ಬಳ್ಳಾರಿ: ನಗರದ 35ನೇ ವಾರ್ಡ್ನ ಹವಂಬಾವಿ ಮತ್ತು 31ನೇ ವಾರ್ಡ್ನ ಮ್ಯಾದಾರ ಕೇತರ ಪ್ರದೇಶದಲ್ಲಿ ಟಿಎಸ್ಪಿ ಅನುದಾನದ ಅಡಿಯಲ್ಲಿ 90 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ಮತ್ತು ಸದ್ಗುರು ಕಾಲೋನಿ 20ನೇ ವಾರ್ಡ್‌ನಲ್ಲಿ 14ನೇ ಹಣಕಾಸು ಯೋಜನೆ ಅಡಿ ಮಂಜೂರಾಗಿದ್ದ ಡಾಂಬರ್ ರಸ್ತೆ ಕಾಮಗಾರಿಗೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಚಾಲನೆ ನೀಡಿದರು.
ಈ ಸಮಯದಲ್ಲಿ ಮಹಾನಗರ ಪಾಲಿಕೆ ಸದಸ್ಯ ಮೌತ್ಕರ್ ಶ್ರೀನಿವಾಸ್ ರೆಡ್ಡಿ, ಬಳ್ಳಾರಿ ರಾಯಚೂರು ಕೊಪ್ಪಳ ಕೆಎಂಎಫ್ ನಿರ್ದೇಶಕ ಜಿ.ವೀರಶೇಖರ್ ರೆಡ್ಡಿ, ಮಹಾನಗರ ಪಾಲಿಕೆ ಸದಸ್ಯ ಸಿಂಧುವಾಳ ಮಲ್ಲನಗೌಡ, ಜಿ ಸಿ ಕೃಷ್ಣಾರೆಡ್ಡಿ, ಕೊಳಗಲ್ ಪ್ರಸಾದ ರೆಡ್ಡಿ, ವೆಂಕಟೇಶಲು, ಬಸವರಾಜ್, ಪ್ರವೀಣರೆಡ್ಡಿ, ರಮೇಶ್ ಪ್ರತಾಪ್ ರೆಡ್ಡಿ, ಕಪಗಲ್ ಪಂಪಾಪತಿ, ಸುರೇಶ್ ಕೃಷ್ಣ, ನಾಗೇಶ್ವರ ರಾವ್, ನರಸಿಂಹರೆಡ್ಡಿ ಮತ್ತಿತರರು ಹಾಜರಿದ್ದರು.