ಹೊಸಪೇಟೆ: ಹೂವಿನಹಡಗಲಿಯ ಮೈಲಾರಲಿಂಗೇಶ್ವರ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 59.66 ಲಕ್ಷ ರೂ. ಸಂಗ್ರಹವಾಗಿದೆ.
ದೇವಸ್ಥಾನ ಗರ್ಭಗುಡಿ ಮುಂಭಾಗ ನಾಲ್ಕು ಹಾಗೂ ಪ್ರಾಂಗಣದಲ್ಲಿ ಒಂದು ಹುಂಡಿಯನ್ನು 2020 ಆಗಸ್ಟ್ 21 ರಂದು ಅಳವಡಿಸಲಾಗಿತ್ತು. ಈ ಹುಂಡಿಗಳಲ್ಲಿ 40.57 ಲಕ್ಷ ರೂ. ಸಂಗ್ರಹವಾಗಿದೆ. ಇನ್ನು ದೇವಸ್ಥಾನದ ಮಹಾರಂಗ ಮಂಟಪದಲ್ಲಿ ಮೂರು ಹುಂಡಿ ಹಾಗೂ ಗಂಗ ಮಾಳಮ್ಮ ಬಳಿ ಎರಡು ಹುಂಡಿಯಲ್ಲಿ 19.08 ಲಕ್ಷ ರೂ. ಸಂಗ್ರಹವಾಗಿದೆ.
ಈ ಎಲ್ಲಾ ಹುಂಡಿಗಳಲ್ಲಿ ಒಟ್ಟು 55.66 ಲಕ್ಷ ರೂ. ಹಣ ಸಂಗ್ರಹವಾಗಿದೆ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಬಳ್ಳಾರಿ ಜಿಲ್ಲಾ ಆಯುಕ್ತ ಎಚ್.ಎಂ. ಪ್ರಕಾಶರಾವ್ ತಿಳಿಸಿದ್ದಾರೆ.