ಬಳ್ಳಾರಿ: ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2019 ಕಾರ್ಯಕ್ರಮವು ನಗರದ ವಿಜಯ ನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶಿಕ್ಷಕರ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ , ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಂಕಲಯ್ಯ "ಭಾರತೀಯ ಗ್ರಾಹಕನಿಗೊಂದು ತಿರುವಿನ ಬಿಂದು- ಗ್ರಾಹಕ ಸಂರಕ್ಷಣಾ ಕಾಯ್ದೆ 2019" ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಗ್ರಾಹಕರು ಕೊಳ್ಳುವ ವಸ್ತುವಿಗೆ ಸೇವಾ ಬಿಲ್ ಪಡೆಯಬೇಕು. ಹಾಗೂ ಬಿಲ್ಗಳನ್ನು ಮೂರು ವರ್ಷದವರೆಗೆ ಸುರಕ್ಷಿತವಾಗಿ ಇಟ್ಟು ಕೊಳ್ಳಬೇಕು. ಇದರಿಂದ ಗ್ರಾಹಕರಿಗೆ ಏನಾದರೂ ಸಮಸ್ಯೆಯಾದರೆ ಗ್ರಾಹಕರ ವೇದಿಕೆ ಮೂಲಕ, ಮಾರಾಟಗಾರರ ವಿರುದ್ಧ ದೂರು ದಾಖಲಿಸಬಹುದು ಎಂದು ತಿಳಿಸಿದರು. ಹಾಗೂ ಭಾರತೀಯ ಗ್ರಾಹಕ ಸಂರಕ್ಷಣಾ ಕಾಯ್ದೆ-2019 ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ದೊಡ್ಡ ಬಸವಗವಾಯಿಗಳ ನೇತೃತ್ವದ ತಂಡದಿಂದ ಸುಗಮ ಸಂಗೀತ ನಡೆಯಿತು. ಡಾ.ಕೃಷ್ಣಸ್ವಾಮಿ, ಬಿ.ಎನ್.ಸುಜಾತ, ಅಮೃತಾ ಪಿ.ಚವ್ಹಾಣ, ಡಾ.ಅನಿಲ್ ಕುಮಾರ್, ಡಾ.ಕೆ.ರಾಮೇಶ್ವರಪ್ಪ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.