ETV Bharat / state

ತುಂಗಭದ್ರಾ ಜಲಾಶಯ ಭರ್ತಿಗಾಗಿ ಶಾಸಕ ಸೋಮಶೇಖರರೆಡ್ಡಿ ಉಪವಾಸ ವ್ರತ..!

ಕೋಟೆ ಪ್ರದೇಶದಲ್ಲಿರುವ ಕೋಟೆ ಮಲ್ಲೇಶ್ವರ ಸ್ವಾಮಿಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿಯವರು 16 ಸಾವಿರಕ್ಕೂ ಅಧಿಕ ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ರು.

author img

By

Published : Jun 21, 2019, 5:10 PM IST

ತುಂಗಭದ್ರಾ ಜಲಾಶಯ ಭರ್ತಿಗಾಗಿ ಶಾಸಕ ಸೋಮಶೇಖರರೆಡ್ಡಿ ಉಪವಾಸ

ಬಳ್ಳಾರಿ: ಶಾಸಕ ಜಿ.ಸೋಮಶೇಖರ ರೆಡ್ಡಿ ಬಳ್ಳಾರಿಯ ಕೋಟೆ ಪ್ರದೇಶದಲ್ಲಿರುವ ಕೋಟೆ ಮಲ್ಲೇಶ್ವರ ಸ್ವಾಮಿ ಸನ್ನಿಧಿಗೆ ತೆರಳಿ ಸುಮಾರು 16,004 ಸಾವಿರಕ್ಕೂ ಅಧಿಕ ತೆಂಗಿನಕಾಯಿ ಹರಕೆ ತೀರಿಸಿದ್ದಾರೆ. ಈ ವೇಳೆ ಜಿ.ಸೋಮಶೇಖರ ರೆಡ್ಡಿಗೆ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಸಾಥ್ ನೀಡಿದ್ದಾರೆ.

ತುಂಗಭದ್ರಾ ಜಲಾಶಯ ಭರ್ತಿಗಾಗಿ ಶಾಸಕ ಸೋಮಶೇಖರರೆಡ್ಡಿ ಉಪವಾಸ

ದೇಗುಲದ ಒಳಗೆ ತೆರಳಿ ಶಾಸಕ ಸೋಮಶೇಖರರೆಡ್ಡಿ, ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯವರು ಕೋಟೆ ಮಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಸೋಮಶೇಖರರೆಡ್ಡಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಭರ್ತಿಗಾಗಿ ನಾಳೆಯಿಂದಲೇ ಉಪವಾಸ ವ್ರತಾಚರಣೆ ಮಾಡುವೆ ಎಂದು ತಿಳಿಸಿದ್ರು. ಜಿಲ್ಲೆಯಲ್ಲಿ ಭೀಕರ ಬರದ ಕರಿಛಾಯೆ ಆವರಿಸಿದೆ. ಹೀಗಾಗಿ, ಈ ಜಲಾಶಯದ ಭರ್ತಿಗಾಗಿ ಹನುಮನ ವ್ರತಾಚರಣೆ ಮಾಡಲಾಗುವುದು ಎಂದ್ರು. 2009ನೇ ಇಸ್ವಿಯಲ್ಲಿ 18 ದಿನಗಳ ಕಾಲ ಹನುಮ ವ್ರತಾಚರಣೆ ಮಾಡಿದ್ದೆ. ಆಗ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿತ್ತು. ಹತ್ತು ವರ್ಷಗಳ ನಂತರ, ಈಗ ಹನುಮ ವ್ರತಾಚರಣೆ ಮಾಡುವಂತೆ ಆ ಭಗವಂತ ನನಗೆ ಆಶೀರ್ವದಿಸಿದ್ದಾನೆ. ಹಾಗಾಗಿ ನಾನೀಗ ಉಪವಾಸ ವ್ರತಾಚರಣೆ ಮಾಡುವೆ ಎಂದರು.

ಇದೇ ವೇಳೆ, ಮಾತನಾಡಿದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ, ಹನುಮ ಭಕ್ತ ನನ್ನ ಸಹೋದರ. ತುಂಗಭದ್ರಾ ಜಲಾಶಯದ ಭರ್ತಿಗಾಗಿ ಉಪವಾಸ ವ್ರತಾಚರಣೆ ಮಾಡುತ್ತಿರುವುದು ನನಗೆ ಖುಷಿ ತಂದಿದೆ. ನಮ್ಮ ಕುಟುಂಬದಲ್ಲಿ ಹನುಮನ ಭಕ್ತರು ಇರೋದರಿಂದ ಒಳಿತಾಗಲಿದೆ ಎಂದ್ರು.

Intro:ಬಳ್ಳಾರಿಯ ಕೋಟೆ ಮಲ್ಲೇಶ್ವರ ಸ್ವಾಮಿಗೆ 16 ಸಾವಿರ ಅಧಿಕ ತೆಂಗಿನಕಾಯಿ ಹರಕೆ ತೀರಿಸಿದ ಶಾಸಕ ರೆಡ್ಡಿ!
ಬಳ್ಳಾರಿ: ಬಳ್ಳಾರಿಯ ಕೋಟೆ ಪ್ರದೇಶದಲ್ಲಿರುವ ಕೋಟೆ ಮಲ್ಲೇಶ್ವರ ಸ್ವಾಮಿಗೆ ಬಳ್ಳಾರಿ ನಗರ ಶಾಸಕ ಜಿ.ಸೋಮ ಶೇಖರರೆಡ್ಡಿಯವರು ಸುಮಾರು 16,004 ಸಾವಿರಕ್ಕೂ ಅಧಿಕ ತೆಂಗಿನಕಾಯಿ ಹರಕೆ ತೀರಿಸಿದರು.
ಶಾಸಕ ಜಿ.ಸೋಮಶೇಖರರೆಡ್ಡಿ ಅವರೊಂದಿಗೆ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯವರು ಸಾಥ್ ನೀಡಿದರು. ದೇಗುಲದ ಒಳಗೆ ತೆರಳಿದ ಶಾಸಕ ಸೋಮಶೇಖರರೆಡ್ಡಿ, ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯವರು ಕೋಟೆ ಮಲ್ಲೇಶ್ವರ ಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿದರು.
ಹನುಮಾ ಮಾಲಾಧಾರಿಗಳಿಂದ ಅದ್ಧೂರಿ ಸ್ವಾಗತ: ಕೋಟೆ ಮಲ್ಲೇಶ್ವರಸ್ವಾಮಿ ದೇಗುಲದ ಪ್ರವೇಶದ್ವಾರ ಪ್ರವೇಶಿಸುತ್ತಿ ದ್ದಂತೆಯೇ ದಾರಿಯುದ್ದಕ್ಕೂ ಪಟಾಕಿ ಹಾರಿಸಿ ಸಂಭ್ರಮಿಸಿ
ದರು. ಈ ದೇಗುಲದ ಆವರಣದಲ್ಲಿ ನೂರಾರು ಹನುಮಾ ಮಾಲಾಧಾರಿಗಳು ಹಾಗೂ ಕಾರ್ಯಕರ್ತರು ಜಮಾಯಿಸಿ ದ್ದರು.

Body:ಜಲಾಶಯ ಭರ್ತಿಗೆ ಉಪವಾಸ ವ್ರತಾಚರಣೆ: ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಭರ್ತಿಗಾಗಿ ನಾಳೆಯಿಂದಲೇ ಉಪವಾಸ ವ್ರತಾಚರಣೆ ಮಾಡುವೆ ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಭೀಕರ ಬರದ ಕರಿಛಾಯೆ ಆವರಿಸಿದೆ. ಈ ಜಲಾ ಶಯದಲ್ಲಿ ಸಮರ್ಪಕ ನೀರಿಲ್ಲದೇ, ರೈತಾಪಿವರ್ಗ ಹಾಗೂ ಸಾರ್ವಜನಿಕರ ಕುಡಿಯುವ ನೀರಿಗಾಗಿ ಹಾಹಾಕಾರ ಶುರು ವಾಗಿದೆ. ಹೀಗಾಗಿ, ಈ ಜಲಾಶಯದ ಭರ್ತಿಗಾಗಿ ಹನುಮನ ವ್ರತಾಚರಣೆ ಮಾಡಲಾಗುವುದು. ನಾಳೆಯಿಂದ ಜಲಾಶಯ ತುಂಬೋವವರೆಗೂ ಉಪವಾಸ ವ್ರತಾಚರಣೆ ಮಾಡಲಾಗು ವುದೆಂದರು.
ಕಳೆದ 2009ನೇ ಇಸವಿಯಲ್ಲಿ 18 ದಿನಗಳಕಾಲ ಹನುಮ ವ್ರತಾಚರಣೆ ಮಾಡಿದ್ದೇ. ಆಗ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿತ್ತು. ಹತ್ತು ವರ್ಷಗಳ ನಂತರ, ಈಗ ಹನುಮ ವ್ರತಾಚರಣೆ ಮಾಡುವಂತೆ ಆ ಭಗವಂತ ನನಗೆ ಆರ್ಶೀವದಿ
ಸಿದ್ದಾನೆ.
ಕಳೆದ 2009ನೇ ಇಸವಿಯಲ್ಲಿ 18 ದಿನಗಳಕಾಲ ಹನುಮ ವ್ರತಾಚರಣೆ ಮಾಡಿದ್ದೇ. ಆಗ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿತ್ತು. ಹತ್ತು ವರ್ಷಗಳ ನಂತರ, ಈಗ ಹನುಮ ವ್ರತಾಚರಣೆ ಮಾಡುವಂತೆ ಆ ಭಗವಂತ ನನಗೆ ಆರ್ಶೀವದಿ
ಸಿದ್ದಾನೆ. ಆಗಾಗಿ, ನಾನೀಗ ಉಪವಾಸ ವ್ರತಾಚರಣೆ ಮಾಡುವೆ ಎಂದರು.
ಮಧ್ಯಂತರ ಚುನಾವಣೆ ಎದುರಾದ್ರೆ ಬಿಜೆಪಿಗೆ ಪ್ಲಸ್: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದ್ರೆ ಬಿಜೆಪಿಗೆ ಹೆಚ್ಚಿನ ಬಹುಮತ ಸಿಗಲಿದೆ. ಈ ಮೈತ್ರಿಕೂಟ ಸರ್ಕಾರದ ಆಡಳಿತಕ್ಕೆ ಜನತೆ ಬೇಸತ್ತಿದ್ದಾರೆ. ಅಧಿಕಾರಿಗಳು ಯಾರ ಮಾತಿಗೂ ಕಿಮ್ಮತ್ತು ನೀಡುತ್ತಿಲ್ಲ. ಈ ಸರ್ಕಾರ ಉತ್ತರ ಕರ್ನಾಟಕ ಹಾಗೂ ಹೈದರಾಬಾದ ಕರ್ನಾಟಕ ಭಾಗದ ಅಭಿವೃದ್ಧಿಗೆ ಈ ಮೈತ್ರಿಕೂಟ ಸರ್ಕಾರವು ಸಾಥ್ ನೀಡು
ತ್ತಿಲ್ಲ ಎಂದು ದೂರಿದರು.
ಜಿಂದಾಲ್ ಗೆ ಭೂಮಿ ಪರಭಾರೆ ಬೇಡ: ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,667 ಎಕರೆ ಭೂಮಿಯನ್ನು ಪರ ಭಾರೆ‌ ಮಾಡೋದು ತಪ್ಪು. ಗುತ್ತಿಗೆ ಪದ್ಧತಿಯಲ್ಲೇ ಅದು ಮುಂದುವರಿಬೇಕು. ಎಕರೆ ಭೂಮಿ ಹತ್ತಾರುಲಕ್ಷ ರೂ.ಗಳಿಗೆ ಬೆಲೆಬಾಳುವ ಆಸ್ತಿಯನ್ನು ಕೇವಲ ಒಂದೂವರೆ ಲಕ್ಷ ರೂ.ಗೆ ಬೆಲೆಗೆ ಮಾರಾಟ ಮಾಡಲಾಗಿದೆ. ಹೀಗಾಗಿ, ಭೂಮಿ ಪರಭಾರೆ ವಿಚಾರವಾಗಿ ನನ್ನ ವಿರೋಧವಿದೆ ಎಂದರು.
ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರು ಮಾತನಾಡಿ, ಹನುಮ ಭಕ್ತ ನನ್ನ ಸಹೋದರ. ತುಂಗಭದ್ರಾ ಜಲಾಶಯದ ಭರ್ತಿಗಾಗಿ ಉಪವಾಸ ವ್ರತಾಚರಣೆ ಮಾಡುತ್ತಿರುವುದು ನನಗೆ ಖುಷಿ ತಂದಿದೆ. ನಮ್ಮ ಕುಟುಂಬದಲ್ಲಿ ಹನುಮನ ಭಕ್ತರು ಇರೋದು ಒಳಿತಾಗಲಿದೆ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_02_21_EX_MINISTER_REDY_TEMPLE_RUN_7203310

KN_BLY_02g_21_EX_MINISTER_REDY_TEMPLE_RUN_7203310

KN_BLY_02h_21_EX_MINISTER_REDY_TEMPLE_RUN_7203310

KN_BLY_02i_21_EX_MINISTER_REDY_TEMPLE_RUN_7203310

KN_BLY_02j_21_EX_MINISTER_REDY_TEMPLE_RUN_7203310

KN_BLY_02k_21_EX_MINISTER_REDY_TEMPLE_RUN_7203310

KN_BLY_02l_21_EX_MINISTER_REDY_TEMPLE_RUN_7203310

KN_BLY_02m_21_EX_MINISTER_REDY_TEMPLE_BYTE_7203310

KN_BLY_02n_21_EX_MINISTER_REDY_TEMPLE_RUN_7203310

ETV Bharat Logo

Copyright © 2024 Ushodaya Enterprises Pvt. Ltd., All Rights Reserved.