ಬಳ್ಳಾರಿ : ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾಲಿಗನೂರು ಗ್ರಾಮದ ಹೊಲದಲ್ಲಿ ತಾಯಿ ಮಕ್ಕಳು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಾಲಿಗನೂರು ಗ್ರಾಮದ ನಾಗರತ್ನ (40), ಪುತ್ರಿಯರಾದ ಶೃತಿ (12), ಗಿರಿಜಾ (7) ಆತ್ಮಹತ್ಯೆ ಮಾಡಿಕೊಂಡವರು. ತಾಯಿ, ಮಕ್ಕಳ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮೃತ ಮಹಿಳೆ ಆಂಧ್ರ ಬ್ಯಾಂಕ್ನಲ್ಲಿ ಅಂದಾಜು 5.60 ಲಕ್ಷ ರೂ. ಹಾಗೂ ಖಾಸಗಿ ಲೇವಾದೇವಿಗಾರರಿಂದ 15 ಲಕ್ಷ ರೂ. ಸಾಲ ಮಾಡಿದ್ದರೆಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಸಿರುಗುಪ್ಪ ಪೊಲೀಸ್ ಠಾಣೆಯ ಸಿಪಿಐ ಟಿ.ಆರ್ ಪವಾರ್, ಪಿಎಸ್ಐ ಕೆ.ರಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.