ವಿಜಯನಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಒಟ್ಟಿಗೆ ಬರೆದ ತಾಯಿ - ಮಗಳು ಉತ್ತೀರ್ಣರಾಗಿದ್ದಾರೆ. ವಿಜಯನಗರದ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ನಿವಾಸಿ, ಚಿಲುಗೋಡಿ ಹೈಸ್ಕೂಲ್ ಶಿಕ್ಷಕ ಬಿ.ರಾಮಜ್ಜರ ಪತ್ನಿ ಸವಿತಾ (37) ಹಾಗೂ ಮಗಳು ಚೇತನಾ ಇಬ್ಬರೂ ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ತೇರ್ಗಡೆಯಾದ ತಾಯಿ - ಮಗಳು.
ಸವಿತಾ 2002-03ರ ಎಸ್ಎಸ್ಎಲ್‌ಸಿ ವಿದ್ಯಾರ್ಥಿಯಾಗಿದ್ದರು. ವೈವಾಹಿಕ ಕಾರಣದಿಂದ ಎಸ್ಎಸ್ಎಲ್‌ಸಿ ಪೂರ್ಣಗೊಳಿಸಲಾಗದ ಅವರು ತಮ್ಮ ಮಗಳೊಂದಿಗೆ ತಾವೂ ಸಹ ಪರೀಕ್ಷೆ ಬರೆಯಬೇಕು ಎಂಬ ಹಂಬಲಕ್ಕೆ ಬಿದ್ದಿದ್ದರು. ಇದಕ್ಕೆ ಪತಿ ಹಾಗೂ ಮಗಳು ಸಹ ಸಾಥ್ ನೀಡಿದ್ದರು.
ಪಟ್ಟಣದ ಸ.ಪ.ಪೂ.ಕಾಲೇಜಿನಲ್ಲಿ ಖಾಸಗಿ ವಿದ್ಯಾರ್ಥಿಯಾಗಿ ಪರೀಕ್ಷೆ ತೆಗೆದುಕೊಂಡು ಅಭ್ಯಾಸ ನಡೆಸಿದ್ದಾರೆ. ಹೊಸಪೇಟೆಯ ಚೈತನ್ಯ ಟೆಕ್ನೊ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದು ಶೇ. 45ರಷ್ಟುಅಂಕ ಪಡೆದು ಪಾಸಾಗಿದ್ದಾರೆ. ಅವರ ಮಗಳು ಚೇತನಾ ಸ್ಮಯೋರ್ ವ್ಯಾಸಪುರಿ ಪ್ರೌಢಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆದು ಶೇ.85 ಅಂಕ ಪಡೆದು ತೇರ್ಗಡೆಯಾಗಿದ್ದಾರೆ.
ಇದನ್ನೂ ಓದಿ: ಯುವತಿಗೆ ಎವರೆಸ್ಟ್ ಏರಿದ ಸಂತಸ : ಕುಟುಂಬಕ್ಕೆ ಆರ್ಥಿಕ ಸಂಕಷ್ಟ, ಸಹಾಯಕ್ಕೆ ಮನವಿ