಎನ್‍ಸಿಸಿ ಬೆಟಾಲಿಯನ್](https://etvbharatimages.akamaized.net/etvbharat/prod-images/5950682_thumb.jpg)
ಇಲ್ಲಿನ ಪಿಐ ಸ್ಟಾಫ್ ಮೆಸ್‍ನಿಂದ ಆರಂಭಗೊಂಡ ಸ್ವಚ್ಛ ಭಾರತ ಅಭಿಯಾನ ಜಾಗೃತಿ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಒಟ್ಟು 250 ಶಿಬಿರಾರ್ಥಿಗಳು ಸ್ವಚ್ಛತೆ ಮತ್ತು ಆರೋಗ್ಯಕರ ಜೀವನಶೈಲಿ ಸುಧಾರಣೆ ಕುರಿತ ಘೋಷಣಾ ಫಲಕಗಳನ್ನು ಹಿಡಿದು ಹೆಜ್ಜೆ ಹಾಕಿದರು.
ಅಲ್ಲದೆ ನಗರದ ವಿವಿಧ ಪುತ್ಥಳಿಗಳನ್ನು ಸ್ವಚ್ಛಗೊಳಿಸಿ, ಬೀದಿ ನಾಟಕಗಳನ್ನು ನಡೆಸುವ ಮೂಲಕ ಸ್ವಚ್ಛತೆ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಎನ್‍ಸಿಸಿ ಬೆಟಾಲಿಯನ್‍ನ ಮುಖ್ಯಸ್ಥರು, ವಿವಿಧ ಶಿಕ್ಷಣ ಸಂಸ್ಥೆಗಳ ಎನ್‍ಸಿಸಿಯ ಸಹಾಯಕ ಅಧಿಕಾರಿಗಳು ಹಾಗೂ ಬೆಟಾಲಿಯನ್‍ನ ಸೇನಾ ಸಿಬ್ಬಂದಿ ಪಾಲ್ಗೊಂಡಿದ್ದರು.