ಬಳ್ಳಾರಿ: ಜುಲೈ 10ರಂದು ನನ್ನ ಹುಟ್ಟುಹಬ್ಬವಿದ್ದು, ಆ ದಿನ ಯಾರೂ ಮನೆ ಬಳಿ ಬರಬೇಡಿ. ನಾನೆಂದೂ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಜುಲೈ 10 ರಂದು ನನ್ನ ಜನ್ಮದಿನ. ನನ್ನ ಸ್ನೇಹಿತರು ಮತ್ತು ಅಭಿಮಾನಿಗಳು ಆ ದಿನದಂದು ನನ್ನ ಮನೆಗೆ ಆಗಮಿಸಿ ಶುಭಕೋರುತ್ತಿದ್ದರು. ಈ ಬಾರಿ ಕೋವಿಡ್-19 ಮಹಾಮಾರಿ ಇಡೀ ಬ್ರಹ್ಮಾಂಡವನ್ನೇ ಆವರಿಸಿಕೊಂಡಿದ್ದು, ಮಾಸ್ಕ್ ಹಾಕಿಕೊಳ್ಳೋದು, ಸಾಮಾಜಿಕ ಅಂತರವನ್ನು ಕಾಪಾಡುವುದು ಅನಿವಾರ್ಯವಾಗಿರುತ್ತದೆ. ಈ ಹಿನ್ನಲೆಯಲ್ಲಿ ರಾಜ್ಯದ ಅನೇಕ ಭಾಗಗಳಿಂದ ಅಭಿಮಾನಿಗಳು ನನಗೆ ಶುಭಕೋರಲು ಬರಬೇಡಿ ಎಂದು ಮನವಿ ಮಾಡಿದ್ದಾರೆ.

ನಿಮ್ಮ ಅಭಿಮಾನ ಸದಾ ನನ್ನ ಮೇಲಿರುತ್ತದೆ ಎಂದು ನನಗೆ ತಿಳಿದಿದೆ ಎಂದು ಪ್ರಕಟಣೆಯಲ್ಲಿ ಕೊಂಡಯ್ಯ ಹೇಳಿದ್ದಾರೆ.